ಹೊಟ್ಟೆ ಉಬ್ಬರದ ಸಮಸ್ಯೆಗೆ ಪರಿಹಾರಗಳು

ಬೆಂಗಳೂರು, ಶುಕ್ರವಾರ, 8 ಜೂನ್ 2018 (14:03 IST)

ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ಕಾಡುವಂತಹ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಕೆಲವೊಮ್ಮೆ ನಾವು ಅತಿಯಾಗಿ ತಿಂದಾಗ ಹೊಟ್ಟೆ ಉಬ್ಬರ ಕಂಡುಬರುತ್ತದೆ, ಆದರೆ ಕೆಲವೊಮ್ಮೆ ಕಡಿಮೆ ತಿಂದರೂ ಸಹ ಈ ಸಮಸ್ಯೆ ಕಂಡುಬರುತ್ತದೆ... ಹೀಗೇಕೆ ಎಂದು ಯೋಚಿಸುತ್ತೀರಾ? ಇಲ್ಲಿದೆ ವಿವರ.
1.  ಕಡಿಮೆ ನೀರು ಕುಡಿಯೋದು:
ಇತ್ತೀಚಿನ ದಿನದಲ್ಲಿ ಯಾವುದಕ್ಕೂ ಪುರುಸೊತ್ತೇ ಇರಲ್ಲ.. ಎಲ್ಲರೂ ಅವರವರ ಕೆಲಸದಲ್ಲಿ ನಿರತರಾಗಿರುತ್ತಾರೆ. ತುಂಬಾ ಜನ ನೀರನ್ನು ಕಡಿಮೆ ಕುಡಿಯುತ್ತಾರೆ. ಇದು ಹೊಟ್ಟೆ ಉಬ್ಬರಕ್ಕೆ ಮೂಲ ಕಾರಣವಾಗಿರುತ್ತದೆ. ಈ ಸಮಸ್ಯೆ ಇರುವವರು ಆಗಾಗ್ಗೆ ನೀರು ಕುಡಿಯುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅಲ್ಲದೆ ನೀರು ಹೆಚ್ಚು ಕುಡಿಯುವುದರಿಂದ ಜೀರ್ಣಕ್ರಿಯೆಗೂ ಸಹಾಯಕಾರಿಯಾಗಿರುತ್ತದೆ.
 
2. ಗಬ ಗಬ ಅಂತ ಗಡಿಬಿಡಿಲಿ ತಿನ್ನೋದು:
ಯಾವತ್ತೂ ಗಡಿಬಿಡಿಯಲ್ಲಿ ತಿನ್ನಬೇಡಿ, ಹೀಗೆ ಮಾಡಿದಾಗ ಗಾಳಿ ಹೊಟ್ಟೆ ಒಳಗೆ ಸೇರಿಕೊಂಡು ನಿಮ್ಮ ಹೊಟ್ಟೆ ಊದಿಕೊಳ್ಳುತ್ತದೆ. ಅಲ್ಲದೇ ಈ ಸಮಸ್ಯೆ ಇರುವವರು ಆಹಾರವನ್ನು ನಿಂತು ಸೇವನೆ ಕೂಡಾ ಮಾಡದಿರುವುದು ಉತ್ತಮ.
 
3. ಹೆಚ್ಚು ಒತ್ತಡದ ಜೀವನ:
ದೇಹಕ್ಕೆ ಒತ್ತಡವನ್ನು ಆದಷ್ಟು ಕಡಿಮೆ ಮಾಡಿಕೊಳ್ಳಲು ಯತ್ನಿಸಿ ಏಕೆಂದರೆ ದೇಹಕ್ಕೆ ಒತ್ತಡ ಹೆಚ್ಚಾದಂತೆ ನಾವು ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಇದರಿಂದ ಹೊಟ್ಟೆಯಲ್ಲಿ ಗ್ಯಾಸ್ ಜಾಸ್ತಿ ಆಗಿ ಹೊಟ್ಟೆ ಉಬ್ಬರಿಸುತ್ತೆ. ಹಾಗಾಗಿ ಸ್ವಲ್ಪ ಯೋಗ, ಧ್ಯಾನ, ವ್ಯಾಯಾಮವನ್ನು ನಿಮ್ಮ ದಿನನಿತ್ಯದ ಜೀವನದಲ್ಲಿ ರೂಢಿಸಿಕೊಳ್ಳಿ ಈ ಮೂಲಕ ಈ ಉಬ್ಬರ ಸಮಸ್ಯೆಯಿಂದ ಪಾರಾಗಬಹುದು.
 
4. ರಾತ್ರಿ ತಡವಾಗಿ ಊಟ ಮಾಡೋದು:
ರಾತ್ರಿ ತಡವಾಗಿ ಊಟ ಮಾಡಿದರೆ, ಊಟ ಮಾಡಿದ ತಕ್ಷಣ ಮಲಗಬೇಕಾಗುತ್ತದೆ. ಆಗ ಸರಿಯಾಗಿ ಜೀರ್ಣವಾಗುವುದಿಲ್ಲ. ಹೀಗಾಗಿ ಬೆಳಿಗ್ಗೆ ಹೊಟ್ಟೆ ಉಬ್ಬರಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಪ್ರತಿನಿತ್ಯ ನಿಗದಿತ ವೇಳೆಗೆ ಊಟ ಮಾಡುವುದನ್ನು ರೂಢಿಸಿಕೊಳ್ಳಿ ಅಲ್ಲದೇ ಊಟವಾದ ತಕ್ಷಣ ಮಲಗುವ ಅಭ್ಯಾಸವಿದ್ದಲ್ಲಿ ಅದನ್ನು ತ್ಯಜಿಸುವುದೇ ಸೂಕ್ತ
 
5. ಬಬಲ್ ಗಮ್ ಸೇವನೆ:
ಬಬಲ್ ಗಮ್ ತಿನ್ನುವುದರಿಂದ ಹೊಟ್ಟೆ ಉಬ್ಬರಿಸುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಬಬಲ್ ಗಮ್‌ನಲ್ಲಿರೋ ಸಕ್ಕರೆಯ ಅಂಶ (ಶುಗರ್ ಆಲ್ಕೋಹಾಲ್) ನಮ್ಮ ದೇಹದ ಜೀರ್ಣಕ್ರಿಯೆಗೆ ಹಾನಿ ಮಾಡುತ್ತದೆ. ಇದು ಹೊಟ್ಟೆ ಉಬ್ಬರದಿಂದ ಪ್ರಾರಂಭಿಸಿ ಅತಿಸಾರದ ಸಮಸ್ಯೆ ಸಹ ಉಂಟುಮಾಡಬಹುದು.
 
ನಿಯಮಿತ ಆಹಾರ ಸೇವನೆ, ಸರಿಯಾದ ಆಹಾರ ಕ್ರಮ ಮತ್ತು ಸ್ವಲ್ಪ ವ್ಯಾಯಾಮವನ್ನು ರೂಢಿಸಿಕೊಳ್ಳುವುದರ ಮೂಲಕ ಆರೋಗ್ಯಯುತ ಜೀವನವನ್ನು ನಿಮ್ಮದಾಗಿಸಿಕೊಳ್ಳಬಹುದು.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸೆಕ್ಸ್ ನಲ್ಲಿ ಪುರುಷರನ್ನು ಖುಷಿಪಡಿಸಲು ಸುಲಭ ಉಪಾಯ ಏನು ಗೊತ್ತಾ?!

ಬೆಂಗಳೂರು: ಪುರುಷ ಸಂಗಾತಿಯನ್ನು ಮಧು ಮಂಚದಲ್ಲಿ ಖುಷಿಪಡಿಸಲು ಏನು ಮಾಡಬೇಕು? ಕೆಲವು ಉಪಾಯಗಳು ಇಲ್ಲಿವೆ ...

news

ರುಚಿಯಾದ ಅಪ್ಪಿ ಪಾಯಸ ಮಾಡುವುದು ಹೇಗೆಂದು ಗೊತ್ತಾ….?

ಬೆಂಗಳೂರು: ಅಪ್ಪಿ ಪಾಯಸ ತಿನ್ನಲು ಬಲು ರುಚಿಕರವಾಗಿರುತ್ತದೆ. ವಿಶೇಷ ಸಂದರ್ಭಗಳಲ್ಲಿ ಈ ಪಾಯಸವನ್ನು ...

news

ಒತ್ತಡದ ಸಮಸ್ಯೆಗೆ ಬೈ ಹೇಳಿ..!!

ಈಗೀಗ ಹೆಚ್ಚಿನ ಜನರಲ್ಲಿ ಕಂಡುಬರುವ ಸಮಸ್ಯೆಗಳಲ್ಲಿ ಒತ್ತಡದ ಸಮಸ್ಯೆಯೂ ಒಂದು. ಹೆಚ್ಚಿನ ಜನರಿಗೆ ತಮಗೆ ಇರುವ ...

news

ಸಕ್ಕರೆ ಕಾಯಿಲೆಯ ಸಮಸ್ಯೆಗಳನ್ನು ತಪ್ಪಿಸುವ ಮಾರ್ಗಗಳು...

ಇತ್ತೀಚೆಗೆ ಡಯಾಬಿಟೀಸ್ ಅಥವಾ ಸಕ್ಕರೆ ಕಾಯಿಲೆಯು ಸರ್ವೇಸಾಮಾನ್ಯ ಎನ್ನುವಂತಾಗಿದೆ. ಸುಮಾರು 40 ವರ್ಷ ...

Widgets Magazine