ಹೆರಿಗೆಯ ನಂತರ ಸ್ಲಿಮ್ ಅಗಿ ಕಾಣಬೇಕೆ ಇಲ್ಲಿದೆ ನೋಡಿ ಒಂದಷ್ಟು ಸಿಂಪಲ್ ಟಿಪ್ಸ್

ಬೆಂಗಳೂರು, ಮಂಗಳವಾರ, 7 ಆಗಸ್ಟ್ 2018 (11:31 IST)

ಬೆಂಗಳೂರು: ಹೆರಿಗೆಯ ನಂತರ ಬಹುತೇಕ ಮಹಿಳೆಯರ ಒಂದು ದೊಡ್ಡ ಸಮಸ್ಯೆ ಎಂದರೆ ಮೈತೂಕ ಹೆಚ್ಚುವುದು. ಹಾರ್ಮೋನ್ ಗಳ ವ್ಯತ್ಯಾಸ ಮತ್ತು ಬಾಣಂತಿ ಸಮಯದಲ್ಲಿ ದೊರೆಯುವ ವಿಶೇಷ ಪೋಷಣೆಯಿಂದಾಗಿ ಮೈ ತೂಕ ಹೆಚ್ಚುವುದು. ಹೀಗೆ ಮೈ ತೂಕ ಹೆಚ್ಚಾದರೆ ಹೆಚ್ಚಿನವರು ತುಂಬಾ ತಲೆ ಕೆಡಿಸಿಕೊಂಡು ಏನೇನೋ ಸರ್ಕಸ್ ಮಾಡುವುದಕ್ಕೆ ಹೋಗುತ್ತಾರೆ. ಆದರೆ ಮಗುವಿಗೆ ಹಾಲೂಣಿಸುವುದರಿಂದ ಹೀಗೆಲ್ಲಾ ಮಾಡಬಾರದು. ಒಂದಷ್ಟು ಸರಳ ವ್ಯಾಯಾಮ, ಡಯೆಟ್ ಮಂತ್ರ ಪಾಲಿಸಿದರೆ ಹೆರಿಗೆಯ ನಂತರವೂ ನೀವು ಸ್ಲಿಮ್ ಹಾಗೂ ಫಿಟ್ ಆಗಿರಲು ಸಾಧ್ಯ.


ಕ್ರಾಷ್ ಡಯಟ್ ಮಾಡಬೇಡಿ, ಪ್ರೊಟೀನ್, ಕಾರ್ಬೋಹೈಡ್ರೇಟ್, ವಿಟಮಿನ್ಸ್ ಇರುವ ಆಹಾರವನ್ನು ತಿನ್ನಿ ಆಹಾರದಲ್ಲಿ ಪೋಷಕಾಂಶಗಳ ಸಮತೋಲನ ಕಾಪಾಡಿದರೆ ಆರೋಗ್ಯ ವೃದ್ಧಿಸುವುದು, ಸಮತೂಕದ ಮೈ ತೂಕ ನಿಮ್ಮದಾಗುವುದು.
ವ್ಯಾಯಾಮ ನಾರ್ಮಲ್ ಡೆಲಿವರಿ ಆದವರು 3 ತಿಂಗಳ ಬಳಿಕ, ಸಿಸೇರಿಯನ್ ಆದವರು 6 ತಿಂಗಳ ಬಳಿಕ ಮೆಲ್ಲನೆ ಲಘುವಾದ ವ್ಯಾಯಾಮ ಮಾಡಲು ಪ್ರಾರಂಭಿಸಬೇಕು.


ಮಗುವಿಗೆ ಎದೆ ಹಾಲು ಕೊಡುವುದರಿಂದ ಮಗುವಿಗೆ ಅಗತ್ಯವಾದ ಪೋಷಕಾಂಶ ದೊರೆಯುವುದು, ಎದೆ ಹಾಲುಣಿಸುವುದು ತಾಯಿಗೂ ಪ್ರಯೋಜನಕಾರಿ- ಮೈ ತೂಕವನ್ನು ಕಮ್ಮಿ ಮಾಡುತ್ತದೆ, ಸ್ತನ ಕ್ಯಾನ್ಸರ್ ಬರದಂತೆ ತಡೆಯುತ್ತದೆ.


ಮೊಸರಿನಿಂದ ತೂಕ ಹೆಚ್ಚಾಗುವುದು ಎಂಬುದು ಒಂದು ತಪ್ಪು ಕಲ್ಪನೆ. ಇದು ನೈಸರ್ಗಿಕವಾದ ತೂಕ ಕಡಿಮೆ ಮಾಡುವ ಉತ್ಪನ್ನವಾಗಿದೆ ಏಕೆಂದರೆ ಮೊಸರಿನಲ್ಲಿ ಕೊಬ್ಬು ಕರಗಿಸುವ ಕಿಣ್ವಗಳಿರುತ್ತದೆ(enzymes). ಹುದುಗಿನಿಂದ ಬಿಡುಗಡೆಯಾಗುವ ಉತ್ತಮ ಬ್ಯಾಕ್ಟೀರಿಯಗಳು ತೂಕ ಕಡಿಮೆ ಮಾಡಲು ಸಹಾಯವಾಗುತ್ತದೆ. ಊಟದ ಸಮಯದಲ್ಲಿ ಮೊಸರು ಸೇವಿಸಬಹುದು. 


ಸಾಕಷ್ಟು ನೀರು ಕುಡಿಯಬೇಕು, ಅದರಲ್ಲೂ ಊಟದ ಬಳಿಕ ಬಿಸಿ ನೀರು ಕುಡಿಯುವ ಅಭ್ಯಾಸ ಹೊಟ್ಟೆ ಕರಗಲು ಒಳ್ಳೆಯದು. ಬೆಳಗ್ಗೆ ಬಿಸಿ ನೀರಿಗೆ ಜೇನು ಮತ್ತು ನಿಂಬೆ ರಸ ಹಾಕಿ ಕುಡಿದರೆ ಮತ್ತಷ್ಟು ಒಳ್ಳೆಯದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಲೈಂಗಿಕ ಕ್ರಿಯೆ ವೇಳೆ ಮಹಿಳೆಯರ ಗುಪ್ತಾಂಗಕ್ಕೆ ಎದುರಾಗುವ ಅಪಾಯಗಳು!

ಬೆಂಗಳೂರು: ಲೈಂಗಿಕ ಕ್ರಿಯೆ ಎನ್ನುವುದು ದೇಹ, ಮನಸ್ಸಿನ ಉಲ್ಲಾಸಕ್ಕೆ ಎಷ್ಟು ಉತ್ತಮವೋ, ಇದರಿಂದ ಕೆಲವು ...

news

ಮುಖ ನಳನಳಿಸಬೇಕಾದರೆ ಇದನ್ನು ಬಳಸಿ ನೋಡಿ

ಬೆಂಗಳೂರು: ಹಾಗಾಲಕಾಯಿ ಎಂದರೆ ಮುಖ ಕಿವುಚುವವರೆ ಜಾಸ್ತಿ. ಇದನ್ನು ತಿಂದರೆ ಮಧುಮೇಹ ...

news

ನಿಮ್ಮ ಲೈಂಗಿಕ ಜೀವನ ಸುಖಮಯವಾಗಬೇಕಾದರೆ ಇವುಗಳನ್ನು ತಿನ್ನಿ

ಬೆಂಗಳೂರು: ನಾವು ತಿನ್ನುವ ಆಹಾರಕ್ಕೂ ನಿಮ್ಮ ಲೈಂಗಿಕ ಆಸಕ್ತಿಗೂ ಸಂಬಂಧವಿರುತ್ತದೆಯಂತೆ. ಕೆಲವೊಂದು ಆಹಾರ ...

news

ಆಕರ್ಷಕ ಮುಖ ನಿಮ್ಮದಾಗಬೇಕೆಂದರೆ ಈ ಟಿಪ್ಸ್ ಮಾಡಿ ನೋಡಿ

ಬೆಂಗಳೂರು: ಎಲ್ಲರಿಗೂ ತುಂಬಾ ಚೆನ್ನಾಗಿ ಕಾಣಬೇಕು ಎಂಬ ಹಂಬಲವಿರುತ್ತದೆ. ಆದರೆ ವಯಸ್ಸಾಗುತ್ತಾ ಬಂದಂತೆ ...

Widgets Magazine