Widgets Magazine
Widgets Magazine

ಲೈಂಗಿಕ ಜೀವನದಲ್ಲಿ ವಯಸ್ಸು ಬಹುಮುಖ್ಯ ಪಾತ್ರ ವಹಿಸುತ್ತದೆ: ಇಲ್ಲಿದೆ ಸಂಶೋಧನೆಯ ವರದಿ ..

ವಾಷಿಂಗ್ಟನ್, ಶನಿವಾರ, 26 ಆಗಸ್ಟ್ 2017 (18:12 IST)

Widgets Magazine

ಮಾನವನ ದಾಂಪತ್ಯ ಜೀವನದಲ್ಲಿ ಸೆಕ್ಸ್ ಬಹುಮುಖ್ಯ ಪಾತ್ರ ವಹಿಸುತ್ತದೆ. ವಯಸ್ಸಾದಂತೆ ಸೆಕ್ಸ್`ನಲ್ಲಿ ಬದಲಾವಣೆ ಕಂಡು ಬರುತ್ತದೆ. ಲೈಂಗಿಕ ಜೀವನದಲ್ಲಾಗುವ ಬದಲಾವಣೆ ಕುರಿತಂತೆ ಅಮೆರಿಕದ ಇಂಡಿಯಾನಾ ವಿಶ್ವವಿದ್ಯಾಲಯದ ಕಿಂನ್ ಸ್ಲೇ ಇನ್ಸ್`ಟಿಟ್ಯೂಟ್ ಫಾರ್ ರಿಸರ್ಚ್ ಇನ್ ಸೆಕ್ಸ್ ರಿಪ್ರೊಡಕ್ಷನ್ 10 ವರ್ಷಗಳ ಸುದೀರ್ಘ ಸಂಶೋಧನೆ ನಡೆಸಿ ವರದಿ ನೀಡಿದೆ.


ಯಾವ ಯಾವ ವಯಸ್ಸಿನಲ್ಲಿ ಲೈಂಗಿಕ ಸಾಮರ್ಥ್ಯ ಯಾವ ರೀತಿ ಇರುತ್ತದೆ ಎಂಬ ಬಗ್ಗೆ ಈ ಸಂಶೋಧನೆ ಮಾಹಿತಿ ಕಲೆ ಹಾಕಿದೆ. ಸಂಶೋಧನೆಯ ವರದಿ ದಿ ಜರ್ನಲ್ ಆಫ್ ಸೆಕ್ಸ್ ರಿಸರ್ಚ್`ನಲ್ಲಿ ಪ್ರಕಟವಾಗಿದೆ. ವಯಸ್ಸಾದಂತೆ ದೈಹಿಕ ಕಾರಣಗಳಿಂದಾಗಿ ಲೈಂಗಿಕ ಜೀವನದಲ್ಲಿ ಕುಸಿತವಾಗುವುದು ಈ ಸಂಶೋಧನೆಯಲ್ಲಿ ತಿಳಿದು ಬಂದಿದೆ.

30 ವರ್ಷದೊಳಗಿನ ದಂಪತಿ ವಾರಕ್ಕೆ ಎರಡೆರಡು ಬಾರಿ ಮತ್ತು ವರ್ಷಕ್ಕೆ 112ಕ್ಕಿಂತಲೂ ಅಧಿಕ ಬಾರಿ ಲೈಂಗಿಕ ಕ್ರಿಯೆಯಲ್ಲಿ ತಡಗುತ್ತಾರೆ. 30ರಿಂದ 39ವರ್ಷದೊಳಗಿನವರು ವಾರಕ್ಕೆ 1 ಅಥವಾ 2 ಬಾರಿ, ವರ್ಷಕ್ಕೆ 86 ಬಾರಿ ಸೆಕ್ಸ್ ಮಾಡುತ್ತಾರಂತೆ. 40ರಿಂದ 49ವರ್ಷ ವಯಸ್ಸಿನವರು ಕೇವಲ ವರ್ಷಕ್ಕೆ 69 ಬಾರಿ ಸಂಭೀಗದಲ್ಲಿ ತೊಡಗುತ್ತಾರಂತೆ. ಅಂದರೆ, 18-29 ವರ್ಷ ವಯಸ್ಸಿನವರಿಗಿಂತ ಅರ್ಧದಷ್ಟು.  

ಅಮೆರಿಕದ ವಿಜ್ಞಾನಿಗಳು 10 ವರ್ಷಗಳ ಕಾಲ 1170 ಮಂದಿಯನ್ನ ಎರಡೆರಡು ಬಾರಿ ಸಂದರ್ಶನ ಮಾಡಿ ಈ ವರದಿ ಸಿದ್ಧಪಡಿಸಿದ್ದಾರೆ. ಸಂಶೋಧನೆ ವೇಳೆ ಕೆಲ ವಯಸ್ಕರು ಸಹ ಅತೀ ಕಡಿಮೆ ಲೈಂಗಿಕ ಕ್ರಿಯೆ ನಡೆಸುವುದು ಮತ್ತು ವಯಸ್ಸಾದರೂ ಕೆಲವು ನಿಯಮಿತವಾಗಿ ಲೈಂಗಿಕ ಕ್ರಿಯೆಯಲಲಿ ತೊಡಗಿರುವ ಕಂಡುಬಮದಿದೆ. ಇ ಎಲ್ಲ ದತ್ತಾಂಶ ಸಂಗ್ರಹಿಸಿ ಒಟ್ಟಾರೆ ಸರಾಸರಿ ಅಂಕಿ ಅಂಶ ಕಲೆ ಹಾಕಲಾಗಿದೆ. ಬಹುತೇಕ ಎಲ್ಲರಲ್ಲೂ ವಯಸ್ಸು ಲೈಂಗಿಕ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಕಂಡು ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಸೊಳ್ಳೆ ಯಾಕೆ ನನ್ನನ್ನೇ ಹೆಚ್ಚು ಕಡಿಯೋದು ಯಾಕೆ?

ಬೆಂಗಳೂರು: ಹೀಗೊಂದು ಪ್ರಶ್ನೆಯನ್ನು ಎಲ್ಲರೂ ಕೇಳುತ್ತಾರೆ. ನನಗೇ ಹೆಚ್ಚು ಸೊಳ್ಳೆ ಕಡಿಯೋದು ಎಂದು ಎಲ್ಲರೂ ...

news

ಬೆಡ್ ಕಾಫಿ ಕುಡಿಯುತ್ತೀರಾ? ಹಾಗಿದ್ದರೆ ಈ ಸುದ್ದಿ ಓದಿ!

ಬೆಂಗಳೂರು: ಪ್ರತೀ ದಿನ ಬೆಳಗ್ಗೆ ಕಾಫಿ ಕುಡಿಯದೇ ನಿಮ್ಮ ದಿನ ಪ್ರಾರಂಭವಾಗುವುದಿಲ್ಲವೇ? ಹಾಗಿದ್ದರೆ ಈ ...

news

ಊಟವಾದ ಮೇಲೆ ಎಷ್ಟು ಹೊತ್ತಿನ ನಂತರ ಬ್ರಷ್ ಮಾಡಬೇಕು ಗೊತ್ತಾ?

ಬೆಂಗಳೂರು: ರಾತ್ರಿ ಊಟವಾದ ಮೇಲೆ ಮಲಗುವ ಮೊದಲು ಚೆನ್ನಾಗಿ ಬ್ರಷ್ ಮಾಡಿಕೊಂಡು ಮಲಗುವ ಅಭ್ಯಾಸ ಒಳ್ಳೆಯದು ...

news

ಸೆಕ್ಸ್ ಲೈಫ್ ಸುಧಾರಿಸಲು ಈ ಕೆಲಸ ಮಾಡಿ

ಬೆಂಗಳೂರು: ಒತ್ತಡದ ಜೀವನವೋ, ಸಂಗಾತಿ ಬಗೆಗಿನ ನಿರಾಸಕ್ತಿಯೋ ಒಟ್ಟಾರೆ ಲೈಂಗಿಕಾಸಕ್ತಿ ಕುಂದುತ್ತಿದೆ ...

Widgets Magazine Widgets Magazine Widgets Magazine