ಮೈಕ್ರೋವೇವ್ ಓವನ್ ನಲ್ಲಿ ಆಹಾರ ಬಿಸಿ ಮಾಡುತ್ತೀರಾ? ಹಾಗಿದ್ದರೆ ಹುಷಾರ್!

ಬೆಂಗಳೂರು, ಶನಿವಾರ, 28 ಅಕ್ಟೋಬರ್ 2017 (08:07 IST)

ಬೆಂಗಳೂರು: ತಣ್ಣಗಾಗಿದ್ದರೆ ಮೈಕ್ರೋವೇವ್ ಓವನ್ ಬಳಸಿ ಬಿಸಿ ಮಾಡಿ ಸೇವಿಸುತ್ತೇವೆ. ಆದರೆ ಹೀಗೆ ಮಾಡುವುದಕ್ಕಿಂತ ಮೊದಲು ಅದರಿಂದ ನಮ್ಮ ಆರೋಗ್ಯದ ಮೇಲೆ ಅದು ಎಂತಹಾ ಪರಿಣಾಮ ಬೀರುತ್ತದೆ ಎಂದು ನೋಡೋಣ.


 
ಮೈಕ್ರೋವೇವ್ ನ ಒಳಗೆ ಆಹಾರ ಇಟ್ಟು ಬಟನ್ ಒತ್ತಿದಾಗ ಅದು ಎಲೆಕ್ಟ್ರೋಮ್ಯಾಗ್ನೆಟಿಕ್ ರೇಡಿಯೇಷನ್ ಬಿಡುಗಡೆ ಮಾಡುತ್ತವೆ. ಇದರಲ್ಲಿ ಪ್ರತಿ ನಿಮಿಷಕ್ಕೆ 2,500 ಮೆಗಾಹರ್ಟ್ಸ್  ವೇಗದಲ್ಲಿ ವೈಬ್ರೇಟ್ ಆಗುತ್ತದೆ. ಇದು ಒಂದು ಮೊಬೈಲ್ ತರಂಗಾಂತರಗಳಿಗೆ ಸಮ.
 
ಈ ಓವನ್ ನಲ್ಲಿ ಬಿಸಿ ಮಾಡಿದ ಆಹಾರ ಸೇವಿಸುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತಗೊಳ್ಳುತ್ತದೆ. ಹುಟ್ಟು ವೈಕಲ್ಯಗಳು, ಕ್ಯಾನ್ಸರ್ ಸಾಧ್ಯತೆಯೂ ಇರುತ್ತದೆ. ಅಲ್ಲದೆ, ಮೈಕ್ರೋ ಓವನ್ ನಲ್ಲಿ ಅಧಿಕ ಸಮಯ ಆಹಾರ ಇಡುವುದರಿಂದ ಮೆದುಳಿಗೂ ತೊಂದರೆಯಾಗುತ್ತದೆ ಎಂದು ಸಂಶೋಧನೆಯೊಂದರಿಂದ ತಿಳಿದುಬಂದಿದೆ.
 
ಹಾಗಾಗಿ ಆದಷ್ಟು ಮೈಕ್ರೋ ಓವನ್ ನಲ್ಲಿ ಬಿಸಿ ಮಾಡುವ ಪದ್ಧತಿ  ಬಿಡುವುದು ಒಳ್ಳೆಯದು. ಒಂದು ವೇಳೆ ಅನಿವಾರ್ಯವಾದರೆ, ಬಿಸಿ ಮಾಡುವಾಗ ಅದನ್ನು ತಿರುವುದು, ಅಗತ್ಯಕ್ಕಿಂತ ಹೆಚ್ಚು ಸಮಯ ಬಿಸಿ ಮಾಡಲು ಇಡುವುದು ಮಾಡಬೇಡಿ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಮೈಕ್ರೋವೇವ್ ಓವನ್ ಆಹಾರ ಆರೋಗ್ಯ Food Health Microwave Oven

ಆರೋಗ್ಯ

news

ಗೋಡಂಬಿ ತಿನ್ನುವುದರ ಲಾಭವೇನು ಗೊತ್ತಾ?

ಬೆಂಗಳೂರು: ಗೋಡಂಬಿ ಕಾಳು ಸ್ವಲ್ಪ ದುಬಾರಿಯಾದರೂ ಎಲ್ಲರಿಗೂ ಇಷ್ಟ. ಇದರ ತಿನ್ನುವುದರಿಂದ ನಮ್ಮ ದೇಹಕ್ಕೆ ...

news

ಗರ್ಭಿಣಿ ಮಹಿಳೆಯರು ತುಪ್ಪ ತಿನ್ನುವುದು ಅನಿವಾರ್ಯವೇ?

ಬೆಂಗಳೂರು: ಗರ್ಭಿಣಿ ಮಹಿಳೆಯರಿಗೆ ಚೆನ್ನಾಗಿ ತಿನ್ನಬೇಕು ಎಂದು ಹಾಲು ತುಪ್ಪ, ಮೊಸರು ಹೇರಳವಾಗಿ ...

news

ಬಾಳೆ ಹಣ್ಣು ಕಪ್ಪಾಗದಂತೆ ತಡೆಯಲು ಈ ಉಪಾಯ ಮಾಡಿ

ಬೆಂಗಳೂರು: ಸಿಪ್ಪೆ ತೆಗೆದ ಬಾಳೆ ಹಣ್ಣು ಬಹುಬೇಗನೇ ಕಪ್ಪಗಾಗುತ್ತದೆ. ಅದು ಕಪ್ಪಗಾಗದಂತೆ ತಡೆಯಲು ಕೆಲವು ...

news

ಸೋಂಕಿನ ಗಾಯಕ್ಕೆ ಜೇನು ತುಪ್ಪ, ಚಕ್ಕೆಯ ಮದ್ದು

ಬೆಂಗಳೂರು: ಮನೆ ಮದ್ದು ನಮಗೆ ಹಲವು ರೀತಿಯಲ್ಲಿ ಉಪಯೋಗವಾಗುತ್ತದೆ. ಸಣ್ಣ ಪುಟ್ಟ ರೋಗಕ್ಕೆಲ್ಲಾ ವೈದ್ಯರ ...

Widgets Magazine