ರಾತ್ರಿ ಬೆಡ್ ಮೇಲೆ ಇದ್ದಾಗ ನಿಮ್ಮ ಸಂಗಾತಿಯ ಜೊತೆ ಈ ವಿಷಯವನ್ನು ಯಾವುದೇ ಕಾರಣಕ್ಕೂ ಚರ್ಚಿಸಬೇಡಿ

ಬೆಂಗಳೂರು, ಗುರುವಾರ, 4 ಜನವರಿ 2018 (07:46 IST)

ಬೆಂಗಳೂರು : ಇತ್ತಿಚಿನ  ದಿನಗಳಲ್ಲಿ ಗಂಡಹೆಂಡತಿ ಇಬ್ಬರು ಕೆಲಸಕ್ಕೆ  ಹೋಗುವುದರಿಂದ ಜೊತೆಯಾಗಿರಲು ಸಮಯವೇ ಸಿಗುವುದಿಲ್ಲ. ಆದರೆ ಅವರಿಗೆ ಸ್ವಲ್ಪ ಸಮಯ  ಸಿಗುವುದೇ ರಾತ್ರಿ ವೇಳೆ.  ಆ ಸಮಯದಲ್ಲಿ ನೀವು ನಿಮ್ಮ ಸಂಗಾತಿ ಜೊತೆಗೆ ಖುಷಿಯಾಗಿರಬೇಕೆ ವಿನಃ ಅವರ ಮನಸ್ಸಿಗೆ ಬೇಸರ ಮಾಡುವ ವಿಷಯಗಳನ್ನು ಚರ್ಚಿಸಬಾರದು. ಇದರಿಂದ ದಾಂಪತ್ಯ ಜೀವನದಲ್ಲಿ ಅನ್ಯೋನ್ಯತೆ ಇರುದೇ ಅದು ಹಾಳಾಗುತ್ತದೆ.


ನೀವು ನಮ್ಮ ಸಂಗಾತಿ ಜೊತೆ ಇರುವಾಗ ಈ ಐದು ವಿಷಯಗಳ ಬಗ್ಗೆ ಮಾತನಾಡಬಾರದು.ಅವು ಯಾವುದೆಂದರೆ-
ಮೊದಲನೇಯದಾಗಿ ರಾತ್ರಿ ಮಲಗುವ ವೇಳೆ ನಿಮ್ಮ ಸಂಗಾತಿಯೊಂದಿಗೆ ಅವರ ಹಿಂದಿನ ಮಾಜಿ ಪ್ರೇಮಿಗಳ ಬಗ್ಗೆ ಚರ್ಚಿಸಬಾರದು. ಇದನ್ನು ಅವರು ಇಷ್ಟಪಡುವುದಿಲ್ಲ. ಇದರಿಂದ ಅವರ ಮನಸ್ಸಿಗೆ ನೋವುಂಟಾಗುತ್ತದೆ.


ಎರಡನೇಯದಾಗಿ ನಿಮ್ಮ ಸಂಗಾತಿ ರೊಮ್ಯಾಂಟಿಕ್ ಮೂಡ್ ನಿಂದ ನಿಮ್ಮ ಬಳಿ ಬಂದಾಗ ಅವರ ಕೆಲಸದ ಬಗ್ಗೆ ಮಾತನಾಡಬಾರದು . ಇದರಿಂದ ಅವರ ಮೂಡ್ ಹಾಳಾಗಿ ನಿಮ್ಮ ಮೇಲೆ ಬೇಸರವುಂಟಾಗುತ್ತದೆ.


ಮೂರನೇಯದಾಗಿ ನಿಮ್ಮ ತಂದೆತಾಯಿ, ಅಕ್ಕತಂಗಿ, ಅಣ್ಣತಮ್ಮ ಹೀಗೆ ನಿಮ್ಮ ಕುಟುಂಬದಲ್ಲಿ ಯಾರಾದರೂ ನಿಮಗೆ ಇಷ್ಟವಾಗಿರಬಹುದು ಅವರ ಬಗ್ಗೆ ಆ ಸಮಯದಲ್ಲಿ ಮಾತನಾಡಬಾರದು.


ನಾಲ್ಕನೇಯದಾಗಿ ಗಂಡ ಹೆಂಡತಿ ಜಗಳ ಉಂಡು ಮಲಗುವವರೆಗೆ ಎನ್ನುವಂತೆ ಒಮ್ಮೆ ಜಗಳ ಮಾಡಿ ಮತ್ತೆ ಒಂದಾಗುತ್ತಾರೆ. ಹಿಂದೆ ನಡೆದುಹೋದ ಆ ಜಗಳಗಳ ಬಗ್ಗೆ ಆ ಸಮಯದಲ್ಲಿ ಮಾತನಾಡಬಾರದು.


ಐದನೇಯದಾಗಿ ನಿಮ್ಮ ಸಂಗಾತಿಯ ವ್ಯಕ್ತಿತ್ವದ ಬಗ್ಗೆ ಬೆಡ್ ಮೇಲಿರುವಾಗ ಮಾತನಾಡಬಾರದು. ಉದಾಹರಣೆಗೆ ನೀವು ದಪ್ಪವಾಗಿರುವಿರಿ, ಹೊಟ್ಟೆ ದಪ್ಪವಾಗಿದೆ ಮುಂತಾದ ವಿಷಯಗಳ ಬಗ್ಗೆ ಹೇಳಬಾರದು. ಇದರಿಂದ ಸಂಗಾತಿಗೆ  ಬೇಸರವಾಗುವ ಸಾಧ್ಯತೆ ಇದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಫಿಂಗರ್ ಚಿಪ್ಸ್ / ಫ್ರೆಂಚ್ ಫ್ರೈಸ್

ಆಲೂಗಡ್ಡೆಯನ್ನು ತೊಳೆದು ಸಿಪ್ಪೆ ತೆಗೆದು ಉದ್ದುದ್ದಕ್ಕೆ ಹೆಚ್ಚಿಕೊಳ್ಳಿ. ಇದನ್ನು ಫ್ರಿಜ್ ನೀರಿನಲ್ಲಿ 20 ...

news

ಸ್ವಾದಿಷ್ಠಕರವಾದ ಮೂಲಂಗಿ ಪರೋಟಾ

ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ, ಎಣ್ಣೆ ಬಿಸಿಯಾದಾಗ ಜೀರಿಗೆ ಮತ್ತು ಹಸಿ ಮೆಣಸಿನಕಾಯಿ ಹಾಕಿ ಹುರಿದುಕೊಳ್ಳಿ.

news

ಫುಡ್‌ ಪಾಯ್ಸನ್‌‌ಗೆ ಇದನ್ನು ಸೇವಿಸಿ

ನಿಮ್ಮ ಅಡುಗೆ ಮನೆಯಲ್ಲೇ ದೊರೆಯುವ ಈ ಔಷಧೀಯ ಪದಾರ್ಥಗಳನ್ನು ಬಳಸಿಕೊಂಡು ಫುಡ್ ಪಾಯಿಸನ್ ಆಹಾರ ವಿಷವಾಗುವಂತಹ ...

news

ಚಳಿಗಾಲದಲ್ಲಿ ಒಣ ತ್ವಚೆಯ ಆರೋಗ್ಯಕ್ಕಾಗಿ ಕೆಲವು ಮಾಹಿತಿ

ಚಳಿಗಾಲ ಬಂತೆಂದರೆ ಸಾಕು ಶುಷ್ಕ ತ್ವಚೆಯಿರುವವರ ಚರ್ಮ ಬಿರಿಯಲು ಪ್ರಾರಂಭವಾಗುತ್ತದೆ. ತುಟಿ ಸೀಳು ಬಿಟ್ಟು ...

Widgets Magazine