ರುಚಿಕರವಾದ ನಿಪ್ಪಟ್ಟು

ಬೆಂಗಳೂರು, ಸೋಮವಾರ, 8 ಅಕ್ಟೋಬರ್ 2018 (15:40 IST)


ನಿಪ್ಪಟ್ಟು ತಯಾರಿಸಲು ಬೇಕಾಗುವ ಸಾಮಗ್ರಿಗಳು :
 
* ಒಂದು ಬಟ್ಟಲು ಅಕ್ಕಿ ಹಿಟ್ಟು
* ಒಂದು ಬಟ್ಟಲು ಮೈದಾ ಹಿಟ್ಟು
* ಎರಡು ದೊಡ್ಡ ಚಮಚ ಹುರಿಗಡಲೆ ಹಿಟ್ಟು
* ಎರಡು ಚಮಚ ಕಡಲೆ ಹಿಟ್ಟು
* ಕರಿಬೇವಿನ ಸೊಪ್ಪು
* ಕಡ್ಲೆಕಾಯಿ ಬೀಜ
* ಬೇಕಾದಷ್ಟೇ ಹುರಿಗಡಲೆ
* ಸ್ವಲ್ಪ ಎಳ್ಳು
* ಖಾರದ ಪುಡಿ
* ರುಚಿಗೆ ತಕ್ಕಷ್ಟು ಉಪ್ಪು
 
ತಯಾರಿಸುವ ವಿಧಾನ :
 
  ಮೊದಲು ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಹುರಿಗಡಲೆ ಹಿಟ್ಟು, ಕಡ್ಲೆಕಾಯಿ ಬೀಜ, ಹುರಿಗಡಲೆ, ಕರಿಬೇವು, ಎಳ್ಳು, ಉಪ್ಪು, ಖಾರದ ಪುಡಿ ಮತ್ತು ಕಾಯಿಸಿದ 
 
ಎರಡು ಚಮಚ ಎಣ್ಣೆಯನ್ನು ಹಾಕಿ ಚೆನ್ನಾಗಿ ಬೆರೆಸಿಕೊಳ್ಳಬೇಕು. ನಂತರ ಅದಕ್ಕೆ ನೀರು ಹಾಕಿ ಕಲೆಸಿಕೊಳ್ಳಬೇಕು. ನಂತರ ಕಲೆಸಿದ ಹಿಟ್ಟನ್ನು ಗೋಲಿ 
 
ಗಾತ್ರದ ಉಂಡೆಗಳನ್ನು ಮಾಡಿಕೊಂಡು ಎಣ್ಣೆ ಸವರಿದ ಕವರ್ ಮೇಲೆ ಫಾಯಿಲ್ ಉಂಡೆಗಳನ್ನು ಸಣ್ಣ ಪೂರಿಯಂತೆ ಕೈಯಿಂದ ಅದುಮಿಕೊಂಡು ಪುಟ್ಟ 
 
ಪುಟ್ಟದಾಗಿ ತಟ್ಟಬೇಕು. ಆದರೆ ಸ್ವಲ್ಪ ದಪ್ಪ ಇರಬೇಕು. ನಂತರ ಕಾದಿರುವ ಎಣ್ಣೆಗೆ ಹಾಕಿ ಎರಡೂ ಬದಿಯಲ್ಲಿ ಬೇಯಿಸಿ ಹೊಂಬಣ್ಣ ಬರುವವರೆಗೆ 
 
ಕಾಯಿಸಿದರೆ ರುಚಿರುಚಿಯಾದ ನಿಪ್ಪಟ್ಟು ಸವಿಯಲು ಸಿದ್ಧ. ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮಲಾಯ್ ಕೋಫ್ತಾ ಮಾಡಿ ಸವಿಯಿರಿ...

ಮಲಾಯ್ ಕೋಫ್ತಾ ಒಂದು ಉತ್ತರ ಭಾರತದ ರೆಸಿಪಿಯಾಗಿದೆ. ಇದನ್ನು ಆಲೂಗಡ್ಡೆ ಮತ್ತು ಪನ್ನೀರ್‌ನಿಂದ ...

news

ರುಚಿರುಚಿಯಾದ ಪುಳಿಯೊಗರೆ ಮಾಡಿ ಸವಿಯಿರಿ...

ಪುಳಿಯೊಗರೆ ಸಾಮಾನ್ಯವಾಗಿ ದಕ್ಷಿಣ ಭಾರತದಲ್ಲಿ ಅದರಲ್ಲೂ ತಮಿಳುನಾಡಿನಲ್ಲಿ ಪ್ರಸಿದ್ಧವಾಗಿರುವ ಒಂದು ತಿಂಡಿ. ...

news

ನೀವೇ ಒಮ್ಮೆ ಟ್ರೈ ಮಾಡಿ ನೋಡಿ ಧಾರವಾಡ ಪೇಡಾ

ಧಾರವಾಡ ಪೇಡಾ ಅಂದರೆ ಬಾಯಿ ನೀರೂರುತ್ತದೆ ಅಲ್ಲವೇ.. ಅದರ ರುಚಿಯಿಂದಲೇ ಅದು ಪ್ರಸಿದ್ಧತೆಯನ್ನು ಹೊಂದಿದೆ. ಈ ...

news

ಆಲಿವ್ ಎಣ್ಣೆಯನ್ನು ಬಳಸುವುದರಿಂದಾಗುವ ಪ್ರಯೋಜನಗಳು

ಬಹುರಾಷ್ಟ್ರೀಯ ಪ್ರಖ್ಯಾತಿಯನ್ನು ಹೊಂದಿರುವ, ಹೆಂಗಳೆಯರ ಅಚ್ಚುಮೆಚ್ಚಿನ ಆಲಿವ್ ಎಣ್ಣೆಯು ಕೇವಲ ಅಡುಗೆಗಷ್ಟೇ ...

Widgets Magazine