ಧಾಬಾ ಶೈಲಿಯ ತವಾ ಚಿಕನ್‌

ಅತಿಥಾ 

ಬೆಂಗಳೂರು, ಬುಧವಾರ, 10 ಜನವರಿ 2018 (19:06 IST)

ಬೇಕಾಗುವ ಸಾಮಗ್ರಿಗಳು-
 
ಚಿಕನ್ ಬೇಯಿಸಿದ್ದು - 1/4 ಕೆಜಿ
ಈರುಳ್ಳಿ - 2
ಟೊಮ್ಯಾಟೊ - 2
ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 ಚಮಚ
ಅರಿಶಿನ -  1/2 ಚಮಚ
ಖಾರದ ಪುಡಿ - 1/2 ಚಮಚ
ಧನಿಯಾ ಪುಡಿ - 1/2 ಚಮಚ
ಗರಮ್ ಮಸಾಲ - ಸ್ವಲ್ಪ
ಮೆಂತ್ಯ - 2 ದೊಡ್ಡ ಚಮಚ
ತುಪ್ಪ - 2 ಚಮಚ
ಒಣಮೆಣಸಿನ ಕಾಯಿ - 2
ಕ್ಯಾಪ್ಸಿಕಮ್ - 1
ನಿಂಬೆರಸ - 1 ಚಮಚ
ತುಪ್ಪ - 2 ದೊಡ್ಡ ಚಮಚ
ಎಣ್ಣೆ - 1 ದೊಡ್ಡ ಚಮಚ
ಕೊತ್ತಂಬರಿ ಸೊಪ್ಪು -ಸ್ವಲ್ಪ
ಮಾಡುವ ವಿಧಾನ: 
 
-ಒಂದು ಟೊಮ್ಯಾಟೋ ಹಾಗೂ ಒಂದು ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಇನ್ನೊಂದು ಈರುಳ್ಳಿ ಹಾಗೂ ಟೊಮ್ಯಾಟೋವನ್ನು ದೊಡ್ಡದಾಗಿ ಹೆಚ್ಚಿಕೊಳ್ಳಿ. 
 
- ಈಗ ಬಾಣಲೆಯಲ್ಲಿ ಒಂದು ದೊಡ್ಡ ಚಮಚ ತುಪ್ಪ ಬಿಸಿಮಾಡಿ, ಮೆಂತ್ಯ, ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸಣ್ಣಗೆ ಹೆಚ್ಚಿದ ಟೊಮ್ಯಾಟೊ, ಉಪ್ಪು, ಚಿಕನ್, ಖಾರದ ಪುಡಿ, ಧನಿಯಾ ಪುಡಿ, ಅರಿಶಿನ, ಗರಮ್ ಮಸಾಲ ಸೇರಿಸಿ ಚೆನ್ನಾಗಿ ಬಾಡಿಸಿ. ಇದಕ್ಕೆ ದಪ್ಪಗೆ ಹೆಚ್ಚಿದ ಈರುಳ್ಳಿ,  ಕ್ಯಾಪ್ಸಿಕಮ್, ಟೊಮ್ಯಾಟೊ, ಒಣ ಮೆಣಸಿನ ಕಾಯಿಗಳನ್ನು ಸೇರಿಸಿ ಚೆನ್ನಾಗಿ ಫ್ರೈ ಮಾಡಿದರೆ ಧಾಬಾ ಶೈಲಿಯ ತವಾ ಚಿಕನ್‌ ರೆಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಕ್ಷಣಾರ್ಧದಲ್ಲಿ ಎಗ್‌ರೈಸ್ ಮಾಡಲು ಇಲ್ಲಿದೆ ಮಾಹಿತಿ

ಮೊದಲು ಅನ್ನ ಬೇಯಿಸಿಡಿ. - ಆಮೇಲೆ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಚಕ್ಕೆ, ಲವಂಗ, ಏಲಕ್ಕಿ, ಹೆಚ್ಚಿದ ...

news

ಆರೋಗ್ಯದ ವಿಷಯದಲ್ಲಿ ತುಪ್ಪದ ಪಾತ್ರ ಎಷ್ಟು ಮಹತ್ವದ್ದು ಗೊತ್ತಾ?

ಆರೋಗ್ಯದ ವಿಷಯ ಬಂದಾಗ ತುಪ್ಪ ಮಹತ್ವದ ಪಾತ್ರ ವಹಿಸುತ್ತದೆ. ತುಪ್ಪವನ್ನು ಕೇವಲ ರುಚಿ ಹೆಚ್ಚಸಲು ಅಷ್ಟೆ ...

news

ವೀರ್ಯಾಣು ಸಂಖ್ಯೆ ಹೆಚ್ಚಿಸಬೇಕಾದರೆ ಈ ಬಾಳೆಹಣ್ಣು ಸೇವಿಸಿ!

ಬೆಂಗಳೂರು: ಮಕ್ಕಳ ಬಗ್ಗೆ ಆಲೋಚನೆ ಮಾಡುತ್ತಿರುವ ದಂಪತಿ ತಮ್ಮ ಆಹಾರದಲ್ಲೂ ಬದಲಾವಣೆ ಮಾಡಿಕೊಳ್ಳುವುದು ...

news

ಕೆಟ್ಟ ಕನಸು ಬೀಳುವುದಕ್ಕೆ ಕಾರಣವೇನು? ಅದರಿಂದ ಹೊರಬರುವುದು ಹೇಗೆ ಗೊತ್ತಾ?

ಬೆಂಗಳೂರು: ರಾತ್ರಿ ಮಲಗುವಾಗ ಸ್ವೀಟ್ ಡ್ರೀಮ್ಸ್ ಎಂದು ಶುಭ ಹಾರೈಸುತ್ತೇವೆ. ಆದರೆ ಪ್ರತೀ ರಾತ್ರಿಯೂ ...

Widgets Magazine