ಹುಡುಗಿಯರೇ ದಪ್ಪನೆಯ ಕಪ್ಪನೆಯ ಹುಬ್ಬು ಬೇಕೆ...? ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು, ಶನಿವಾರ, 23 ಡಿಸೆಂಬರ್ 2017 (12:32 IST)

Widgets Magazine

ಬೆಂಗಳೂರು: ಹೆಣ್ಣು ಮಕ್ಕಳ ಮುಖದಲ್ಲಿ ಕಣ್ಣಿನ ಹುಬ್ಬು ದಪ್ಪವಾಗಿ ಕಪ್ಪಾಗಿ ಇರಬೇಕು. ಆಗ ಅವರ  ಮುಖಕ್ಕೆ ಒಂದು ಕಳೆಬರುತ್ತದೆ. ಕಣ್ಣಿನ ಹುಬ್ಬು ಚೆನ್ನಾಗಿಲ್ಲ ಅಂದರೆ ಮುಖದ ಅಂದ ಕೂಡ ಕೆಡುತ್ತದೆ. ಕೆಲವು ಹುಡುಗಿಯರ ಹುಬ್ಬಿನ ಕೂದಲು ತಳ್ಳಗೆ ಇದ್ದು ನೋಡಲು ಕಾಣಿಸುವುದಿಲ್ಲ.ಅಂತವರು ತಮ್ಮ ಕಣ್ಣಿನ ಹುಬ್ಬು ಕಪ್ಪಾಗಿ, ದಪ್ಪವಾಗಿ ಬೆಳೆಯಬೇಕೆಂದರೆ ಹೀಗೆ ಮಾಡಿ.


ಸ್ವಲ್ಪ ಹರಳೆಣ್ಣೆಯನ್ನು ಹತ್ತಿಯಿಂದ ತೆಗೆದುಕೊಂಡು ಹುಬ್ಬಿನ ಮೇಲೆ ಮಸಾಜ್ ಮಾಡಿ ಇದರಿಂದ ಅಲ್ಲಿ ರಕ್ತಸಂಚಾರ ಹೆಚ್ಚಾಗುತ್ತದೆ. ಅದನ್ನು ರಾತ್ರಿ ಹಾಗೆ ಇಟ್ಟುಕೊಂಡು ಮಲಗಿ ಬೆಳಿಗ್ಗೆ ತೊಳೆಯಿರಿ. ಹರಳೆಣ್ಣೆಯಲ್ಲಿ ಪ್ರೋಟಿನ್, ವಿಟಮಿನ್ ಹಾಗು ಆಂಟಿ ಆಕ್ಸಿಡೆಂಟ್ ಹೆಚ್ಚಾಗಿ ಇರುವುದರಿಂದ ಇದು ಕೂದಲು ಬೆಳೆಯಲು ಸಹಕರಿಸುತ್ತದೆ.


ಕೊಬ್ಬರಿ ಎಣ್ಣೆಯನ್ನು ಹತ್ತಿಯಿಂದ ತೆಗೆದುಕೊಂಡು ಹುಬ್ಬಿನ ಮೇಲೆ ಮಸಾಜ್ ಮಾಡಿ ರಾತ್ರಿ ಹಾಗೆ ಇಟ್ಟುಕೊಂಡು ಮಲಗಿ ಬೆಳಿಗ್ಗೆ ತೊಳೆಯಿರಿ.ಇದರಲ್ಲಿ ಪ್ರೋಟಿನ್ ಹಾಗು ವಿಟಮಿನ್ ಇ ಇರುವುದರಿಂದ  ಇದು ಕೂಡ ಕೂದಲು ವೇಗವಾಗಿ ಬೆಳೆಯಲು ಸಹಾಯಕವಾಗಿದೆ. ಇದನ್ನು 2 ತಿಂಗಳುಗಳ ಕಾಲ ಪ್ರತಿದಿನ ಮಾಡಿ. ಹಾಗೆ ಈರುಳ್ಳಿಯ ರಸವನ್ನು ಹತ್ತಿಯಿಂದ ತೆಗೆದುಕೊಂಡು ಹುಬ್ಬಿನ ಮೇಲೆ 5-10 ನಿಮಿಷ ಮಸಾಜ್ ಮಾಡಿ ಒಣಗಿದ ಮೇಲೆ ತೊಳೆಯಿರಿ. ಹೀಗೆ ದಿನ ಮಾಡಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಹುಬ್ಬು ದಪ್ಪ ಕಪ್ಪು ಬೆಳವಣಿಗೆ ರಾತ್ರಿ ಕೊಬ್ಬರಿ ಎಣ್ಣೆ ಹುಡುಗಿಯರು ಚೆಂದ ಕಣ್ಣು Eyebrow Black Dark Growth Night Girls Beauty Eyes Coconut Oil

Widgets Magazine

ಆರೋಗ್ಯ

news

ಕಿಡ್ನಿಯಲ್ಲಿರುವ ಕಲ್ಲು ಕರಗಬೇಕಾ…? ಇಲ್ಲಿದೆ ನೋಡಿ ಸುಲಭ ಉಪಾಯ

ಬೆಂಗಳೂರು: ಮನುಷ್ಯರಿಗೆ ಬರುವ ರೋಗಗಳಲ್ಲಿ ಕಿಡ್ನಿಯಲ್ಲಿ ಕಲ್ಲಾಗುವುದು ಒಂದು. ಅದರ ನೋವು ಎಷ್ಟು ...

news

ಇಂತಹ ವ್ಯಕ್ತಿಗಳ ಜೊತೆ ಸೆಕ್ಸ್ ಮಾಡಲೇಬೇಡಿ

ಬೆಂಗಳೂರು: ಪ್ರತಿಯೊಬ್ಬರು ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಆ ವ್ಯಕ್ತಿಯ ಪೂರ್ವಾಪರ ಎಲ್ಲವನ್ನು ...

news

ಚಹಾಕ್ಕೆ ಹಾಲು ಮಿಕ್ಸ್ ಮಾಡಬಹುದೇ?!

ಬೆಂಗಳೂರು: ಸಾಮಾನ್ಯವಾಗಿ ಚಹಾ ತಯಾರಿಸುವಾಗ ಹಾಲು ಸೇರಿಸಲು ಮರೆಯುವುದೇ ಇಲ್ಲ. ಆದರೆ ಚಹಾಕ್ಕೆ ಹಾಲು ...

news

ಹಾಸಿಗೆ ಪಕ್ಕ ಮೊಬೈಲ್ ಇಟ್ಟುಕೊಂಡು ತಪ್ಪಿಯೂ ಮಲಗಬೇಡಿ!

ಬೆಂಗಳೂರು: ಒಂದು ಹೊತ್ತಿನ ಊಟವಿಲ್ಲದಿದ್ದರೂ ಸರಿಯೇ. ಮೊಬೈಲ್ ಇಲ್ಲದೇ ನಡೆಯದು ಎನ್ನುವ ಕಾಲವಿದು. ...

Widgets Magazine