ಬೆವರಿನ ವಾಸನೆಯನ್ನು ತೊಲಗಿಸಲು ಹೀಗೆ ಮಾಡಿ

ಬೆಂಗಳೂರು, ಗುರುವಾರ, 28 ಡಿಸೆಂಬರ್ 2017 (10:21 IST)

ಬೆಂಗಳೂರು: ಬೆವರಿನಿಂದ ದೇಹದಲ್ಲಿ ಕೆಟ್ಟ ವಾಸನೆ ಬರುವುದು ಸಹಜ. ಕೆಲವರ ಬೆವರಿನ ವಾಸನೆ ಅಕ್ಕ ಪಕ್ಕ ಇರುವವರು ಮೂಗು ಮುಚ್ಚಿಕೊಳ್ಳುವಂತೆ ಮಾಡುತ್ತದೆ. ಅದಕ್ಕಾಗಿ ಕೆಲವರು ಅನೇಕ ರೀತಿಯ ಸುಗಂಧ ದ್ರವ್ಯಗಳನ್ನು ಬಳಸುತ್ತಾರೆ. ಇದರಿಂದ ಅಲರ್ಜಿಯಾಗುವ ಸಂಭವವಿರುತ್ತದೆ. ಹಾಗಾಗಿ ಸುಗಂಧ ದ್ರವ್ಯಗಳನ್ನು ಬಳಸದೆ ಬೆವರಿನ ವಾಸನೆಯನ್ನು ಹೋಗಲಾಡಿಸಲು ಈ ವಿಧಾನ ಅನುಸರಿಸಿ.


ಶ್ರೀಗಂಧವನ್ನು ತೇದಿ ಅಥವಾ ಅದರ ಪುಡಿಯಿಂದ ಪೇಸ್ಟ ಮಾಡಿಕೊಂಡು ಕಂಕುಳ ಭಾಗಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಸ್ನಾನ ಮಾಡಿ. ಅಥವಾ ನಿಂಬೆರಸವನ್ನು ಹತ್ತಿಯ ಸಹಾಯದಿಂದ ಕಂಕುಳ ಭಾಗಕ್ಕೆ ಹಚ್ಚಿ ಒಣಗಿದ ಮೇಲೆ ಸ್ನಾನ ಮಾಡಿ. ಇದರಿಂದ ಬೆವರಿನ ವಾಸನೆ ಬರುವುದಿಲ್ಲ.


1 ಚಮಚ ಮಸೂರ್ ದಾಲ್ ಪುಡಿಗೆ 6 ಚಮಚ ನಿಂಬೆರಸ ಬೇರೆಸಿ ಪೇಸ್ಟ್ ಮಾಡಿ ಕಂಕುಳ ಭಾಗಕ್ಕೆ ಹಚ್ಚಿ 10 ನಿಮಿಷ ಬಿಟ್ಟು ಸ್ನಾನ ಮಾಡಿ. ಇದು ಬೆವರಿನಿಂದ ಬರುವ ವಾಸನೆಯನ್ನು ತಡೆಯುತ್ತದೆ. ಸ್ನಾನ ಮಾಡುವ ನೀರಿಗೆ ಒಂದು ಚಮಚ ಕರ್ಪೂರ ಎಣ್ಣೆ ಮಿಕ್ಸ್ ಮಾಡಿ ಸ್ನಾನ ಮಾಡುವುದರಿಂದ ಬೆವರಿನ ದುರ್ವಾಸನೆ ಹಾಗು ಬ್ಯಾಕ್ಟಿರಿಯಾಗಳಿಂದ ಮುಕ್ತಿ ಸಿಗುತ್ತದೆ. ನೀರಿಗೆ ಪುದೀನಾ ಅಥವಾ ತುಳಸಿ ರಸ ಹಾಕಿ ಸ್ನಾನ ಮಾಡುವುದರಿಂದ ದೇಹದ ದುರ್ಗಂಧ ತೊಲಗುತ್ತದೆ. ಕಹಿ ಬೇವಿನ ಎಲೆ ಪೇಸ್ಟ್ ಮಾಡಿ ಕಂಕುಳಿಗೆ ಹಚ್ಚಿ ಸ್ನಾನ ಮಾಡಿದರೂ ಕೂಡ ಬೆವರಿನ ವಾಸನೆ ಹೋಗುತ್ತದೆ. 2 ಚಮಚ ಬೇಕಿಂಗ್ ಸೋಡಕ್ಕೆ 2 ಚಮಚ ನಿಂಬೆರಸ ಸೇರಿಸಿ ಮಿಕ್ಸ್ ಮಾಡಿ ಕಂಕುಳಿಗೆ ಹಚ್ಚಿ 5 ನಿಮಿಷ ಬಿಟ್ಟು ಸ್ನಾನ ಮಾಡಿ. ಹೀಗೆ ಮಾಡುವುದರಿಂದ ಬೆವರಿನ ವಾಸನೆಯಿಂದ ಮುಕ್ತಿ ಸಿಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಕಾಮಾಲೆ ರೊಗಕ್ಕೆ ಇಲ್ಲಿದೆ ನೋಡಿ ಸುಲಭ ಪರಿಹಾರ

ಬೆಂಗಳೂರು: ಮನುಷ್ಯನಿಗೆ ಬರುವ ರೋಗಗಳಲ್ಲಿ ಕಾಮಾಲೆ ರೋಗವು ಒಂದು. ಇದು ಒಂದು ಮಾರಣಾಂತಿಕ ರೋಗವಾಗಿದ್ದು, ...

news

ಈ ಸ್ಥಳಗಳಲ್ಲಿ ಸೆಕ್ಸ್ ಮಾಡಿದರೆ ಅಪಾಯ ಗ್ಯಾರಂಟಿ!

ಬೆಂಗಳೂರು: ಈಗಿನ ಕಾಲದಲ್ಲಿ ಕೆಲವರು ಸೆಕ್ಸ್ ನ ಬಗ್ಗೆ ಜಾಗ್ರತರಾಗಿದ್ದರೆ ಇನ್ನೂ ಕೆಲವರು ಸೆಕ್ಸ ಅನ್ನು ...

news

ಗ್ರೀನ್ ಟೀ ಯಾವಾಗ ಮತ್ತು ಎಷ್ಟು ಕುಡಿಯಬೇಕು ಎಂದು ನಿಮಗೆ ಅಂದಾಜಿದೆಯೇ?

ಬೆಂಗಳೂರು: ಗ್ರೀನ್ ಟೀ ನಮ್ಮ ಆರೋಗ್ಯಕ್ಕೆ ಎಲ್ಲಾ ರೀತಿಯಿಂದಲೂ ಒಳ್ಳೆಯದು ಎಂದು ನಮಗೆ ಗೊತ್ತು. ಆದರೆ ...

news

ಮಿಲನಕ್ರಿಯೆಗೆ ಮೊದಲು ಮಹಿಳೆಯರು ಇದನ್ನು ಹೇಳಲು ಮರೆಯಬೇಡಿ!

ಬೆಂಗಳೂರು: ಸೆಕ್ಸ್ ವಿಚಾರಕ್ಕೆ ಬಂದರೆ ಮಹಿಳೆಯರಿಗೆ ಸಂಕೋಚ ಜಾಸ್ತಿ. ಆದರೆ ಯಾವುದನ್ನೂ ಬಾಯಿಬಿಟ್ಟು ...

Widgets Magazine
Widgets Magazine