ನಿಮ್ಮ ಅಚ್ಚುಮೆಚ್ಚಿನ ಟೂತ್‌ಪೇಸ್ಟ್‌ ಕ್ಯಾನ್ಸರ್ ಉಂಟುಮಾಡುತ್ತೆ, ನಿಮ್ಗೆ ಗೊತ್ತಾ?

ಬೆಂಗಳೂರು, ಭಾನುವಾರ, 24 ಡಿಸೆಂಬರ್ 2017 (17:13 IST)

Widgets Magazine

ಎಚ್ಚರ! ನಿಮ್ಮ ಅಚ್ಚುಮೆಚ್ಚಿನ ಟೂತ್‌ಪೇಸ್ಟ್ ಕಾನ್ಸರ್ ಉಂಟುಮಾಡುವ ನಿಕೋಟಿನ್‌ನಿಂದ ಲೇಪಿತವಾಗಿರುವ ಸಾಧ್ಯತೆಯಿದೆ. ಔಷಧಿ ವಿಜ್ಞಾನ ಮತ್ತು ಸಂಶೋಧನೆಯ ದೆಹಲಿ ಸಂಸ್ಥೆಯ ಅಧ್ಯಯನವೊಂದು ಅನೇಕ ಟೂತ್‌ಪೇಸ್ಟ್ ತಯಾರಕರು ಟೂತ್‌ಪೇಸ್ಟ್‌ಗಳು ಮತ್ತು ಹಲ್ಲುಪುಡಿಗಳಿಗೆ ಅಧಿಕ ಪ್ರಮಾಣದ ನಿಕೋಟಿನ್ ಕಲಬೆರಕೆ ಮಾಡುತ್ತಿರುವುನ್ನು ಪತ್ತೆಹಚ್ಚಿದೆ.

2011ರಲ್ಲಿ ಅಧ್ಯಯನ ಮಾಡಿದ 24 ಬ್ರಾಂಡ್‌ಗಳ ಟೂತ್‌ಪೇಸ್ಟ್‌ಗಳ ಪೈಕಿ, ಏಳು ಬ್ರಾಂಡ್‌ಗಳಾದ ಕಾಲ್ಗೇಟ್ ಹರ್ಬಲ್, ಹಿಮಾಲಯಾ, ನೀಮ್ ಪೇಸ್ಟ್, ನೀಮ್ ತುಲಸಿ, ಆರ್‌ಎ ಥರ್ಮೋಸೀಲ್, ಸೆನ್ಸೋಫಾರ್ಮ್ ಮತ್ತು ಸ್ಟೋಲೈನ್ ಟೂತ್‌ಪೇಸ್ಟ್‌ಗಳಲ್ಲಿ ನಿಕೋಟಿನ್ ಅಂಶವನ್ನು ಹೊಂದಿರುವುದು ಪತ್ತೆಯಾಗಿದೆ. 
 
ಆಶ್ಚರ್ಯಕರ ಸಂಗತಿಯೆಂದರೆ ಕಾಲ್ಗೇಟ್ ಹರ್ಬಲ್ ಮತ್ತು ನೀಮ್ ತುಳಸಿ ಇವು ಗಿಡಮೂಲಿಕೆ ಉತ್ಪನ್ನಗಳಾಗಿದ್ದು ಇವುಗಳಲ್ಲಿ ಕೂಡ ತಲಾ 18 ಮತ್ತು 10 ಎಂಜಿ ನಿಕೋಟಿನ್ ಹೊಂದಿವೆ. ಇವು 9 ಮತ್ತು 5 ಸಿಗರೇಟುಗಳಲ್ಲಿ ಕಂಡುಬರುವ ನಿಕೋಟಿನ್ ಪ್ರಮಾಣಕ್ಕೆ ಸಮನಾಗಿವೆ ಎಂದು ಪ್ರೊ. ಅಗರವಾಲ್ ಹೇಳಿದ್ದಾರೆ.

ಪರೀಕ್ಷೆ ಮಾಡಿದ ಹಲ್ಲುಪುಡಿಗಳ ಪೈಕಿ, ಆರು ಹಲ್ಲುಪುಡಿಗಳಾದ ಡಾಬರ್ ರೆಡ್, ವೀಕೋ, ಮುಸಾಕಾ ಗುಲ್, ಪಯೋಕಿಲ್, ಉನಾಡೆಂಟ್ ಮತ್ತು ಅಲ್ಕಾ ದಂತಮಂಜನ್ ನಿಕೋಟಿನ್ ಹೊಂದಿರುವುದು ಪತ್ತೆಯಾಗಿದೆ. ಪಯೋಕಿಲ್ ಅತ್ಯಧಿಕ 16 ಎಂಜಿ ತಂಬಾಕನ್ನು ಹೊಂದಿದೆ. ವ್ಯಕ್ತಿಯೊಬ್ಬ 8 ಸಿಗರೇಟುಗಳನ್ನು ಸೇದಿದ ಬಳಿಕ ಸೇವಿಸುವ ತಂಬಾಕಿಗೆ ಇದು ಸಮನಾಗಿದೆ ಎಂದು ಅಗರವಾಲ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಟೂತ್‌‍ಪೇಸ್ಟ್ ಆರೋಗ್ಯ ಹೆಲ್ತ್ ಟಿಪ್ಸ್ ಆರೋಗ್ಯ ಸಲಹೆಗಳು Toothpaste Health Health Tips

Widgets Magazine

ಆರೋಗ್ಯ

news

ಔಷಧೀಯ ಗುಣಗಳನ್ನು ಹೊಂದಿರುವ ತುಳಸಿ

ಭಾರತೀಯ ಸಂಸ್ಕೃತಿಯಲ್ಲಿ ತುಳಸಿಯ ಪಾತ್ರ ಮಹತ್ವದ್ದು. ತುಳಸಿಕಟ್ಟೆಯನ್ನು ಹೊಂದಿರದ ಹಿಂದೂಗಳ ಮನೆಯೇ ಇಲ್ಲ. ...

news

ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯೂ ಇದೆ ರುದ್ರಾಕ್ಷಿಗೆ!

ರುದ್ರಾಕ್ಷಿಗೂ ಧಾರ್ಮಿಕತೆಗೂ ನಂಟು ಹೆಚ್ಚು. ಹಿಂದೂ ಧರ್ಮದ ಜೊತೆಗೆ ಥಳುಕು ಹಾಕಿಕೊಂಡಿರುವ ...

news

ಮಹಿಳೆಯರಿಗೊಂದು ಹೊಸ ವಯಾಗ್ರ?

ಖಿನ್ನತೆಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿರುವ ಫ್ಲಿಬನ್‌ಸೆರಿನ್ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿಯನ್ನು ...

news

ನೀವೂ ಇಂಟರ್ನೆಟ್ ಚಟದ ದಾಸರೇ? ನಿಮ್ಮ ಆರೋಗ್ಯದ ಮೇಲೆ ಏನಾಗುತ್ತೆ ಗೊತ್ತಾ?

ಇಂಟರ್ನೆಟ್ ಎಂಬುದು ಚಟವಾಗಿ ಮಾರ್ಪಟ್ಟರೆ ಅದರಿಂದಾಗುವ ಅನಾಹುತಗಳೇನು ಎಂಬ ಬಗೆಗೀಗ ಚಿಂತಿಸಲಾಗುತ್ತಿದೆ. ...

Widgets Magazine