ನಿಮ್ಮ ಅಚ್ಚುಮೆಚ್ಚಿನ ಟೂತ್‌ಪೇಸ್ಟ್‌ ಕ್ಯಾನ್ಸರ್ ಉಂಟುಮಾಡುತ್ತೆ, ನಿಮ್ಗೆ ಗೊತ್ತಾ?

ಬೆಂಗಳೂರು, ಶನಿವಾರ, 30 ಡಿಸೆಂಬರ್ 2017 (14:23 IST)

ಎಚ್ಚರ! ನಿಮ್ಮ ಅಚ್ಚುಮೆಚ್ಚಿನ ಟೂತ್‌ಪೇಸ್ಟ್ ಕಾನ್ಸರ್ ಉಂಟುಮಾಡುವ ನಿಕೋಟಿನ್‌ನಿಂದ ಲೇಪಿತವಾಗಿರುವ ಸಾಧ್ಯತೆಯಿದೆ. ಔಷಧಿ ವಿಜ್ಞಾನ ಮತ್ತು ಸಂಶೋಧನೆಯ ದೆಹಲಿ ಸಂಸ್ಥೆಯ ಅಧ್ಯಯನವೊಂದು ಅನೇಕ ಟೂತ್‌ಪೇಸ್ಟ್ ತಯಾರಕರು ಟೂತ್‌ಪೇಸ್ಟ್‌ಗಳು ಮತ್ತು ಹಲ್ಲುಪುಡಿಗಳಿಗೆ ಅಧಿಕ ಪ್ರಮಾಣದ ನಿಕೋಟಿನ್ ಕಲಬೆರಕೆ ಮಾಡುತ್ತಿರುವುನ್ನು ಪತ್ತೆಹಚ್ಚಿದೆ.

2011ರಲ್ಲಿ ಅಧ್ಯಯನ ಮಾಡಿದ 24 ಬ್ರಾಂಡ್‌ಗಳ ಟೂತ್‌ಪೇಸ್ಟ್‌ಗಳ ಪೈಕಿ, ಏಳು ಬ್ರಾಂಡ್‌ಗಳಾದ ಕಾಲ್ಗೇಟ್ ಹರ್ಬಲ್, ಹಿಮಾಲಯಾ, ನೀಮ್ ಪೇಸ್ಟ್, ನೀಮ್ ತುಲಸಿ, ಆರ್‌ಎ ಥರ್ಮೋಸೀಲ್, ಸೆನ್ಸೋಫಾರ್ಮ್ ಮತ್ತು ಸ್ಟೋಲೈನ್ ಟೂತ್‌ಪೇಸ್ಟ್‌ಗಳಲ್ಲಿ ನಿಕೋಟಿನ್ ಅಂಶವನ್ನು ಹೊಂದಿರುವುದು ಪತ್ತೆಯಾಗಿದೆ. 
 
ಆಶ್ಚರ್ಯಕರ ಸಂಗತಿಯೆಂದರೆ ಕಾಲ್ಗೇಟ್ ಹರ್ಬಲ್ ಮತ್ತು ನೀಮ್ ತುಳಸಿ ಇವು ಗಿಡಮೂಲಿಕೆ ಉತ್ಪನ್ನಗಳಾಗಿದ್ದು ಇವುಗಳಲ್ಲಿ ಕೂಡ ತಲಾ 18 ಮತ್ತು 10 ಎಂಜಿ ನಿಕೋಟಿನ್ ಹೊಂದಿವೆ. ಇವು 9 ಮತ್ತು 5 ಸಿಗರೇಟುಗಳಲ್ಲಿ ಕಂಡುಬರುವ ನಿಕೋಟಿನ್ ಪ್ರಮಾಣಕ್ಕೆ ಸಮನಾಗಿವೆ ಎಂದು ಪ್ರೊ. ಅಗರವಾಲ್ ಹೇಳಿದ್ದಾರೆ. ಪರೀಕ್ಷೆ ಮಾಡಿದ ಹಲ್ಲುಪುಡಿಗಳ ಪೈಕಿ, ಆರು ಹಲ್ಲುಪುಡಿಗಳಾದ ಡಾಬರ್ ರೆಡ್, ವೀಕೋ, ಮುಸಾಕಾ ಗುಲ್, ಪಯೋಕಿಲ್, ಉನಾಡೆಂಟ್ ಮತ್ತು ಅಲ್ಕಾ ದಂತಮಂಜನ್ ನಿಕೋಟಿನ್ ಹೊಂದಿರುವುದು ಪತ್ತೆಯಾಗಿದೆ. ಪಯೋಕಿಲ್ ಅತ್ಯಧಿಕ 16 ಎಂಜಿ ತಂಬಾಕನ್ನು ಹೊಂದಿದೆ. ವ್ಯಕ್ತಿಯೊಬ್ಬ 8 ಸಿಗರೇಟುಗಳನ್ನು ಸೇದಿದ ಬಳಿಕ ಸೇವಿಸುವ ತಂಬಾಕಿಗೆ ಇದು ಸಮನಾಗಿದೆ ಎಂದು ಅಗರವಾಲ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಕಾಮಾತುರಾಣಾಂ ನ ಭಯಂ ನ ಲಜ್ಜಾ

ಕಾಮ ಅಂದರೆ ಹಿಂಗೆ ಕಣ್ರೀ ಮನುಷ್ಯನನ್ನು ಏನೆಲ್ಲ ಮಾಡಿಸುತ್ತೆ ? ಹೆಣ್ಣಿಗಾಗಿ ಸತ್ತವರು ಕೋಟಿ, ಮಣ್ಣಿಗಾಗಿ ...

news

ನಿಮ್ಮ ಮೆದುಳು ಚುರುಕಾಗಬೇಕೇ, ಇಲ್ಲಿದೆ 8 ವಿಧಾನಗಳು

ನೀವು ಇತರರಿಗಿಂತ ಬುದ್ಧಿವಂತರಾಗಬೇಕು ಎಂಬ ಅಭಿಲಾಷೆ ಇಲ್ಲವೇ? ಆದರೆ ವಯಸ್ಸು ಏರುತ್ತಿದ್ದಂತೆ ನಮ್ಮ ...

news

ಸೆಕ್ಸ್ ನಿಂದ ಆರೋಗ್ಯಕ್ಕೆ ಈ ಲಾಭ ಗ್ಯಾರಂಟಿ!

ಬೆಂಗಳೂರು: ಸೆಕ್ಸ್ ಎನ್ನುವುದು ಕೇವಲ ದೈಹಿಕ ಕಾಮನೆಗಳನ್ನು ಪೂರೈಸುವ ಪ್ರಕ್ರಿಯೆ ಮಾತ್ರವಲ್ಲ. ಈ ಬೆಡ್ ರೂಂ ...

news

ಯಾವುದೇ ಖರ್ಚಿಲ್ಲದೇ ಮನೆಯಲ್ಲೇ ಸುಲಭವಾಗಿ ಕೂದಲಿಗೆ ಕಲರ್ ನೀಡಿ

ಬೆಂಗಳೂರು: ಕೂದಲಿಗೆ ಕಲರ್ ಮಾಡಲು ಮಾರುಕಟ್ಟೆಯಲ್ಲಿ ಅನೇಕ ರೀತಿಯ ಬ್ಯೂಟಿ ಪ್ರೊಡಕ್ಟ್ ಗಳು ಸಿಗುತ್ತವೆ. ...

Widgets Magazine
Widgets Magazine