ಕರಿದ ತಿಂಡಿಗಳಿಂದ ಎಣ್ಣೆಯನ್ನು ತೆಗೆಯಲು ನ್ಯೂಸ್ ಪೇಪರ್ ಗಳನ್ನು ಬಳಸುತ್ತಿದ್ದೀರಾ. ಹಾಗಾದ್ರೆ ನಿಮಗೆ ಅಪಾಯ ಗ್ಯಾರಂಟಿ!

ಬೆಂಗಳೂರು, ಮಂಗಳವಾರ, 17 ಏಪ್ರಿಲ್ 2018 (15:50 IST)

ಬೆಂಗಳೂರು : ಬೋಂಡಾ, ಬಜ್ಜಿ ಇನ್ಯಾವುದೇ ಕರಿದ ತಿಂಡಿಗಳಲಿರಲಿ, ಅದರಲ್ಲಿರುವ ಅಧಿಕ ಎಣ್ಣೆಯನ್ನು ತೆಗೆಯಲು ನಾವು ಸಾಧಾರಣವಾಗಿ ಸುದ್ದಿ ಪತ್ರಿಕೆಯನ್ನು ಬಳಸುತ್ತೇವೆ. ಸುಲಭವಾಗಿ ಕೈಗೆ ಸಿಗುವ ಸುದ್ದಿ ಪತ್ರಿಕೆಯ ತುಂಡೊಂದರ ನಡುವೆ ತಿಂಡಿಯನ್ನಿಟ್ಟು ಅದರಲ್ಲಿದ್ದ ಎಣ್ಣೆಯನ್ನು ಹೀರುವಂತೆ ಮಾಡುತ್ತೇವೆ. ಈ ರೀತಿ ನೀವು ಮಾಡುತ್ತಿದ್ದರೆ ಗಮನಿಸಿ, ತಿಂಡಿಗಳಿಂದ ಯಾವತ್ತೂ ಎಣ್ಣೆಯನ್ನು ಹೀರುವುದಕ್ಕಾಗಿ ಸುದ್ದಿಪತ್ರಿಕೆಗಳನ್ನು ಬಳಸಲೇ ಬೇಡಿ. ಇದು ನಿಮ್ಮ ಆರೋಗ್ಯದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದಕ್ಕೆ ಇಲ್ಲಿದೆ ಕಾರಣ.


*ಸುದ್ದಿಪತ್ರಿಕೆಗಳಲ್ಲಿ ಬಳಸಲ್ಪಡುವ ಶಾಯಿ ದೇಹಕ್ಕೆ ಹಾನಿಕಾರಕ. ತಿಂಡಿಗಳಿಂದ ಎಣ್ಣೆ ತೆಗೆಯಲು ಪತ್ರಿಕೆಗಳನ್ನು ಬಳಸಿದಾಗ ಆ ಶಾಯಿ ತಿಂಡಿಗೆ ಅಂಟಿಕೊಳ್ಳುತ್ತದೆ. ತಿಂಡಿಯ ಮೂಲಕ ಶಾಯಿ ಕೂಡಾ ನಮ್ಮ ದೇಹದೊಳಗೆ ಹೋಗುತ್ತದೆ. ಇದು ಕ್ಯಾನ್ಸರ್‌ನ್ನು ಉಂಟು ಮಾಡಬಲ್ಲದು.

*ಸುದ್ದಿಪತ್ರಿಕೆಗಳಲ್ಲಿ ಗ್ರಾಫೈಟ್ ಅಂಶವಿದೆ. ಇದು ವಿಷಕಾರಿಯಾಗಿದ್ದು ಕಿಡ್ನಿ ಮತ್ತು ಶ್ವಾಸಕೋಶಕ್ಕೆ ತೊಂದರೆಯನ್ನುಂಟು ಮಾಡುತ್ತದೆ.

*ಇಂಥಾ ವಿಷಕಾರಿ ವಸ್ತುಗಳು ನಮಗೆ ಗೊತ್ತಿಲ್ಲದೆಯೇ ನಮ್ಮ ಹೊಟ್ಟೆಯೊಳಗೆ ಸೇರುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವುದಲ್ಲದೆ, ಹಾರ್ಮೋನ್‌ಗಳ ಮೇಲೆಯೂ ಇದು ಪರಿಣಾಮ ಬೀರುತ್ತದೆ.

ಇಂತಹ ತಿಂಡಿಗಳಿಂದ ಎಣ್ಣೆಯನ್ನು ತೆಗೆಯಲೇ ಬೇಕು ಎಂದಿದ್ದರೆ ಸುದ್ದಿ ಪತ್ರಿಕೆಯ ಬದಲು ಟಿಶ್ಯೂ ಪೇಪರ್‌ಗಳನ್ನು ಬಳಸಿ. ಬಿಳಿ ಖಾಲಿ ಹಾಳೆಗಳನ್ನು ಬಳಸಿ, ಆದರೆ ಯಾವತ್ತೂ ಪ್ರಿಂಟ್ ಇರುವ ಪೇಪರ್‌ಗಳನ್ನು ಬಳಸಲೇ ಬೇಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮೂಗಿನಲ್ಲಿ ರಕ್ತಸ್ರಾವವಾಗುವುದನ್ನು ತಡೆಯಲು ಇಲ್ಲಿದೆ ಪರಿಹಾರ

ಬೆಂಗಳೂರು : ಬೇಸಿಗೆಕಾಲ ಹಲವೊಂದು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದರಲ್ಲಿ ಮೂಗಿನಲ್ಲಿ ಕಂಡುಬರುವ ...

news

ಊಟವಾದ ಬಳಿಕ ಸೋಂಪು ತಿನ್ನುವುದರಿಂದ ಏನಾಗುತ್ತದೆ ಗೊತ್ತಾ…?

ಬೆಂಗಳೂರು : ಊಟವಾದ ಬಳಿಕ ಬಡೆಸೊಪ್ (ಸೋಂಪು)ತಿನ್ನುವುದು ಅನಾದಿಕಾಲದಿಂದಲೂ ಬಂದ ಪದ್ಧತಿ. ಈ ಜಂಕ್ ಫುಡ್ ...

news

ಹೆರಿಗೆ ನಂತರ ಕೂದಲು ತುಂಬಾನೇ ಉದುರುತ್ತಿದೆಯಾ? ಹಾಗಾದ್ರೆ ಇಲ್ಲಿದೆ ನೋಡಿ ಇದಕ್ಕೆ ಪರಿಹಾರ

ಬೆಂಗಳೂರು : ಹೆಚ್ಚಿನ ಮಹಿಳೆಯರಿಗೆ ಡೆಲಿವರಿ ನಂತರ ಕೂದಲು ಉದುರುವ ಸಮಸ್ಯೆ ಕಂಡುಬರುತ್ತದೆ. ತಾಯಿಯಲ್ಲಿ ...

news

ಪ್ರೆಗ್ನೆಂಟ್ ಸಮಯದಲ್ಲಿ ಹುಳಿ ತಿಂದರೆ ಒಳ್ಳೆಯದೇ?

ಬೆಂಗಳೂರು : ಗರ್ಭಿಣೆಯರು ಹೆಚ್ಚಾಗಿ ಹುಳಿ ತಿನ್ನಲೂ ಇಷ್ಟಪಡುತ್ತಾರೆ. ಅದರಲ್ಲೂ ಹುಣಸೆಹಣ್ಣು ಎಂದರೆ ಬಹಳ ...

Widgets Magazine
Widgets Magazine