ಸುಂದರ ಹಲ್ಲು ನಿಮ್ಮದಾಗಬೇಕೇ? ಹೀಗೆ ಮಾಡಿ!

Bangalore, ಮಂಗಳವಾರ, 21 ಮಾರ್ಚ್ 2017 (10:31 IST)

Widgets Magazine

ಬೆಂಗಳೂರು: ಹಲ್ಲು ಮತ್ತು ಬಾಯಿಯ ಚೆನ್ನಾಗಿದ್ದಷ್ಟು ಒಳ್ಳೆಯದು. ಎದುರಿಗಿದ್ದವರೂ ಸುರಕ್ಷಿತವಾಗಿರಬಹುದು! ಬಾಯಿ ಆರೋಗ್ಯವಾಗಿರಲು ಏನೆಲ್ಲಾ ಮಾಡಬೇಕು? ನೋಡೋಣ.


 
 
ಥ್ರೆಡ್ಡಿಂಗ್
 
 
ನಾವು ಎಷ್ಟೇ ಚೆನ್ನಾಗಿ ಬ್ರಷ್ ಮಾಡಿದರೂ, ಕೆಲವೊಮ್ಮೆ ಬ್ರಷ್ ತಲುಪದ ಜಾಗದಲ್ಲಿ ತುಣುಕುಗಳು ಸೇರಿಕೊಂಡು ಕೆಟ್ಟ ವಾಸನೆಗೆ ಕಾರಣವಾಗುತ್ತದೆ. ಅದಕ್ಕೆ ದಿನಕ್ಕೊಮ್ಮೆ ಶುಚಿಯಾದ ನೂಲು ಬಳಸಿ ಬಾಯಿಯ ಮೂಲೆಯನ್ನೂ ಸ್ವಚ್ಛ ಮಾಡಿ.
 
 
ಎಣ್ಣೆ ಬಳಕೆ
 
 
ಹಿಂದಿನ ಕಾಲದವರು, ಬೆಳಿಗ್ಗೆ ಎದ್ದ ತಕ್ಷಣ ಬಾಯಿಗೆ ಎಣ್ಣೆ ಹಾಕಿಕೊಂಡು ಸ್ವಲ್ಪ ಹೊತ್ತು ಇಟ್ಟುಕೊಳ್ಳುವುದನ್ನು ನೋಡಿರಬಹುದು. ಶುದ್ಧವಾದ ಕೊಬ್ಬರಿ ಎಣ್ಣೆ ಬಾಯಿಗೆ ಹಾಕಿಕೊಂಡು ಸ್ವಲ್ಪ ಹೊತ್ತು ಇಟ್ಟುಕೊಳ್ಳುವುದರಿಂದ, ವಸಡು ಗಟ್ಟಿಯಾಗುತ್ತದೆ.
 
 
ನಾಲಿಗೆ ಶುಚಿ ಮಾಡಿ
 
ನಾಲಿಗೆಯಲ್ಲಿರುವ ಬಿಳಿ ಪದರವನ್ನು ತೆಗೆಯುವ ಅಭ್ಯಾಸ ಮಾಡಿಕೊಳ್ಳಿ. ಪ್ರತಿನಿತ್ಯ ಹೀಗೆ ಮಾಡುತ್ತಿದ್ದರೆ, ಆಹಾರ ರುಚಿ ಬೇಗ ನಾಲಿಗೆ ಹತ್ತುವುದಲ್ಲದೆ, ಬಾಯಿ ವಾಸನೆಯಿಂದಲೂ ಮುಕ್ತಿ ಪಡೆಯಬಹುದು.
 
 
 
ಸರಿಯಾಗಿ ಬ್ರಷ್ ಮಾಡಿ
 
 
ಅರ್ಜೆಂಟಾಗಿ ಹೇಗೆ ಹೇಗೋ ಬ್ರಷ್ ಮಾಡುವುದನ್ನು ಬಿಡಿ. ನಿಧಾನವಾಗಿ ಎಲ್ಲಾ ಹಲ್ಲುಗಳಿಗೆ ತಲುಪುವಂತೆ ಮೇಲಿನಿಂದ ಕೆಳಕ್ಕೆ ಬ್ರಷ್ ಮಾಡಿ.
 
 
ನೀರು ಕುಡಿಯಿರಿ
 
ಸಾಕಷ್ಟು ನೀರು ಕುಡಿಯುವುದು ಎಲ್ಲಾ ರೀತಿಯಿಂದಲೂ ಆರೋಗ್ಯಕ್ಕೆ ಒಳ್ಳೆಯದು. ಜಾಸ್ತಿ ನೀರು ಕುಡಿಯುವುದರಿಂದ ಜೊಲ್ಲು ರಸ ಹೆಚ್ಚು ಉತ್ಪತ್ತಿಯಾಗುತ್ತದೆ. ಇದರಿಂದ ಹಲ್ಲು ತೂತು ಬೀಳುವುದು ತಪ್ಪುತ್ತದೆ ಮತ್ತು ಸುಲಭವಾಗಿ ಆಹಾರ ಜೀರ್ಣವಾಗುತ್ತದೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಬೇಸಿಗೆಯಲ್ಲಿ ಚರ್ಮದ ಕಾಂತಿ ಉಳಿಸಲು ಏನು ಮಾಡಬೇಕು?

ಬೆಂಗಳೂರು: ಬೇಸಿಗೆ ಬಂತು. ಹೊರಗಡೆ ಕಾಲಿಟ್ಟರೆ, ಸುಡುವ ಸೂರ್ಯ ಸುಂದರ ಚರ್ಮ ಹಾಳು ಮಾಡುತ್ತಾನೆ. ಚರ್ಮ ...

news

ಸಾಮಾನ್ಯ ರೋಗಕ್ಕೆ ಕೆಲವು ಮನೆ ಮದ್ದುಗಳು

ಬೆಂಗಳೂರು: ಕೆಲವು ಸಣ್ಣ ಪುಟ್ಟ ಸಮಸ್ಯೆಗಳಿಗೆ ವೈದ್ಯರ ಬಳಿ ಹೋಗಬೇಕಾಗಿಲ್ಲ. ನಮ್ಮ ಮನೆಯಲ್ಲೇ ಸಿಗುವ ...

news

ಕಲ್ಲಂಗಡಿ ಹಣ್ಣಿನ ಬೀಜದ ಗುಣ ಗೊತ್ತಾದರೆ ನೀವು ಬಿಸಾಕಲ್ಲ!

ಬೆಂಗಳೂರು: ಕಲ್ಲಂಗಡಿ ಹಣ್ಣು ತಿನ್ನುವಾಗ ಅದರ ಬೀಜವನ್ನು ಉಗಿದು ಬಿಡುತ್ತೇವೆ. ಆದರೆ ಅದು ನೀಡುವ ಆರೋಗ್ಯಕರ ...

news

ನಮ್ಮ ಅಡುಗೆ ಮನೆಯಲ್ಲೇ ಇದೆ ರೋಗನಿರೋಧಕ ಶಕ್ತಿಗಳು!

ಬೆಂಗಳೂರು: ಆಂಟಿ ಬಯೋಟಿಕ್ಸ್ ತೆಗೆದುಕೊಳ್ಳುವ ಬದಲು ನಮ್ಮ ಅಡುಗೆ ಮನೆಯಲ್ಲೇ ಸಿಗುವ ಆರೋಗ್ಯಕರ ರೋಗನಿರೋಧಕ ...

Widgets Magazine Widgets Magazine