ಧೂಮಪಾನ ಚಟ ಬಿಡಬೇಕೇ? ಹಾಗಿದ್ದರೆ ಇಲ್ಲಿದೆ ಸುಲಭ ಉಪಾಯ!

ಬೆಂಗಳೂರು, ಸೋಮವಾರ, 8 ಜನವರಿ 2018 (08:50 IST)

ಬೆಂಗಳೂರು: ಚಟಕ್ಕೆ ಬಿದ್ದರೆ ಬಿಡುವುದು ಅಷ್ಟು ಸುಲಭವಲ್ಲ. ಆದರೆ ಆರೋಗ್ಯದ ದೃಷ್ಟಿಯಿಂದ ಬಿಡಲೇಬೇಕೆಂದರೆ ಈ ಅಭ್ಯಾಸದಿಂದ ಹೊರಬರಲು ಇಲ್ಲಿದೆ ಕೆಲವು ಉಪಾಯಗಳು.
 

ಹಾಲು ಕುಡಿಯಿರಿ!
ಧೂಮಪಾನ ಮಾಡಬೇಕೆನಿಸಿದಾಗ ಕೈಯಲ್ಲಿ ಸದಾ ಒಂದು ಲೋಟ ಹಾಲು ಇಟ್ಟುಕೊಂಡಿರಿ. ಆಗಾಗ ಕೊಂಚ ಕೊಂಚವೇ ಸಿಪ್ ಮಾಡುತ್ತಾ ಸೇವಿಸುತ್ತಿರಿ. ಅಧ್ಯಯನವೊಂದರ ಪ್ರಕಾರ ಸಿಗರೇಟ್ ಸೇದಿದ ತಕ್ಷಣ ಹಾಲು ಕುಡಿದರೆ ಆಗ ಅನುಭವವಾಗುವ ಕಹಿ ರುಚಿಯಿಂದಾಗಿ ಮತ್ತೆಂದೂ ಸಿಗರೇಟ್ ಸೇದಬೇಕೆಂದು ಅನಿಸುವುದಿಲ್ಲವಂತೆ!
 
ಸಕ್ಕರೆ ರಹಿತ ಚ್ಯುಯಿಂಗ್ ಗಮ್ ಜಗಿಯಿರಿ
ಧೂಮಪಾನ ಮಾಡಬೇಕೆನಿಸಿದಾಗ ಬಾಯಿಗೆ ಶುಗರ್ ಫ್ರೀ ಚ್ಯುಯಿಂಗ್ ಗಮ್ ಹಾಕಿಕೊಂಡು ಜಗಿಯುತ್ತಿರಿ. ಇದರಿಂದ ಧೂಮಪಾನ ಮಾಡುವ ಚಟ ಕಡಿಮೆಯಾಗುತ್ತದೆ.
 
ಉಪ್ಪಿನಂಶದ ಸೇವನೆ
ಸಿಗರೇಟ್ ಸೇದಬೇಕೆಂದು ಅನಿಸಿದಾಗ ಅತೀ ಹೆಚ್ಚು ಉಪ್ಪು ಅಂಶವಿರುವ ಆಹಾರ ಸೇವಿಸಿ. ತಜ್ಞರ ಪ್ರಕಾರ ಉಪ್ಪಿಗೆ ಸಿಗರೇಟ್ ಸೇದುವ ಚಟವನ್ನು ಕಡಿಮೆ ಮಾಡುವ ಗುಣವಿದೆಯಂತೆ.
 
ವಿಟಮಿನ್ ಸಿ ಆಹಾರ
ವಿಟಮಿನ್ ಸಿ ಅಂಶದ ಕೊರತೆಯಿಂದ ಸಿಗರೇಟ್ ಸೇದಬೇಕೆಂಬ ಹಂಬಲ ನಿಮ್ಮ ಮನಸ್ಸಿಗೆ ಆಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಾಗಾಗಿ ಸಿಗರೇಟ್ ಸೇದಬೇಕೆಂದು ಬಲವಾಗಿ ಮನಸ್ಸಿಗೆ ಬಂದಾಗ ಕಿತ್ತಳೆ, ನಿಂಬೆ ಹಣ್ಣು, ಸೀಬೆಕಾಯಿಯಂತಹ ವಿಟಮಿನ್ ಸಿ ಅಂಶ ಹೇರಳವಾಗಿರುವ ಹಣ್ಣುಗಳನ್ನು ಸೇವಿಸಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಪಾನ ಪ್ರಿಯರಿಗೆ ಶಾಕ್ ನೀಡಲಿದೆ ಈ ವರದಿ!

ಬೆಂಗಳೂರು: ಮದ್ಯಪಾನದಿಂದ ಹಲವು ರೋಗಗಳಿಗೆ ಕಾರಣ ಎಂದು ಈ ಹಿಂದೆ ಹಲವು ಅಧ್ಯಯನ ವರದಿಗಳಿಂದ ತಿಳಿದುಬಂದಿದೆ. ...

news

ಸನ್ ಬರ್ನ್ ನಿಂದ ಕೈಕಾಲು ಬೆನ್ನ ಮೇಲಿನ ಸ್ಕಿನ್ ಕಳೆಗುಂದಿದ್ದರೆ ಈ ವಿಧಾನ ಬಳಸಿ

ಬೆಂಗಳೂರು : ಧೂಳು , ಸನ್ ಬರ್ನ್ ಗಳಿಂದ ಕೈಕಾಲು ಹಾಗು ಬೆನ್ನುನ ಮೇಲಿನ ಸ್ಕಿನ್ ತುಂಬಾ ಡಲ್ ಆಗಿ ...

news

ಮಕ್ಕಳು ರಾತ್ರಿ ನಿದ್ರಿಸುವಾಗ ಹಾಸಿಗೆ ಮೇಲೆ ಮೂತ್ರ ಮಾಡುತ್ತಾರಾ...? ಇಲ್ಲಿದೆ ನೋಡಿ ಇದಕ್ಕೆ ಪರಿಹಾರ

ಬೆಂಗಳೂರು : ಚಿಕ್ಕ ಮಕ್ಕಳು ರಾತ್ರಿ ಮಲಗಿದಾಗ ಹಾಸಿಗೆ ಮೇಲೆ ಮೂತ್ರ ಮಾಡುವುದು ಸಾಮಾನ್ಯವಾದ ವಿಷಯ. ಆದರೆ ...

news

ನಿರಂತರ ಹಾಗೂ ರಫ್ ಸೆಕ್ಸ್ ನಿಂದ ಯೋನಿಯಲ್ಲಿ ನೋವು ಕಾಣಿಸಿಕೊಂಡಿದ್ದರೆ ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು : ಸೆಕ್ಸ್ ಮಾಡಿದ ನಂತರ ಯೋನಿಯಲ್ಲಿ ಉರಿ ಉಂಟಾಗುತ್ತದೆ. ಯೋನಿ ಒಂದು ಸೂಕ್ಷ್ಮವಾದ ಅಂಗವಾಗಿದ್ದು, ...

Widgets Magazine
Widgets Magazine