ನಿಮ್ಮ ಮಗುವಿನ ತ್ವಚೆ ಹೊಳೆಯಬೇಕಾ...? ಹಾಗಾದ್ರೆ ಈ ಎಣ್ಣೆಗಳನ್ನು ಕಾಲಕ್ಕೆ ತಕ್ಕಂತೆ ಬಳಸಿ

ಬೆಂಗಳೂರು, ಗುರುವಾರ, 18 ಜನವರಿ 2018 (11:20 IST)

ಬೆಂಗಳೂರು : ಮಗುವಿನ ತ್ವಚೆ ತುಂಬಾ ಕೋಮಲವಾಗಿದ್ದು, ನಾಜೂಕಾಗಿರುತ್ತದೆ. ಮಗುವಿನ ತ್ವಚೆಯ ಆರೈಕೆಯಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಸಮಸ್ಯೆಗಳುಂಟಾಗುತ್ತದೆ. ಆದ್ದರಿಂದ ಮಗುವಿನ ತ್ವಚೆಯ ಬಗ್ಗೆ ತಾಯಿ ತುಂಬಾ ಎಚ್ಚರವಹಿಸಬೇಕಾಗುತ್ತದೆ. ಆಯಾ ಸೀಸನ್ ಗೆ ತಕ್ಕಂತೆ ಎಣ್ಣೆಗಳನ್ನು ಹಚ್ಚಿ ಮಾಡಿಸುವುದರಿಂದ ಮಗುವಿನ ತ್ವಚೆಗೆ ಯಾವ ಸಮಸ್ಯೆಗಳಾಗದೆ ಹೊಳಪಿನಿಂದ ಕೂಡಿರುತ್ತದೆ.. ಆದ್ದರಿಂದ ಮೊದಲು ತಾಯಂದಿರು ಯಾವ ಸೀಸನ್ ನಲ್ಲಿ ಯಾವ ಎಣ್ಣೆಯನ್ನು ಮಗುವಿಗೆ ಹಚ್ಚಿದರೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.

 
ಮಗುವಿಗೆ ಚಳಿಗಾಲ ಹಾಗು ಮಳೆಗಾಲದಲ್ಲಿ ಎಣ್ಣೆ ಸ್ನಾನ ಮಾಡಿಸುವಾಗ ಆಲೀವ್ ಆಯಿಲ್, ಬಾದಾಮಿ ಎಣ್ಣೆ ಅಥವಾ ಸಾಸಿವೆ ಎಣ್ಣೆ, ಇವು ಮೂರರಲ್ಲಿ ಯಾವುದಾದರೂ ಒಂದನ್ನು ಸ್ವಲ್ಪ ಉಗುರು ಬೆಚ್ಚಗೆ ಮಾಡಿಕೊಂಡು ಹಚ್ಚಿ 1 ಗಂಟೆ ಬಿಟ್ಟು ಸ್ನಾನ ಮಾಡಿದರೆ ತುಂಬಾ ಒಳ್ಳೆಯದು. ಇದರಿಂದ ಮಗುವಿನ ತ್ವಚೆ ಹೊಳಪಿನಿಂದ ಕೂಡಿರುತ್ತದೆ.


 
ಬೇಸಿಗೆ ಕಾಲದಲ್ಲಿ ಮಗುವಿಗೆ ಎಣ್ಣೆ ಸ್ನಾನ ಮಾಡಿಸುವಾಗ ಕೊಬ್ಬರಿ ಎಣ್ಣೆ, ಹರಳೆಣ್ಣೆ ಅಥವಾ ಎಳ್ಳೆಣ್ಣೆ ಇವು ಮೂರರಲ್ಲಿ ಯಾವುದಾದರೂ ಒಂದನ್ನು ಸ್ವಲ್ಪ ಉಗುರು ಬೆಚ್ಚಗೆ ಮಾಡಿಕೊಂಡು ಹಚ್ಚಿ1 ಗಂಟೆ ಬಿಟ್ಟು ಸ್ನಾನ ಮಾಡಿಸಿ. ಇದು ಕೂಡ ಮಗುವಿನ ತ್ವಚೆಗೆ ತುಂಬಾ ಒಳ್ಳೆಯದು .ಆದರೆ ಈ ಎಲ್ಲಾ ಎಣ್ಣೆಗಳು 100% ಶುದ್ದವಾಗಿದೆಯೇ ಎಂದು ನೋಡಿಕೊಳ್ಳಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹಣ್ಣು, ತರಕಾರಿಗಳ ಮೇಲಿರುವ ಕೆಮಿಕಲ್ಸ್ ಗಳು ಪೂರ್ತಿಯಾಗಿ ಹೋಗಲು ಈ ವಿಧಾನ ಬಳಸಿ

ಬೆಂಗಳೂರು : ಹಣ್ಣುಗಳು ಹಾಗು ತರಕಾರಿಗಳನ್ನು ಬೆಳೆಸಲು ಅನೇಕ ರೀತಿಯಾದ ಕೆಮಿಕಲ್ಸ್ ಗಳನ್ನು ಬಳಸಿರುತ್ತಾರೆ. ...

news

ಮದುವೆಯ ಮೊದಲ ರಾತ್ರಿಯ ಬಗ್ಗೆ ಹೆಣ್ಣಿಗೆ ಕಾಡುವ ಪ್ರಶ್ನೆಗಳೇನು ಗೊತ್ತಾ…?

ಬೆಂಗಳೂರು : ಮದುವೆ ಅಂದರೆ ಅದೇನೋ ಒಂದು ರೀತಿಯ ಸಂಭ್ರಮ ಸಡಗರ. ಇದರ ಬಗ್ಗೆ ಎಲ್ಲಾ ಹುಡುಗಿಯರು ತಮ್ಮದೇ ಆದ ...

news

ಸೆಕ್ಸ್ ವಿಚಾರದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಜಾಣೆಯರಂತೆ!

ನವದೆಹಲಿ: ಸೆಕ್ಸ್ ವಿಚಾರಕ್ಕೆ ಬಂದರೆ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಜಾಣೆಯರು ಎಂದು ಹೊಸ ಸಮೀಕ್ಷೆಯೊಂದು ...

news

ಎಳೆ ಹಲಸಿನ ಕಾಯಿ ಉಪ್ಪಿನಕಾಯಿ ಮಾಡೋದು ಹೇಗೆ ಗೊತ್ತಾ?!

ಬೆಂಗಳೂರು: ಇನ್ನೇನು ಹಲಸಿನ ಕಾಯಿ ಸೀಸನ್ ಬಂತು. ಕರಾವಳಿ, ಮಲೆನಾಡಿನಲ್ಲಿ ಈಗಾಗಲೇ ಎಳೆ ಹಲಸಿನಕಾಯಿ ...

Widgets Magazine
Widgets Magazine