ಬೆಂಗಳೂರು : ಶತಮಾನಗಳಿಂದಲೂ ಬಳಕೆಯಾಗುತ್ತಿರುವ ತೆಂಗಿನೆಣ್ಣೆ ಹಲವಾರು ಆರೋಗ್ಯ ಲಾಭ ಗಳನ್ನು ನೀಡುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ವಿಶೇಷವಾಗಿ ದಕ್ಷಿಣ ಭಾರತದಲ್ಲಿ ತೆಂಗಿನೆಣ್ಣೆ ಅಡುಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಹಲವಾರು ಕಾಯಿಲೆಗಳಿಗೂ ಮನೆಮದ್ದಾಗಿ ಅದು ಬಳಕೆಯಾಗುತ್ತಿದೆ. ಆದರೆ ತೆಂಗಿನೆಣ್ಣೆಯನ್ನು ಬಿಸಿ ಮಾಡಿದಾಗ ಅದರ ಸತ್ವ ಕಡಿಮೆಯಾಗುತ್ತದೆಯೇ ಎಂಬ ಗೊಂದಲ ಹಲವರಲ್ಲಿರುತ್ತದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ.