ಅಧಿಕ ಕೊಬ್ಬು ಇರುವವರು ಈ ಆಹಾರ ಸೇವಿಸಲೇಬೇಡಿ

ಬೆಂಗಳೂರು, ಮಂಗಳವಾರ, 7 ನವೆಂಬರ್ 2017 (08:25 IST)

ಬೆಂಗಳೂರು: ಕೊಬ್ಬಿನಂಶ ಶರೀರದಲ್ಲಿ ಅಗತ್ಯಕ್ಕಿಂತ ಹೆಚ್ಚು ಇರುವುದರಿಂದ ಹಲವು ಗಂಭೀರ ಅಪಾಯಗಳು ಎದುರಾಗುವ ಸಮಸ್ಯೆಯಿದೆ. ಇಂತಹವರು ಈ ಕೆಲವು ಆಹಾರಗಳನ್ನು ಸೇವಿಸದೇ ಇರುವುದು ಒಳ್ಳೆಯದು.


 
ಚಿಪ್ಪು ಮೀನು
ಚಿಪ್ಪು ಮೀನಿನಲ್ಲಿ ಅಧಿಕ ಕೊಬ್ಬಿನಂಶವಿರುತ್ತದೆ. ಅಷ್ಟೇ ಅಲ್ಲ ಇದಕ್ಕೆ ಬೆಣ್ಣೆ ಅಥವಾ ತುಪ್ಪ ಹಾಕಿಕೊಂಡು ಬೇಯಿಸುವುದರಿಂದ ಕೊಬ್ಬಿನಂಶ ಇನ್ನೂ ಹೆಚ್ಚುತ್ತದೆ.
 
ರೆಡ್ ಮೀಟ್
ರೆಡ್ ಮೀಟ್ ನಲ್ಲಿ ಅಧಿಕ ಪ್ರಾಣಿಗಳ ಕೊಬ್ಬಿನಂಶವಿರುತ್ತದೆ. ಸಂಸ್ಕರಿತ ಮಾಂಸದಲ್ಲೂ ಹೆಚ್ಚು ಸೋಡಿಯಂ ಅಂಶವಿದ್ದು, ಕೊಲೆಸ್ಟ್ರಾಲ್ ಅಂಶವನ್ನೂ ಹೆಚ್ಚಿಸುತ್ತದೆ.
 
ಬೆಣ್ಣೆ ಅಥವಾ ತುಪ್ಪ
ಬೆಣ್ಣೆ ಅಥವಾ ತುಪ್ಪ ಹದವಾಗಿ ಸೇವಿಸುವುದರಿಂದ ಸಮಸ್ಯೆಯಿಲ್ಲ. ಆದರೆ ಇದನ್ನು ಅಗತ್ಯಕ್ಕಿಂತ ಹೆಚ್ಚು ಸೇವಿಸುವುದರಿಂದ ಶರೀರದಲ್ಲಿ ಕೊಬ್ಬಿನಂಶ ಹೆಚ್ಚು ಸಂಗ್ರಹವಾಗುವುದು.
 
ಕೊಬ್ಬರಿ ಎಣ್ಣೆ
ಕೊಬ್ಬರಿ ಎಣ್ಣೆಯಲ್ಲಿ ಲಾರಿಕ್ ಆಸಿಡ್ ರೂಪದಲ್ಲಿ ಅಧಿಕ ಕೊಬ್ಬಿನಂಶವಿರುತ್ತದೆ.  ಇದು ನಮ್ಮ ದೇಹದಲ್ಲಿ ಅಧಿಕ ಕೊಬ್ಬಿನಂಶ ಸಂಗ್ರಹವಾಗಲು ಕಾರಣವಾಗುತ್ತದೆ.
 
ಐಸ್ ಕ್ರೀಂ
ಐಸ್ ಕ್ರೀಂ ಸೇವನೆ ಹೆಚ್ಚಿನವರಿಗೆ ಇಷ್ಟ. ಆದರೆ ಐಸ್ ಕ್ರೀಂ ತಯಾರಿಸುವಾಗ ಕೊಬ್ಬಿನಂಶವಿರುವ ಹಾಲು ಧಾರಾಳವಾಗಿ ಬಳಸುವುದರಿಂದ ಇದನ್ನು ಸೇವಿಸುವುದು ಒಳ್ಳೆಯದಲ್ಲ. ಐಸ್ ಕ್ರೀಂನಂತೆಯೇ ಎಲ್ಲಾ ಡೈರಿ ಉತ್ಪನ್ನಗಳ ಸೇವನೆಯೂ ಅಧಿಕ ಕೊಬ್ಬಿನಶಂವಿರುವವರು ಸೇವಿಸುವುದು ಒಳ್ಳೆಯದಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಚ್ಯುಯಿಂಗ್ ಗಮ್ ತಿನ್ನುತ್ತೀರಾ? ಹಾಗಿದ್ದರೆ ಇದನ್ನು ಓದಿ

ಬೆಂಗಳೂರು: ಕೆಲವರಿಗೆ ಸದಾ ಬಾಯಿಗೆ ಚ್ಯುಯಿಂಗ್ ಹಾಕಿ ಜಗಿಯುತ್ತಾ ಇರುವುದು ಚಟ. ಇದು ನಿಜವಾಗಿ ನಮ್ಮ ...

news

ವಾಂತಿ ಮಾಡಿಕೊಳ್ಳುತ್ತಿದ್ದೀರಾ? ಹಾಗಿದ್ದರೆ ಹೀಗೆ ಮಾಡಿ!

ಬೆಂಗಳೂರು: ಅದೇನೋ ಹಾಳು ಮೂಳು ತಿಂದುಕೊಂಡು ಬಂದು ಹೊಟ್ಟೆ ಹಾಳಾಗಿದೆಯೇ? ವಾಂತಿ ಮಾಡಿಕೊಳ್ಳುತ್ತಿದ್ದೀರಾ? ...

news

ಬಿಸಿನೀರಿನಲ್ಲಿ ಪಾದ ಅದ್ದಿದರೆ ಏನೆಲ್ಲಾ ಪ್ರಯೋಜನ ಗೊತ್ತಾ?

ಬೆಂಗಳೂರು: ಚಳಿಗಾಲ ಬಂತೆಂದರೆ ಪಾದಗಳ ಸಂರಕ್ಷಣೆಗೆ ಎಷ್ಟು ಮಹತ್ವ ಕೊಟ್ಟರೂ ಸಾಲದು. ಪ್ರತಿ ನಿತ್ಯ ಐದು ...

news

ಬೆಳಗಿನ ಉಪಾಹಾರಕ್ಕೆ ಮೊಟ್ಟೆ ಸೇವಿಸಬೇಕು ಯಾಕೆ ಗೊತ್ತಾ?

ಬೆಂಗಳೂರು: ಬೆಳಗಿನ ಉಪಾಹಾರಕ್ಕೆ ಯಾವುದು ಆರೋಗ್ಯಕರ ಉಪಾಹಾರ? ಮೊಟ್ಟೆ ಬೆಳಗ್ಗೆ ತಿನ್ನುವುದು ಅತ್ಯುತ್ತಮ ...

Widgets Magazine
Widgets Magazine