ಮೊಟ್ಟೆ ಮತ್ತು ಹಾಲು ಎರಡನ್ನು ಒಟ್ಟಿಗೆ ಸೇವನೆ ಮಾಡಿದರೆ ಏನಾಗುತ್ತೆ ತಿಳಿದಿದೆಯಾ…?

ಬೆಂಗಳೂರು, ಶುಕ್ರವಾರ, 30 ಮಾರ್ಚ್ 2018 (10:51 IST)

ಬೆಂಗಳೂರು : ಪ್ರೋಟೀನ್ ಹೆಚ್ಚಾಗಿರುವ ಆಹಾರವನ್ನು ಸೇವನೆ ಮಾಡಬೇಕೆಂದು ಹೆಚ್ಚಿನವರು ಹೇಳುತ್ತಾರೆ. ಇದರಲ್ಲಿ ಕಂಡುಬರುವ ಎರಡು ಆಹಾರವೆಂದರೆ ಮೊಟ್ಟೆ ಮತ್ತು ಹಾಲು. ಆದರೆ ಇವೆರಡನ್ನು ಜತೆಯಾಗಿ ಸೇವಿಸಿದರೆ ಅದು ಆಹಾರಕ್ಕೆ ಒಳ್ಳೆಯದಾ ಎಂಬ ಗೊಂದಲ ಹಲವರಲ್ಲಿದೆ.


ಮೊಟ್ಟೆಯಲ್ಲಿ ಕೇವಲ ಪ್ರೋಟೀನ್ ಮಾತ್ರವಲ್ಲದೆ ಕೋಲೀನ್, ಅಲ್ಬುಲಿನ್ ಎನ್ನುವ ಎರಡು ಅಂಶಗಳು ಇವೆ. ಹಾಗೇ ಹಾಲಿನಲ್ಲಿ ಕ್ಯಾಲ್ಸಿಯಂ, ಲಿಪಿಡ್ಸ್ ಮತ್ತು ಪ್ರೋಟೀನ್ ಮತ್ತು ಇತರ ಖನಿಜಾಂಶಗಳು ಹಾಗೂ ವಿಟಮಿನ್ ಗಳು ಇವೆ. ಆದರೆ ಹಸಿ ಮೊಟ್ಟೆ ಮತ್ತು ಹಾಲನ್ನು ಜತೆಯಾಗಿ ಸೇವನೆ ಮಾಡಬಾರದು. ಯಾಕೆಂದರೆ ಇವೆರಡನ್ನು ಹಸಿಯಾಗಿ ಸೇವನೆ ಮಾಡಿದರೆ ಪ್ರೋಟೀನ್ ಅತಿಯಾಗಿ ಅದನ್ನು ಹೀರಿಕೊಳ್ಳಲು ದೇಹವು ತುಂಬಾ ಶ್ರಮ ಪಡಬೇಕಾಗುತ್ತದೆ. ಹೀರಿಕೊಳ್ಳದೆ ಉಳಿಯುವಂತಹ ಪ್ರೋಟೀನ್ ಕೊಬ್ಬಿನ ರೂಪವಾಗಿ ಪರಿವರ್ತನೆಯಾಗಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು.


ಆದರೆ ಮೊಟ್ಟೆ ಸೇವಿಸುವ ಮೊದಲು ಸರಿಯಾಗಿ ಬೇಯಿಸಿಕೊಂಡರೆ ಆಗ ಅದನ್ನು ದೇಹವು ಸುಲಭವಾಗಿ ಹೀರಿಕೊಳ್ಳುವುದು. ಇದರಿಂದ ಆರೋಗ್ಯ ಸಮಸ್ಯೆ ಕಡಿಮೆಯಾಗುವುದು. ಬೇಯಿಸಿರುವ ಮೊಟ್ಟೆಯನ್ನು ಹಾಲಿನೊಂದಿಗೆ ಯಾವುದೇ ಚಿಂತೆಯಿಲ್ಲದೆ ಸೇವನೆ ಮಾಡಬಹುದು. ಕೆಟ್ಟ ಕೊಲೆಸ್ಟ್ರಾಲ್ ಕೂಡ ಬರುವುದಿಲ್ಲ. ಆದರೆ ಅವೆರಡನ್ನು ಹಸಿಯಾಗಿ ಒಟ್ಟಿಗೆ ಸೇವನೆ ಮಾಡಬಾರದು ಎಂದು ತಜ್ಞರು ಹೇಳುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ನಿದ್ದೆ ಸಮಸ್ಯೆ ಇರುವವರು ಈ ತಿನಿಸುಗಳನ್ನು ತಿನ್ನಿ!

ಬೆಂಗಳೂರು : ಹಲವರಲ್ಲಿ ಕಂಡು ಬರುವ ಸಮಸ್ಯೆಗಳಲ್ಲಿ ನಿದ್ದೆಯು ಒಂದು. ನಿದ್ದೆ ಸರಿಯಾಗಿ ಮಾಡದಿದ್ದರೆ ...

news

ಉಸಿರಾಟದ ತೊಂದರೆ ಇರುವ ವ್ಯಕ್ತಿಗಳು ಕೂಡ ಸೆಕ್ಸ್ ಸುಖವನ್ನು ಆನುಭವಿಸಬಹುದಂತೆ!

ಬೆಂಗಳೂರು : ಉಸಿರಾಟದ ತೊಂದರೆ ಇರುವ ವ್ಯಕ್ತಿಗಳು ಸಾಮಾನ್ಯವಾಗಿ ಉಸಿರಿನ ವೇಗವನ್ನು ಹೆಚ್ಚಿಸುವ ಯಾವುದೇ ...

news

ಈ ಒಂದು ಹಣ್ಣನ್ನು ತಿನ್ನುವುದರಿಂದ ವಯಸ್ಸಾದ ಮೇಲೆ ನೆನಪಿನ ಶಕ್ತಿ ಕಡಿಮೆಯಾಗುದಿಲ್ಲವಂತೆ !

ಬೆಂಗಳೂರು : ಸಾಮಾನ್ಯವಾಗಿ ಮನುಷ್ಯನಿಗೆ ವಯಸ್ಸಾದ ಮೇಲೆ ನೆನಪಿನ ಶಕ್ತಿ ಕಡಿಮೆಯಾಗುದು ಸಾಮಾನ್ಯ. ಆದ್ರೆ ಈ ...

news

ಹೀಗೆ ಮಾಡುವುದರಿಂದ ಸೆಕ್ಸ್ ಸುಖದಾಯಕವಾಗುವುದು ಗ್ಯಾರಂಟಿ!

ಬೆಂಗಳೂರು: ಸೆಕ್ಸ್ ಲೈಫ್ ಸುಖಕರವಾಗಿರಬೇಕಾದರೆ ಏನು ಮಾಡಬೇಕು? ಸಿಂಪಲ್. ಯೋಗ ಮಾಡಿ ಎಂದಿದೆ ನೂತನ ಅಧ್ಯಯನ ...

Widgets Magazine
Widgets Magazine