ಈ ತರಕಾರಿಗಳನ್ನು ತಪ್ಪಿಯೂ ಬೇಯಿಸದೇ ತಿನ್ನಬೇಡಿ!

ಬೆಂಗಳೂರು, ಶುಕ್ರವಾರ, 15 ಜೂನ್ 2018 (08:45 IST)

Widgets Magazine

ಬೆಂಗಳೂರು: ಕೆಲವು ತರಕಾರಿಗಳೇ ಹಾಗೆ, ಹಸಿಯಾಗಿ ಸಲಾಡ್ ಮಾಡಿ ತಿನ್ನುವ ಹಾಗೆಯೇ ಇಲ್ಲ. ಅದರಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವೇ ಹೆಚ್ಚು. ಅಂತಹ ತರಕಾರಿಗಳು ಯಾವುವು ನೋಡೋಣ.
 
ಆಲೂಗಡ್ಡೆ
ಕೆಲವರು ಆಲೂಗಡ್ಡೆ ಕತ್ತರಿಸಿ ಹಸಿಯಾಗಿ ಉಪ್ಪು ಖಾರ ಹಾಕಿಕೊಂಡು ಸೇವಿಸುತ್ತಾರೆ. ಆದರೆ ಆಲೂಗಡ್ಡೆ ಹಸಿಯಾಗಿ ಸೇವಿಸುವುದರಿಂದ ಜೀರ್ಣವಾಗುವುದು ಕಷ್ಟ ಮತ್ತು ಗ್ಯಾಸ್ಟಿಕ್ ಸಮಸ್ಯೆ ಬರುವ ಸಾಧ್ಯತೆ ಹೆಚ್ಚು.
 
ಬಸಳೆ
ಬಸಳೆ ಸೊಪ್ಪಿನಂತಹ ತರಕಾರಿಗಳು ಕ್ಯಾನ್ಸರ್ ನಂತಹ ಮಾರಕ ರೋಗಗಳ ವಿರುದ್ಧ ಹೋರಾಡುತ್ತವೆ. ಆದರೆ ಇವುಗಳನ್ನು ಹಸಿ ಸೇವಿಸುವುದರಿಂದ ಪ್ರಯೋಜನವಿಲ್ಲ. ಬೇಯಿಸಿ ತಿಂದರೆ ಅದರಲ್ಲಿ ಪೋಷಕಾಂಶಗಳನ್ನು ದೇಹ ಹೀರಿಕೊಳ್ಳುತ್ತದೆ.
 
ಮಶ್ರೂಮ್
ಮಶ್ರೂಮ್ ಕೂಡಾ ಹಸಿ ತಿನ್ನುವುದರಿಂದ ಜೀರ್ಣಕ್ರಿಯೆಗೆ ಅಡ್ಡಿಯಾಗಬಹುದು. ಹಸಿ ಮಶ್ರೂಮ್ ನಲ್ಲಿ ಕೆಲವೊಮ್ಮೆ ವಿಷಕಾರಿ ಅಂಶಗಳಿರುವ ಸಾಧ್ಯತೆಯಿದ್ದು, ಇದು ದೇಹದ ಮೇಲೆ ಪರಿಣಾಮ ಬೀರಬಹುದು.
 
ಬದನೆ
ಎಳೆ ಬದನೆ ಕಾಯಿಗಳಲ್ಲೂ ಆಲೂಗಡ್ಡೆಯಲ್ಲಿರುವಂತಹ ಅಂಶಗಳಿರುತ್ತವೆ. ಹೀಗಾಗಿ ಇದನ್ನು ಹಸಿಯಾಗಿ ತಿನ್ನುವುದರಿಂದ ಗ್ಯಾಸ್ಟಿಕ್ ನಂತಹ ಸಮಸ್ಯೆ ಬರಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಇಂತಹ ಸಂದರ್ಭದಲ್ಲಿ ಸೆಕ್ಸ್ ಗೆ ನೋ ಹೇಳುವುದೇ ಒಳ್ಳೆಯದು!

ಬೆಂಗಳೂರು: ಸೆಕ್ಸ್ ನಮ್ಮ ಮನಸ್ಸು ಮತ್ತು ದೇಹದ ಸಂತೋಷಕ್ಕೆ ಒಳ್ಳೆಯದು ಎನ್ನುವುದು ನಿಜ. ಆದರೆ ಕೆಲವು ...

news

ನಿಮಗೆ ಸಿಹಿ ತಿನ್ನಬೇಕೆಂಬ ಬಯಕೆ ಹೆಚ್ಚಾಗಲು ಕಾರಣವೇನು ಗೊತ್ತಾ?

ಬೆಂಗಳೂರು : ಸಿಹಿ ಪದಾರ್ಥಗಳನ್ನು ತಿಂದರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಿಳಿದರೂ ಕೂಡ ಕೆಲವರು ಬಾಯಿ ...

news

ಹಣ್ಣುಗಳನ್ನು ಮತ್ತು ತರಕಾರಿಗಳನ್ನು ಮಿಕ್ಸ್ ಮಾಡಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದೇ?

ಬೆಂಗಳೂರು : ಹಣ್ಣುಗಳು ಹಾಗೂ ತರಕಾರಿಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದ ವಿಚಾರ. ...

news

ಬೊಕ್ಕ ತಲೆಯ ಸಮಸ್ಯೆಯೇ? ಹಾಗಿದ್ದರೆ ಈ ಆಹಾರಗಳನ್ನು ಸೇವಿಸಿ!

ಬೆಂಗಳೂರು: ತಲೆಗೂದಲು ಉದುರುವ ಸಮಸ್ಯೆಯೇ? ಹಾಗಿದ್ದರೆ ಈ ಆಹಾರಗಳನ್ನು ಸೇವಿಸಿ ಸಮಸ್ಯೆಗೆ ಪರಿಹಾರ ...

Widgets Magazine