ಟೀ-ಕಾಫಿ ಸೇವಿಸುವ ಮೊದಲು ನೀರು ಕುಡಿಯಬೇಕು! ಯಾಕೆ ಗೊತ್ತಾ?

ಬೆಂಗಳೂರು, ಶುಕ್ರವಾರ, 14 ಸೆಪ್ಟಂಬರ್ 2018 (09:16 IST)

ಬೆಂಗಳೂರು: ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಇದನ್ನು ಸೇವಿಸುವ ಮೊದಲು ನೀರು ಕುಡಿದರೆ ಆಗುವ ಪ್ರಯೋಜನ ಇನ್ನೂ ಜಾಸ್ತಿ.
 

ಹಲ್ಲು ಕೊಳೆಯಾಗಲ್ಲ
ಕಡು ಬಣ್ಣದ ಕಾಫಿ, ಟೀ ಕುಡಿಯುವುದರಿಂದ ಬಿಳಿ ಹಲ್ಲು ಹಳದಿಗಟ್ಟುವ ಸಾಧ್ಯತೆಯಿದೆ. ಹೀಗಾಗಿ ಮೊದಲು ನೀರು ಕುಡಿದು ಬಳಿಕ ಕಾಫಿ-ಟೀ ಕುಡಿದರೆ ಈ ಸಮಸ್ಯೆಯಿರದು.
 
ಅಸಿಡಿಟಿ
ಏನೇ ಸೇವಿಸುವ ಮೊದಲು ನೀರು ಕುಡಿದರೆ ಅಸಿಡಿಟಿ ಸಮಸ್ಯೆ ಬರದು. ಕಾಫಿ ಅಥವಾ ಟೀ ಸೇವನೆ ಕೆಲವರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ತರಬಹುದು. ಇಂತಹ ಸಮಯದಲ್ಲಿ ಮೊದಲು ನೀರು ಕುಡಿದು ನಂತರ ಕಾಫಿ ಟೀ ಸೇವಿಸಿದರೆ ಸಮಸ್ಯೆಯಾಗದು.
 
ಹೊಟ್ಟೆ ಹುಣ್ಣು
ಕೆಲವರಿಗೆ ಕಾಫಿ/ಟೀ ಸೇವನೆ ಹೊಟ್ಟೆ ಹುಣ್ಣಿನಂತಹ ಸಮಸ್ಯೆ ತರುತ್ತದೆ. ಇಂತಹವರು ಮೊದಲು ನೀರು ಕುಡಿದು ನಂತರ ಕಾಫಿ/ಟೀ ಸೇವಿಸಬಹುದು.
 
ಅಡ್ಡ ಪರಿಣಾಮ ಕಡಿಮೆ
ಕಾಫಿ/ಟೀ ಸೇವನೆ ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ. ಹಾಗಿದ್ದರೂ ನಮಗೆ ಚಟವಾಗಿಬಿಟ್ಟಿರುತ್ತದೆ. ಇಂತಹ ಸಂದರ್ಭದಲ್ಲಿ ಮೊದಲು ನೀರು ಕುಡಿದು ನಂತರ ಇಂತಹ ಪಾನೀಯ ಸೇವಿಸುವುದರಿಂದ ಅಡ್ಡ ಪರಿಣಾಮಗಳು ಕೊಂಚ ಕಡಿಮೆಯಾಗುತ್ತವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಗರ್ಭಿಣಿಯರು ಸೇವಿಸಲೇಬೇಕಾದ ಮೂರು ಪಾನೀಯಗಳು

ಬೆಂಗಳೂರು: ಗರ್ಭಿಣಿಯಾಗಿರುವಾಗ ದೇಹಕ್ಕೆ ನೀರಿನಂಶ ದೊರಕಿದಷ್ಟೂ ಆರೋಗ್ಯವಾಗಿರುತ್ತೇವೆ. ಹಾಗಂತ ಸಿಕ್ಕ ...

news

ಮಧ್ಯವಯಸ್ಕರು ಹೆಚ್ಚು ಸೆಕ್ಸ್ ಮಾಡಿದಷ್ಟು ಒಳ್ಳೆಯದು! ಯಾಕೆ ಗೊತ್ತಾ?

ಬೆಂಗಳೂರು: ಮಧ್ಯ ವಯಸ್ಸಿನವರು ಹೆಚ್ಚು ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಷ್ಟು ಒಳ್ಳೆಯದು ಎಂದು ...

news

ಪ್ರತಿದಿನ ದೇವರಿಗೆ ಉದುಬತ್ತಿ ಹಚ್ಚುತ್ತಿದ್ದೀರಾ? ಹಾಗಾದ್ರೆ ಈ ಸಮಸ್ಯೆಗಳು ಬರುವುದು ಖಂಡಿತ

ಬೆಂಗಳೂರು : ಪ್ರತಿಯೊಬ್ಬರು ಪ್ರತಿದಿನ ಮನೆಯಲ್ಲಿ ದೇವರ ಪೂಜೆ ಮಾಡಿ ಉದುಬತ್ತಿ ಹಚ್ಚುತ್ತಾರೆ. ಇದರಿಂದ ...

news

ರುಚಿಯಾದ ನಿಂಬೆ ರಸಂ ಮಾಡೋದು ಹೇಗೆ ಗೊತ್ತಾ

ಬಿಸಿ ಬಿಸಿಯಾದ ರುಚಿಯಾದ ರುಚಿಯಾದ ರಸಂ ಮಾಡಿಕೊಂಡು ತಿಂದರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ? ರಸಂಗಳು ...

Widgets Magazine