ವಾರಕ್ಕೊಮ್ಮೆಯಾದರೂ ತಿನ್ನಿ ಡ್ರ್ಯಾಗನ್ ಫ್ರೂಟ್

ಬೆಂಗಳೂರು, ಶುಕ್ರವಾರ, 31 ಆಗಸ್ಟ್ 2018 (19:11 IST)

ಡ್ರ್ಯಾಗನ್ ಫ್ರೂಟ್ ಹೆಚ್ಚಿನ ನಾರಿನಾಂಶ, ಲಿಯೋ ಕ್ಯಾಪಸ್, ಪ್ರೋಟೀನ್, ವಿಟಮಿನ್-ಸಿ, ಕಾರ್ಟಿನ್, ಕ್ಯಾಲ್ಸಿಯಂ, ಫಾಸ್ಪರಸ್, ಕಬ್ಬಿಣಾಂಶ, ಪೋಟೋ ನ್ಯೂಟ್ರಿಯೆಂಟ್ಸ್, ಓಮೇಗಾ-3 ಮತ್ತು ಒಮೇಗಾ-6 ಫೇತ್ ಆಸಿಡ್ಸ್ ಅಂಶಗಳನ್ನು ಹೊಂದಿದೆ. ಕಡಿಮೆ ಕ್ಯಾಲೋರಿ ಹೊಂದಿರುವ ಡ್ರ್ಯಾಗನ್ ಫ್ರೂಟ್ ಹಲವಾರು ರೋಗಗಳಿಗೆ ರಾಮಬಾಣವಾಗಿದೆ.
- ಇದು ಕಡಿಮೆ ಪ್ರಮಾಣದ ಕೊಲೆಸ್ಟ್ರಾಲ್‌ ಹೊಂದಿರುವುದರಿಂದ ದೇಹದ ತೂಕವನ್ನು ಇಳಿಸಲು ಇದು ಸಹಕಾರಿಯಾಗಿದೆ.
 
- ಡ್ರ್ಯಾಗನ್ ಫ್ರೂಟ್ ಪಾಲಿಫಿನಾಲ್‌ಗಳು, ಕ್ಯಾರೊಟಿನಾಯ್ಡ್‌ಗಳು, ಥಿಯೊಲ್‌ಗಳು, ಟಕೋಫೆರಾಲ್‌ ಮತ್ತು ಗ್ಲುಕೋಸಿನೋಲೇಟ್‌ಗಳ ಸಮೃದ್ಧ ಮೂಲವಾಗಿದ್ದು, ಇವೆಲ್ಲವೂ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
 
- ಡ್ರ್ಯಾಗನ್ ಫ್ರೂಟ್ ಒಮೇಗಾ 3, ಪ್ಯಾಟಿ ಆಸಿಡ್‌ಗಳನ್ನು ಹೊಂದಿರುವುದರಿಂದ ಹೃದಯದ ಆರೋಗ್ಯಕ್ಕೆ ಸಹಕರಿಸುತ್ತದೆ.
 
- ಡ್ರ್ಯಾಗನ್ ಫ್ರೂಟ್ ಸೇವನೆಯಿಂದ ಫ್ರೀ ರ್ಯಾಡಿಕಲ್‌ಗಳಿಂದ ಚರ್ಮಕ್ಕೆ ಆಗುವ ತೊಂದರೆಯನ್ನು ತಡೆಯಬಹುದು.
 
- ಡ್ರ್ಯಾಗನ್ ಫ್ರೂಟ್ ಹೆಚ್ಚಿನ ಫೈಬರ್ ಅಂಶವಿನ್ನು ಹೊಂದಿರುವ ಕಾರಣ ಇದು ನಿಮ್ಮ ದೇಹದ ಕೆಟ್ಟ ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಉತ್ತಮಗೊಳಿಸಿ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತೆ.
 
- ಇದರಲ್ಲಿರುವ ವಿಟಮಿನ್ ಸಿ ಅಂಶವು ಚರ್ಮದ ಕಳೆಗುಂದುವಿಕೆಯ ವಿರುದ್ಧ ಸೆಣಸುತ್ತೆ ಮತ್ತು ನಿಮ್ಮ ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ.
 
- ಇದು ಅತ್ಯಧಿಕ ಖನಿಜಾಂಶಗಳನ್ನು ಹೊಂದಿರುವ ಕಾರಣ ಇದು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.
 
- ಡ್ರ್ಯಾಗನ್ ಫ್ರೂಟ್‌ನಲ್ಲಿ ವಿಟಮಿನ್ ಸಿ ಹಾಗೂ ಎ ಅಂಶಗಳು ಹೆಚ್ಚಿದ್ದು, ಇದು ಮೆದುಳನ್ನು ಚುರುಕುಗೊಳಿಸುತ್ತದೆ.
 
- ಇದು ಕ್ಯಾನ್ಸರ್‌ನಂತಹ ರೋಗಗಳಿಗೆ ರಾಮಬಾಣವಾಗಿದೆ.
 
- ಡ್ರಾಗನ್ ಫ್ರೂಟ್‌ನಲ್ಲಿ ಫೈಬರ್ ಹೇರಳವಾಗಿದ್ದು ಇದು ಗ್ಯಾಸ್, ಅಸಿಡಿಟಿ, ಮಲಬದ್ದತೆಯನ್ನು ಕಡಿಮೆ ಮಾಡುತ್ತದೆ.
 
- ಡ್ರ್ಯಾಗನ್ ಫ್ರೂಟ್‌ನಲ್ಲಿ ಅಧಿಕ ಮಟ್ಟದ ವಿಟಮಿನ್ ಸಿ ಅಂಶವಿರುವುದರಿಂದ ಕೂದಲಿಗೆ ಹೊಳಪನ್ನು ನೀಡುತ್ತದೆ.
 
- ಇದು ವಿಟಮಿನ್ ಬಿ3 ಅಂಶವನ್ನು ಅಧಿಕವಾಗಿದೆ ಹೊಂದಿದ್ದು ಸೂರ್ಯನ ಕಿರಣಗಳಿಂದ ನಿಮ್ಮ ಚರ್ಮದ ಮೇಲಾಗುವ ಹಾನಿಯನ್ನು ತಪ್ಪಿಸುತ್ತದೆ.
 
- ಇದರ ಸೇವನೆಯಿಂದ ಶ್ವಾಸಕೋಶ ಸಮಸ್ಯೆಗಳು ಉಪಶಮನವಾಗುತ್ತದೆ.
 
- ಇದರ ಸೇವನೆಯಿಂದ ರಕ್ತ ಹೀನತೆ ದೂರ ಮಾಡಬಹುದು.
 
- ಇದು ಗರ್ಭಿಣಿಯರಿಗೆ ಹೆಚ್ಚಿನ ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ.
 
- ಇದು ಬಿಳಿಯ ರಕ್ತಕಣಗಳನ್ನು ಹೆಚ್ಚಿಸುತ್ತದೆ ಮತ್ತು ಡೆಂಘೀ ಜ್ವರದಂತಹ ರೋಗಗಳಿಗೆ ಸಿದ್ಧ ಔಷಧಿಯಾಗಿದೆ.
 
- ಡ್ರ್ಯಾಗನ್ ಫ್ರೂಟ್‌ ಮೂಳೆ ಮತ್ತು ಹಲ್ಲುಗಳನ್ನು ಬಲಿಷ್ಠಗೊಳಿಸುತ್ತದೆ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಬಿರು ಬೇಸಿಗೆಯ ದಾಹವನ್ನು ತಣಿಸುವ ರುಚಿಯಾದ ಪಾನಕಗಳು

ಸಾಮಾನ್ಯವಾಗಿ ಬೇಸಿಗೆಯಲ್ಲಿ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ಅದ್ದರಿಂದ ದೇಹಕ್ಕೆ ನೀರಿನಂಶದ ...

news

ಹಾಲು ಶುದ್ಧವೇ? ಕಲಬೆರಕೆಯೇ ಎಂದು ಪರೀಕ್ಷಿಸುವುದು ಹೇಗೆ ಗೊತ್ತಾ?

ಬೆಂಗಳೂರು : ಹಾಲು ಯಾವತ್ತೂ ಕಲಬೆರಕೆಯಾಗಿರುವುದಿಲ್ಲ, ಶುದ್ಧವಾಗಿಯೇ ಇರುತ್ತದೆ ಎಂಬ ನಂಬಿಕೆ ಈಗ ...

news

ಬಾಯಿ ನೀರೂರಿಸುವ ಗೋಳಿಬಜ್ಜಿ

ಮಳೆಗಾಲದಲ್ಲಿ ಟೀ ಕುಡಿಯುವ ಸಮಯದಲ್ಲಿ ಬಜ್ಜಿಗಳಿದ್ದರೆ ಅದರ ಮಜವೇ ಬೇರೆ ಅದರಲ್ಲೂ ಮಂಗಳೂರು ಬಜ್ಜಿ ...

news

ಮಹಿಳೆಯರು ರೊಮ್ಯಾನ್ಸ್ ಗೆ ಒಲ್ಲೆನೆನ್ನುವುದಕ್ಕೆ ಇದೂ ಕಾರಣವಿರಬಹುದು

ಬೆಂಗಳೂರು: ಕೆಲವು ಪುರುಷರಿಗೆ ತನ್ನ ಸಂಗಾತಿ ತಾನು ಕರೆದಾಗಲೆಲ್ಲಾ ತನ್ನ ಸಂಗಾತಿ ಮಧುಮಂಚಕ್ಕೆ ಬರುವುದಿಲ್ಲ ...

Widgets Magazine
Widgets Magazine