ದೀರ್ಘಾಯುಷಿಗಳಾಗಬೇಕೇ? ಹಾಗಿದ್ದರೆ ಇವುಗಳನ್ನು ಸೇವಿಸಿ

ಬೆಂಗಳೂರು, ಬುಧವಾರ, 15 ನವೆಂಬರ್ 2017 (08:26 IST)

ಬೆಂಗಳೂರು: ಪ್ರತಿಯೊಬ್ಬರಿಗೂ ಜೀವನದ ಮೇಲೆ ಆಸೆ ಇದ್ದೇ ಇರುತ್ತದೆ. ತಾನು ಹೆಚ್ಚು ಕಾಲ ಬದುಕಬೇಕೆಂಬುದಕ್ಕಾಗಿ ಮುನಷ್ಯ ಪ್ರತಿನಿತ್ಯ ಹೋರಾಟ ಮಾಡುತ್ತಾನೆ. ಈ ರೀತಿ ದೀರ್ಘಾಯುಷಿಗಳಾಗಬೇಕಾದರೆ ಕೆಲವು ಆಹಾರವೂ ಪ್ರಮುಖ ಪಾತ್ರ ವಹಿಸುತ್ತವೆ. ಅವು ಯಾವುವು ನೋಡೋಣ.


 
ನೆಲ್ಲಿಕಾಯಿ
ಬೆಟ್ಟದ ನೆಲ್ಲಿಕಾಯಿ ಸುದೀರ್ಘ ಜೀವನಕ್ಕೆ ರಹದಾರಿ ಎಂದು ಹಲವು ಆಯುರ್ವೇದ ತಜ್ಞರು ಹೇಳುತ್ತಾರೆ. ದೇಹದ ಮೂರು ಸ್ಥಿತಿಗಳಾದ ವಾತ, ಕಫ ಮತ್ತು ಪಿತ್ಥ ಇವು ಮೂರನ್ನೂ ಸಮತೋಲನದಲ್ಲಿಡಲು ನೆಲ್ಲಿಕಾಯಿ ಸಹಕಾರಿ. ಇದರಲ್ಲಿ ರೋಗ ನಿರೋಧಕ ಶಕ್ತಿಯೂ ಅಧಿಕವಾಗಿದ್ದು, ವಯಸ್ಸಾಗುವಿಕೆಯನ್ನು ತಡೆಗಟ್ಟುವ ಗುಣ ಹೊಂದಿದೆ.
 
ಶುಂಠಿ
ಶೀತ, ಕೆಮ್ಮು  ಬಂದರೆ ಶುಂಠಿ ಸೇವಿಸುತ್ತೇವೆ. ಈ ಶುಂಠಿಯಲ್ಲಿ ಸುಮಾರು ರೀತಿಯ ಆಂಟಿ ಆಕ್ಸಿಡೆಂಟ್ ಗುಣವಿದೆ ಎನ್ನಲಾಗುತ್ತದೆ. ಇದು ಹೃದಯ ಖಾಯಿಲೆ, ಕ್ಯಾನ್ಸರ್, ಎಲುಬಿನ ಸಮಸ್ಯೆಯಂತಹ ಗಂಭೀರ ಸಮಸ್ಯೆಗಳು ಬರದಂತೆ ನಮ್ಮ ದೇಹವನ್ನು ರಕ್ಷಿಸುತ್ತದೆ ಎನ್ನಲಾಗುತ್ತದೆ.
 
ಏಲಕ್ಕಿ
ಸಿಹಿ ತಿನಿಸು, ಪಾಯಸ ಮಾಡುವುದಿದ್ದರೆ ಏಲಕ್ಕಿ ಬೇಕೇ ಬೇಕು. ಏಲಕ್ಕಿಯಲ್ಲಿ ನಮ್ಮ ದೇಹದ ಒಳಗಿರುವ ವಿಷಕಾರಿ ಅಂಶವನ್ನು ಹೊರ ಹಾಕುವ ಗುಣವಿದೆಯಂತೆ. ಇದು ನಮ್ಮ ಜೀರ್ಣ ಪ್ರಕ್ರಿಯೆಯನ್ನು ಸುಗಮಗೊಳಿಸುವುದಲ್ಲದೆ, ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
 
ಜೀರಿಗೆ
ನಮ್ಮ ಅಡುಗೆ ಮನೆಯಲ್ಲಿ ಸಿಗುವ ಸಾಮಾನ್ಯ ವಸ್ತು ಇದು. ಇದು ಎಲ್ಲಾ ರೀತಿಯ ಉದರ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ. ಅಷ್ಟೇ ಅಲ್ಲದೆ, ಇದು ನರ ವ್ಯೂಹವನ್ನು ಚುರುಕುಗೊಳಿಸುತ್ತದೆ. ಪ್ರತಿ ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ಹಾಕಿದ ನೀರು ಸೇವಿಸುವುದು ತುಂಬಾ ಉತ್ತಮ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಚಳಿಗಾಲದಲ್ಲಿ ಪ್ರತಿನಿತ್ಯ ಎಷ್ಟು ಲೋಟ ನೀರು ಕುಡಿಯಬೇಕು?

ಬೆಂಗಳೂರು: ಆಗಲೇ ಚಳಿಗಾಲ ಬಂದುಬಿಟ್ಟಿದೆ. ವಾತಾವರಣ ಬದಲಾದಂತೆ ನಮ್ಮ ದೈನಂದಿನ ಚಟುವಟಿಕೆಗಳೂ ...

news

ಚರ್ಮದ ಕಾಂತಿಗೆ ಕೊತ್ತಂಬರಿ ಸೊಪ್ಪು ಬಳಸಿ!

ಬೆಂಗಳೂರು: ಸಾರು, ಸಾಂಬಾರಿಗೆ ಮಾತ್ರವಲ್ಲ, ಕೊತ್ತಂಬರಿ ಸೊಪ್ಪನ್ನು ಸೌಂದರ್ಯವರ್ಧಕವಾಗಿಯೂ ಬಳಸಬಹುದು. ...

news

ಹಲ್ಲು ಹಳದಿಗಟ್ಟಿದ್ದರೆ ಈ ಮನೆ ಮದ್ದು ಮಾಡಿ ನೋಡಿ

ಬೆಂಗಳೂರು: ಹಲ್ಲು ಹಳದಿಗಟ್ಟಿದೆಯೇ? ಬಾಯ್ತುಂಬಾ ನಗಲೂ ನಾಚಿಕೆಯಾಗುತ್ತಿದೆಯೇ? ಹಾಗಿದ್ದರೆ ಕೆಲವು ಸಿಂಪಲ್ ...

news

ಮಕ್ಕಳ ಕೆಮ್ಮಿಗೆ ಪರಿಹಾರ ನೀಡಲು ದಾಳಿಂಬೆ ರೆಸಿಪಿ!

ಬೆಂಗಳೂರು: ಚಳಿಗಾಲ ಬಂತೆಂದರೆ ಸಾಕು. ಶೀತ, ಕೆಮ್ಮು ಜತೆಗೇ ಬರುತ್ತದೆ. ಇದಕ್ಕೆ ಮನೆಯಲ್ಲೇ ಕೆಲವು ಪರಿಹಾರ ...

Widgets Magazine
Widgets Magazine