ಒಣ ಚರ್ಮ ನಿಮ್ಮದಾಗಿದ್ದರೆ ಈ ಆಹಾರ ಸೇವಿಸಿ

ಬೆಂಗಳೂರು, ಭಾನುವಾರ, 29 ಅಕ್ಟೋಬರ್ 2017 (07:29 IST)

ಬೆಂಗಳೂರು: ಚಳಿಗಾಲಕ್ಕೆ ಸಿದ್ಧವಾಗಿದ್ದೀರಾ? ಚಳಿಗಾಲದಲ್ಲಿ ಒಣ ಚರ್ಮದ ಗುಣವಿರುವವರದ್ದಂತೂ ಪಾಡು ಕೇಳಲಾಗದು. ಒಣ ಚರ್ಮದಿಂದ ಕಿರಿ ಕಿರಿ ಅನುಭವಿಸುತ್ತಿದ್ದರೆ ಈ ಆಹಾರವನ್ನು ಹೆಚ್ಚು ಸೇವಿಸಿ.


 
ಸಿಹಿ ಗೆಣಸು
ಸಿಹಿ ಗೆಣಸಿನಲ್ಲಿ ವಿಟಮಿನ್ ಎ ಧಾರಾಳವಾಗಿದ್ದು, ಇದರಲ್ಲಿ ಚರ್ಮಕ್ಕೆ ಬೇಕಾದ ಬೀಟಾ ಕ್ಯಾರೋಟಿನ್ ಕೂಡಾ ಹೇರಳವಾಗಿದೆ.
 
ಒಣ ಬೀಜಗಳು ಮತ್ತು ಬೇಳೆ ಕಾಳುಗಳು
ಒಣ ಬೀಜಗಳು ಮತ್ತು ಬೇಳೆ ಕಾಳುಗಳಲ್ಲಿ ವಿಟಮಿನ್ ಇ, ಫ್ಯಾಟಿ ಆಸಿಡ್ ಸಾಕಷ್ಟಿರುತ್ತವೆ. ಇದು ನಮ್ಮ ಚರ್ಮಕ್ಕೆ ಅತೀ ಅಗತ್ಯ.  ಹಾಗಾಗಿ ಆದಷ್ಟು ಒಣ ಹಣ್ಣುಗಳು, ಬೇಳೆ ಕಾಳುಗಳನ್ನು ಹೆಚ್ಚು ಸೇವಿಸಿ.
 
ಬಸಳೆ ಸೊಪ್ಪು
ಬಸಳೆ ಸೊಪ್ಪಿನಲ್ಲಿರುವ ವಿಟಮಿನ್ ಇ, ಎ ಮತ್ತು ಸಿ ಅಂಶ ನಮ್ಮ ಚರ್ಮಕ್ಕೆ ಹೇಳಿ ಮಾಡಿಸಿದ ಮದ್ದಿನ ಹಾಗೆ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲದೆ, ಇದು ಹೆಚ್ಚು ನೀರಿನಂಶವಿರುವ ತರಕಾರಿ ಕೂಡಾ.
 
ಮೀನು
ಫ್ಯಾಟಿ ಆಸಿಡ್ ಅಂಶ ನಮ್ಮ ಚರ್ಮಕ್ಕೆ ಮ್ಯಾಜಿಕ್ ಮಾಡುತ್ತವೆ. ಮೀನಿನಲ್ಲಿ ಈ ಅಂಶ ಹೇರಳವಾಗಿದೆ. ಅಷ್ಟೇ ಅಲ್ಲದೆ, ಒಮೆಗಾ 3 ಕೂಡಾ ಬೇಕಾದಷ್ಟಿದೆ. ಹಾಗಾಗಿ ಇದನ್ನು ಸೇವಿಸಲೇಬೇಕು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮೈಕ್ರೋವೇವ್ ಓವನ್ ನಲ್ಲಿ ಆಹಾರ ಬಿಸಿ ಮಾಡುತ್ತೀರಾ? ಹಾಗಿದ್ದರೆ ಹುಷಾರ್!

ಬೆಂಗಳೂರು: ಆಹಾರ ತಣ್ಣಗಾಗಿದ್ದರೆ ಮೈಕ್ರೋವೇವ್ ಓವನ್ ಬಳಸಿ ಬಿಸಿ ಮಾಡಿ ಸೇವಿಸುತ್ತೇವೆ. ಆದರೆ ಹೀಗೆ ...

news

ಗೋಡಂಬಿ ತಿನ್ನುವುದರ ಲಾಭವೇನು ಗೊತ್ತಾ?

ಬೆಂಗಳೂರು: ಗೋಡಂಬಿ ಕಾಳು ಸ್ವಲ್ಪ ದುಬಾರಿಯಾದರೂ ಎಲ್ಲರಿಗೂ ಇಷ್ಟ. ಇದರ ತಿನ್ನುವುದರಿಂದ ನಮ್ಮ ದೇಹಕ್ಕೆ ...

news

ಗರ್ಭಿಣಿ ಮಹಿಳೆಯರು ತುಪ್ಪ ತಿನ್ನುವುದು ಅನಿವಾರ್ಯವೇ?

ಬೆಂಗಳೂರು: ಗರ್ಭಿಣಿ ಮಹಿಳೆಯರಿಗೆ ಚೆನ್ನಾಗಿ ತಿನ್ನಬೇಕು ಎಂದು ಹಾಲು ತುಪ್ಪ, ಮೊಸರು ಹೇರಳವಾಗಿ ...

news

ಬಾಳೆ ಹಣ್ಣು ಕಪ್ಪಾಗದಂತೆ ತಡೆಯಲು ಈ ಉಪಾಯ ಮಾಡಿ

ಬೆಂಗಳೂರು: ಸಿಪ್ಪೆ ತೆಗೆದ ಬಾಳೆ ಹಣ್ಣು ಬಹುಬೇಗನೇ ಕಪ್ಪಗಾಗುತ್ತದೆ. ಅದು ಕಪ್ಪಗಾಗದಂತೆ ತಡೆಯಲು ಕೆಲವು ...

Widgets Magazine
Widgets Magazine