ಪುರುಷರಿಗೆ ಮೊದಲ ರಾತ್ರಿಯ ಟಿಪ್ಸ್

ಬೆಂಗಳೂರು, ಶನಿವಾರ, 15 ಸೆಪ್ಟಂಬರ್ 2018 (09:30 IST)


ಬೆಂಗಳೂರು: ಮೊದಲ ರಾತ್ರಿ ಎನ್ನುವುದು ಸಹಜವಾಗಿ ಎಲ್ಲಾ ಗಂಡ-ಹೆಂಡಿರಲ್ಲೂ ಹಲವು ನಿರೀಕ್ಷೆಗಳ ರಾತ್ರಿ. ಮೊದಲ ರಾತ್ರಿಗೆ ಸಜ್ಜಾಗಿರುವ ಪುರುಷರಿಗೆ ಕೆಲವೊಂದು ಟಿಪ್ಸ್ ಇಲ್ಲಿದೆ ನೋಡಿ.
 
ಅವಳ ನಿರೀಕ್ಷೆ ಏನು?
ಮೊದಲ ರಾತ್ರಿ ಎಂದಾಕ್ಷಣ ಪುರುಷರಿಗೆ ಸೆಕ್ಸ್ ಮೊದಲ ಆದ್ಯತೆ ಎನಿಸಬಹುದು. ಆದರೆ ನಿಮ್ಮ ಸಂಗಾತಿಯ ಬಯಕೆ ಏನು? ಅವಳ ನಿರೀಕ್ಷಗಳೇನು ಎಂಬುದಕ್ಕೆ ಮೊದಲ ಆದ್ಯತೆ ಕೊಟ್ಟರೆ ಉಳಿದ ಜೀವನ ಸುಖಮಯವಾಗಿರುವುದು.
 
ನೀಟ್ ಆಂಡ್ ಕ್ಲೀನ್ ಆಗಿರಿ!
ಮೊದಲ ರಾತ್ರಿಗೆ ಸಜ್ಜಾಗುವಾಗ ಮನಸ್ಸಿನ ಜತೆಗೆ, ದೇಹ, ತೊಡುವ ಬಟ್ಟೆ ಎಲ್ಲವೂ ಶುದ್ಧವಾಗಿರಲಿ. ಸುಂದರವಾಗಿ ಕಾಣುವುದಷ್ಟೇ ಅಲ್ಲ, ವೈಯಕ್ತಿಕ ಶುಚಿತ್ವಕ್ಕೂ ಹೆಚ್ಚಿನ ಪ್ರಧಾನ್ಯತೆ ಕೊಡಿ.
 
ಸೆಕ್ಸ್ ಬಗ್ಗೆ ಆತಂಕ ಬೇಡ
ಮೊದಲ ರಾತ್ರಿಯೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಆಗುವ ಎಡವಟ್ಟುಗಳಿಂದ ಕೀಳರಿಮೆಗೊಳಗಾಗಬೇಡಿ. ಮೊದ ಮೊದಲು ಈ ರೀತಿ ಆಗುವುದೆಲ್ಲಾ ಸಹಜ.
 
ಮಿಲನ ಕ್ರಿಯೆಯೇ ಎಲ್ಲಾ ಅಲ್ಲ!
ಮೊದಲ ರಾತ್ರಿ ಎನ್ನುವ ಬಗ್ಗೆ ಹಲವು ಸಿನಿಮಾ ನೋಡಿ ಅದೇ ಕಲ್ಪನೆಯಲ್ಲಿರುತ್ತೇವೆ. ಆದರೆ ಕಲ್ಪನೆಗೂ ವಾಸ್ತವಕ್ಕೂ ವ್ಯತ್ಯಾಸವಿದೆ. ಮೊದಲ ರಾತ್ರಿಯೇ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕೆಂದಿಲ್ಲ. ಮೊದಲು ನೀವಿಬ್ಬರೂ ಮಾತಾಡಿಕೊಳ್ಳಿ, ಹೊಂದಿಕೊಳ್ಳಲು ಸಮಯ ನೀಡಿ. ಇದರಿಂದ ಇಬ್ಬರೂ ಹೆಚ್ಚು ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಬಹುದು. ದಾಂಪತ್ಯ ಜೀವನ ಎಂದರೆ ಸೆಕ್ಸ್ ಒಂದೇ ಅಲ್ಲ ಎನ್ನುವುದನ್ನು ನೆನಪಿಡಿ!
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಇಂತಹದ್ದೊಂದು ಸೆಕ್ಸ್ ಟಿಪ್ಸ್ ಕೊಟ್ಟರೆ ನಂಬಬೇಡಿ!

ಬೆಂಗಳೂರು: ಸೆಕ್ಸ್, ರೊಮ್ಯಾನ್ಸ್ ಬಗ್ಗೆ ಹಲವು ಟಿಪ್ಸ್ ಗಳನ್ನು ನಾವು ಅಂತರ್ಜಾಲದಲ್ಲಿ ...

news

ಆಂಧ್ರ ಶೈಲಿಯಲ್ಲಿ ಚಿಕನ್ ಕರಿ

ಮೊದಲು ಕೋಳಿಯನ್ನು ಚೆನ್ನಾಗಿ ತೊಳೆದು ನಿಮಗೆ ಸೂಕ್ತವೆನಿಸಿದ ಗಾತ್ರದಲ್ಲಿ ತುಂಡು ಮಾಡಿಕೊಳ್ಳಿ. ಒಂದು ...

news

ಉತ್ತಮ ಜೀರ್ಣಕ್ರಿಯಗಾಗಿ ಮನೆಮದ್ದುಗಳು..

ನಮ್ಮ ಹೊಟ್ಟೆಯು ಕೆಟ್ಟಾಗ ಹೇಗಿರುತ್ತದೆ ಎಂಬುದು ನಮ್ಮೆಲ್ಲರಿಗೂ ತಿಳಿದಿದೆ. ಅಜೀರ್ಣವು ಒಂದು ಸಾಮಾನ್ಯ ...

news

ತಪ್ಪದೇ ಮಾಡಿ ತುಪ್ಪದ ಬಳಕೆ

ತುಪ್ಪ ಹೆಚ್ಚಿನ ಪ್ರಮಾಣದ ಕ್ಯಾಲೋರಿ, ಪೋಷಕಾಂಶಗಳನ್ನು ಹೊಂದಿದ್ದು ವೈರಸ್ ಅಥವಾ ಬ್ಯಾಕ್ಟೀರಿಯ ವಿರುದ್ದ ...

Widgets Magazine