ನಿಮ್ಮ ಮಕ್ಕಳಿಗೆ ಮಲಬದ್ಧತೆ ಸಮಸ್ಯೆ ಕಾಡದಿರಲು ಇವುಗಳನ್ನು ನೀಡಿ

ಬೆಂಗಳೂರು, ಶನಿವಾರ, 11 ಆಗಸ್ಟ್ 2018 (10:48 IST)

ಬೆಂಗಳೂರು : ಮಕ್ಕಳನ್ನು ಕಾಡುವ ಸಾಮಾನ್ಯ ಸಮಸ್ಯೆಗಳಲ್ಲಿ ಮಲ ಬದ್ಧತೆಯೂ ಒಂದು. ಎರಡು-ಮೂರು ದಿನವಾದರೂ ಮಲ ವಿಸರ್ಜಸದೇ ಹೋದಲ್ಲಿ, ಮಗುವಿಗೆ ಹೊಟ್ಟೆನೋವು ಇರಬಹುದೆಂದು ತಾಯಿ ಆತಂಕಗೊಳ್ಳುತ್ತಾಳೆ. ಮಕ್ಕಳನ್ನು ಕಾಡೋ ಈ ಸಮಸ್ಯೆಗೆ ಇಲ್ಲಿವೆ ಸಿಂಪಲ್ ಮದ್ದು.


ನೀರು: ಮಗು ದಿನವಿಡೀ ಸಾಕಷ್ಟು ನೀರು ಕುಡಿಯುವಂತೆ ನೋಡಿಕೊಳ್ಳಿ. ಇಲ್ಲವಾದ್ದರೆ ಮಕ್ಕಳಿಗೆ ಮಲಬದ್ಧತೆ ಸಮಸ್ಯೆ ಕಾಡುತ್ತದೆ. ನೀರಿನ ಅಂಶ ಕಡಿಮೆಯಾಗೋದರಿಂದ ಹೆಚ್ಚಾಗಿ ಈ ಸಮಸ್ಯೆ ಕಂಡು ಬರುತ್ತದೆ. ಪ್ರತಿದಿನ ಮಲವಿಸರ್ಜನೆ ಸರಾಗವಾಗಿ ಆಗಬೇಕೆಂದಿದ್ದರೆ ಸಾಧ್ಯವಾದಷ್ಟು ನೀರನ್ನು ಮಗುವಿಗೆ ನೀಡಬೇಕು. 


ಫೈಬರ್ ಅಂಶ ಆಹಾರ : ಹೌದು ಮಕ್ಕಳಿಗೆ ನಾರಿನಂಶ ಇರುವಂತಹ ಆಹಾರ ನೀಡಿದರೆ ಮಲಬದ್ಧತೆಯ ಸಮಸ್ಯೆಗೆ ಫುಲ್‌ಸ್ಟಾಪ್ ಇಡಬಹುದು. ಅದಕ್ಕಾಗಿ ಬಾಳೆಹಣ್ಣು, ಸೇಬು ಹಣ್ಣು, ಸೀಬೆ ಹಣ್ಣು, ಕಿತ್ತಲೆ ಹಣ್ಣುಗಳನ್ನು ಹೆಚ್ಚು ಹೆಚ್ಚು ನೀಡಿದರೆ ಉತ್ತಮ. ಇದಲ್ಲದೆ ಫೈಬರ್ ಅಂಶ ಇರುವಂತಹ ದವಸ ಧಾನ್ಯಗಳು, ಬೀನ್ಸ್ ಮೊದಲಾದವುಗಳನ್ನು ಪ್ರತಿನಿತ್ಯ ಮಗುವಿಗೆ ನೀಡಿದರೆ ಮಲ ವಿಸರ್ಜನೆ ಸರಿಯಾಗಿ ಆಗುತ್ತದೆ. 


ಆಲಿವ್ ಆಯಿಲ್: ಖಾಲಿ ಹೊಟ್ಟೆಗೆ ಒಂದು ಚಮಚ ಆಲಿವ್ ಆಯಿಲ್ ಜತೆ, ಒಂದು ಚಮಚ ನಿಂಬೆರಸ ಬೆರೆಸಿ, ಸೇವಿಸಿದರೆ ಹೊಟ್ಟೆ ಹಗುರವಾಗುತ್ತದೆ. ಮಲ ವಿಸರ್ಜನೆ ಸರಿಯಾಗಿ ಆಗುತ್ತದೆ. 

ಅಲೋವೆರಾ: ಅಲೋವೆರಾವನ್ನು ಸೌಂದರ್ಯ ಹೆಚ್ಚಿಸುವಲ್ಲಿ ಉಪಯೋಗಿಸುತ್ತಾರೆ. ಇದರಿಂದ ಮಲಬದ್ಧತೆ ಸಮಸ್ಯೆಯನ್ನೂ ನಿವಾರಿಸಬಹುದು. ಎರಡು ಚಮಚ ಅಲೋವೆರಾ ಜೆಲ್ ಅನ್ನು ಒಂದು ಗ್ಲಾಸ್ ಬಿಸಿ ನೀರಿಗೆ ಹಾಕಿ ಕುಡಿಯಲು ನೀಡಿದರೆ ಹೊಟ್ಟೆ ಹಗುರವಾಗುತ್ತದೆ.

ಮೊಸರು: ಮಕ್ಕಳಲ್ಲಿ ಮಲವಿಸರ್ಜನೆ ಸರಾಗವಾಗಿ ನಡೆಯಬೇಕೆಂದರೆ ಮೊಸರು ಉತ್ತಮ ಔಷಧಿ. ಇದನ್ನು ಮಕ್ಕಳಿಗೆ ಸೇವಿಸಲು ನೀಡಿದರೆ ಅದರಲ್ಲಿರುವ ಉತ್ತಮ ಬ್ಯಾಕ್ಟಿರಿಯಾದಿಂದ ಹೊಟ್ಟೆ ಕ್ಲೀನ್ ಆಗುತ್ತದೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹಾವಿನ ಕನಸಿಗೂ ಲೈಂಗಿಕ ಸುಖಕ್ಕೂ ಸಂಬಂಧವಿದೆಯಂತೆ! ಹೇಗೆ ಗೊತ್ತಾ?

ಬೆಂಗಳೂರು: ರಾತ್ರಿ ನಿದ್ರೆ ಮಾಡುವಾಗ ತರಹೇವಾರಿ ಕನಸುಗಳು ಬೀಳುವುದು ಸಹಜ. ಒಂದು ವೇಳೆ ನಿಮಗೆ ಆಗಾಗ ...

news

ನೆರಿಗೆ ಮುಕ್ತ ಮುಖ ನಿಮ್ಮದಾಗಬೇಕೆ? ಇಲ್ಲಿದೆ ನೋಡಿ ಒಂದು ಮನೆಮದ್ದು

ಬೆಂಗಳೂರು: ಮುಖದಲ್ಲಿ ನೆರಿಗೆ ಮೊಡವೆ, ಕಪ್ಪು ಕಲೆ ಇವುಗಳ ಸಮಸ್ಯೆ ಇದ್ದರೆ ಯಾವುದೇ ಕಾರ್ಯಕ್ರಮಕ್ಕೂ ...

news

ವೀರ್ಯಾಣು ಹೆಚ್ಚಿಸಲು ಪುರುಷರು ಈ ಆಹಾರ ಸೇವಿಸಿದರೆ ಸಾಕು!

ಬೆಂಗಳೂರು: ಪುರುಷರಲ್ಲಿ ವೀರ್ಯಾಣು ವೃದ್ಧಿಗೆ ನಮ್ಮ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಕೆ ಮಾಡುವ ಕೆಲವು ...

news

ಒಣಕೆಮ್ಮಿನ ನಿವಾರಣೆಗೆ ಬಳಸಿ ಈ ಸರಳ ಮನೆಮದ್ದು

ವಾತಾವರಣದಲ್ಲಿ ಉಂಟಾಗುವ ಬದಲಾವಣೆಗಳು, ಅಲರ್ಜಿ, ಮಾಲಿನ್ಯದಿಂದ ನಮ್ಮಲ್ಲಿ ಕೆಮ್ಮು, ಜ್ವರ, ಒಣಕೆಮ್ಮು, ...

Widgets Magazine