ಕ್ಯಾರೆಟ್ ತಿನ್ನುತ್ತಿದ್ದರೆ ಈ ಲಾಭ ಗ್ಯಾರಂಟಿ!

ಬೆಂಗಳೂರು, ಬುಧವಾರ, 22 ನವೆಂಬರ್ 2017 (08:09 IST)

ಬೆಂಗಳೂರು: ಕ್ಯಾರೆಟ್ ಕಣ್ಣಿಗೆ ಒಳ್ಳೆಯದು ಎಂದು ನಮಗೆಲ್ಲಾ ಗೊತ್ತು. ಕ್ಯಾರೆಟ್ ತಿನ್ನುತ್ತಿದ್ದರೆ ಇನ್ನೂ ಹಲವು ಆರೋಗ್ಯಕರ ಲಾಭಗಳಿವೆ. ಅವು ಯಾವುವು ನೋಡೋಣ.
 

ತೂಕ ಇಳಿಕೆಗೆ
ತೂಕ ಕಳೆದುಕೊಳ್ಳಲು ಬಯಸುವವರು ಕ್ಯಾರೆಟ್ ಸೇವನೆ ಮಾಡಬೇಕು. ಇದರಲ್ಲಿ ಫೈಬರ್ ಅಂಶ ಹೆಚ್ಚಿದೆ. ಇದು ನಮ್ಮ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ.
 
ಜೀರ್ಣಕ್ರಿಯೆಗೆ
ಮೊದಲೇ ಹೇಳಿದಂತೆ ಇದರಲ್ಲಿ ಜೀರ್ಣಕ್ರಿಯೆಗೆ ಅಗತ್ಯವಾದ ಅಂಶವಿದೆ. ಹೀಗಾಗಿ ಜೀರ್ಣಕ್ರಿಯೆಗೆ ಸಂಬಂಧಿಸಿದಂತೆ ಮಲಬದ್ಧತೆ, ಅಸಿಡಿಟಿಯಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ.
 
ಹೃದಯ ಆರೋಗ್ಯ
ಕ್ಯಾರೆಟ್ ಸೇವನೆಯಿಂದ ಹೃದಯದ ರಕ್ತನಾಳಗಳ ದ್ವಾರದಲ್ಲಿ ಬೇಡದ ಕೊಬ್ಬು ಸಂಗ್ರಹವಾಗುವುದು ತಡೆಗಟ್ಟಬಹುದು. ಕೊಬ್ಬಿನಂಶ ನಿಯಂತ್ರಿಸುವುದರಿಂದ ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು.
 
ರೋಗ ನಿರೋಧಕ ಶಕ್ತಿ
ಕ್ಯಾರಟ್ ನಲ್ಲಿ ಪೋಷಕಾಂಶಗಳು, ಆಂಟಿಆಕ್ಸಿಡೆಂಟ್, ಖನಿಜಾಂಶಗಳು ಸಾಕಷ್ಟಿದ್ದು ಉತ್ತಮ ರೋಗ ನಿರೋಧಕ ಶಕ್ತಿಯಾಗಿ ಕಾರ್ಯ ನಿರ್ವಹಿಸುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಆಹಾರ ಆರೋಗ್ಯ Food Health

ಆರೋಗ್ಯ

news

ಫ್ರಿಡ್ಜ್ ಶುಚಿಯಾಗಿಡಲು ಕೆಲವು ಉಪಾಯಗಳು

ಬೆಂಗಳೂರು: ಪ್ರಿಡ್ಜ್ ಶುಚಿಯಾಗಿಡುವುದೇ ಗೃಹಿಣಿಯರಿಗೆ ದೊಡ್ಡ ತಲೆನೋವಿನ ವಿಷಯ. ಫ್ರಿಡ್ಜ್ ಶುಚಿಯಾಗಿಡಲು ...

news

ತೂಕ ಹೆಚ್ಚಿಸಲು ಸೀಬೇಕಾಯಿ ಸೇವಿಸಬಹುದೇ?

ಬೆಂಗಳೂರು: ಹೆಚ್ಚಿನವರಿಗೆ ನೈಸರ್ಗಿಕವಾಗಿ ತೂಕ ಇಳಿಸುವ ಚಿಂತೆ. ಹೀಗೆ ತೂಕ ಇಳಿಸುವವರು ಯಾವುದೆಲ್ಲಾ ಹಣ್ಣು ...

news

ಮೈಗ್ರೇನ್ ತಲೆನೋವಿಗೆ ಸೆಕ್ಸ್ ಪರಿಹಾರ!

ಬೆಂಗಳೂರು: ಸೆಕ್ಸ್ ಗೂ ತಲೆನೋವಿಗೂ ಸಂಬಂಧವಿದೆಯೇ? ತಲೆನೋವಿದ್ದರೆ ಸೆಕ್ಸ್ ನೋವು ನಿವಾರಕ ಗುಳಿಗೆಯಾಗಿ ...

news

ಥಟ್ ಅಂತ ತಟ್ಟೆ ಖಾಲಿ ಮಾಡುವವರೇ ಹುಷಾರ್!

ಬೆಂಗಳೂರು: ಕೆಲವರಿಗೆ ತಟ್ಟೆಯಲ್ಲಿ ತಿಂಡಿ ಇಟ್ಟ ಮರುಕ್ಷಣದಲ್ಲಿ ಅದು ಖಾಲಿಯಾಗಿರುತ್ತದೆ. ಈ ರೀತಿ ಥಟ್ ಅಂತ ...

Widgets Magazine