ಸೀಬೇಕಾಯಿ ತಿನ್ನುವುದರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ?

ಬೆಂಗಳೂರು, ಮಂಗಳವಾರ, 17 ಅಕ್ಟೋಬರ್ 2017 (08:37 IST)

ಬೆಂಗಳೂರು: ಸೀಬೇಕಾಯಿ ಸುಲಭವಾಗಿ ಸಿಗುವ ಹಣ್ಣು. ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಸೀಬೇಕಾಯಿ ನಮ್ಮ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಎಷ್ಟು ಉಪಯುಕ್ತ ಎಂದು ಗೊತ್ತಾ?


 
ರೋಗ ನಿರೋಧ ಶಕ್ತಿ
ಸೀಬೇಕಾಯಿಯಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿದೆ. ಹಾಗಾಗಿ ಇದು ಉತ್ತಮ ರೋಗ ನಿರೋಧಕ ಶಕ್ತಿ ಒದಗಿಸುತ್ತದೆ.
 
ಕ್ಯಾನ್ಸರ್ ದೂರ ಮಾಡುತ್ತದೆ
ಸೀಬೇಕಾಯಿಯಲ್ಲಿರುವ ಪೋಷಕಾಂಶಗಳು ಕ್ಯಾನ್ಸರ್ ಕಣಗಳು ಬೆಳೆಯದಂತೆ ನೋಡಿಕೊಳ್ಳುತ್ತದೆ. ಅದರಲ್ಲೂ ವಿಶೇಷವಾಗಿ ಗರ್ಭಕೋಶ ಮತ್ತು ಸ್ತನ ಕ್ಯಾನ್ಸರ್  ಬಾರದಂತೆ ತಡೆಯುತ್ತದೆ.
 
ಹೃದಯ ಕಾಪಾಡುತ್ತದೆ
ಸೀಬೇಕಾಯಿ ದೇಹದಲ್ಲಿ ಸೋಡಿಯಂ ಮತ್ತು ಪೊಟೇಶಿಯಂ ಅಂಶವನ್ನು ಸಮತೋಲದಲ್ಲಿರಿಸುತ್ತದೆ. ಇದರಿಂದ ಸಹಜವಾಗಿ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಸಹಜವಾಗಿ ಹೃದಯದ ಚೆನ್ನಾಗಿರುತ್ತದೆ.
 
ಮಲಬದ್ಧತೆ
ಸೀಬೇಕಾಯಿ ನಮ್ಮ ದೇಹಕ್ಕೆ ಅಗತ್ಯವಾದ ನಾರಿನಂಶ ಒದಗಿಸಬಲ್ಲದು. ಹಾಗಾಗಿ ಇದು ಜೀರ್ಣಕ್ರಿಯೆಯನ್ನೂ ಸುಗಮಗೊಳಿಸುತ್ತದೆ. ಇದರಿಂದಾಗಿ ಮಲಬದ್ಧತೆ ಸಮಸ್ಯೆ ದೂರವಾಗಬಹುದು.
 
ಕಣ್ಣಿನ ಆರೋಗ್ಯ
ಸೀಬೇಕಾಯಿಯಲ್ಲಿ ವಿಟಮಿನ್ ಎ ಅಂಶವೂ ಬೇಕಾದಷ್ಟಿರುವ ಕಾರಣ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ದೃಷ್ಟಿ ಚುರುಕುಗೊಳ್ಳಬೇಕಾದರೆ ದಿನಕ್ಕೊಂದು ಸೀಬೇಕಾಯಿ ತಪ್ಪದೇ ತಿನ್ನಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಏನನ್ನು ಸೇವಿಸಬೇಕು?

ಬೆಂಗಳೂರು: ಇನ್ನೂ ಮಳೆಗಾಲ ನಿಂತಿಲ್ಲ. ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಶೀತ, ಜ್ವರ, ಕೆಮ್ಮು ...

news

ಮೂಗಿನಲ್ಲಿ ರಕ್ತ ಸೋರಲು ಕಾರಣಗಳೇನು?

ಬೆಂಗಳೂರು: ಸಹಜ ಚಟುವಟಿಕೆಯಲ್ಲಿರುವಾಗಲೇ ಇದ್ದಕ್ಕಿದ್ದಂತೆ ಮೂಗಿನಲ್ಲಿ ರಕ್ತ ಸೋರುತ್ತಿದ್ದರೆ ...

news

ಟಾನ್ಸಿಲ್ ಸಮಸ್ಯೆಯೇ? ಹಾಗಿದ್ದರೆ ಈ ಮನೆ ಮದ್ದು ಮಾಡಿ

ಬೆಂಗಳೂರು: ಶೀತ ಪ್ರಕೃತಿಯವರಿಗೆ ಟಾನ್ಸಿಲ್ ಸಮಸ್ಯೆ ಹೆಚ್ಚು. ಟಾನ್ಸಿಲ್ ನೋವಿದ್ದರೆ ಉಗುಳು ನುಂಗಲೂ ಆಗದ ...

news

ಮೈಗ್ರೇನ್ ತಲೆ ನೋವಿಗೆ ಈ ಮನೆ ಮದ್ದು ಮಾಡಿ

ಬೆಂಗಳೂರು: ಒತ್ತಡದ ಜೀವನ ಶೈಲಿಯಿಂದಾಗಿ ಹಲವರು ಮೈಗ್ರೇನ್ ತಲೆನೋವಿನಿಂದ ಬಳಲುತ್ತಿರುತ್ತಾರೆ. ಈ ಅಸಹನೀಯ ...

Widgets Magazine