ಆರೋಗ್ಯಕರ ಪೇರಳೆ ಹಣ್ಣಿನ/ಸೀಬೆ ಹಣ್ಣಿನ ಲಾಭಗಳು

ಬೆಂಗಳೂರು, ಮಂಗಳವಾರ, 9 ಅಕ್ಟೋಬರ್ 2018 (18:11 IST)

ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ‘ಸಿ’ಯನ್ನು ಹೊಂದಿರುವ ಹಣ್ಣೆಂದರೆ ಅದು ಪೇರಳೆ ಹಣ್ಣಾಗಿದೆ. ಪೇರಳೆ ಹಣ್ಣು ಬೀಟಾ ಕ್ಯಾರೋಟಿನ್, ಲೈಕೋಪಿನ್, ನಾರಿನಂಶ, ಆ್ಯಂಟಿ ಆಕ್ಸಿಡೆಂಟ್, ಪೊಟ್ಯಾಸಿಯಂ ಮುಂತಾದವುಗಳನ್ನು ಹೊಂದಿದೆ. ಇದು ಆರೋಗ್ಯ, ಕೂದಲು, ಚರ್ಮಕ್ಕೆ ತುಂಬಾ ಲಾಭಕರವಾಗಿದೆ.
* ವಾರಕ್ಕೆ ಮೂರು ಪೇರಳೆ ಹಣ್ಣು ಸೇವನೆ ಮಾಡಿದರೆ ಹಿಮೋಗ್ಲೋಬಿನ್ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು.
 
* ಪೇರಳೆ ಹಣ್ಣಿಗೆ ಉಪ್ಪು ಹಾಕಿ ತಿಂದರೆ ಹಲ್ಲುಗಳು ಸ್ವಚ್ಛವಾಗುತ್ತದೆ.
 
* ಪೇರಳೆ ಹಣ್ಣಿನ ಸೇವನೆಯಿಂದ ಜೀರ್ಣಶಕ್ತಿ ಹೆಚ್ಚುತ್ತದೆ.
 
* ಪೇರಳೆ ಹಣ್ಣಿನ ಸೇವನೆಯಿಂದ ಅಜೀರ್ಣದಿಂದ ಉಂಟಾಗುವ ವಾಂತಿ, ತಲೆಸುತ್ತು, ಹೊಟ್ಟೆನೋವು ನಿವಾರಣೆಯಾಗುತ್ತದೆ.
 
* ಪೇರಳೆ ಹಣ್ಣಿನಲ್ಲಿ ಲಿಕೊಪೇನ್‌, ಕ್ವೆರ್ಸೆಟಿನ್‌, ವಿಟಾಮಿನ್‌ ಸಿ ಮತ್ತು ಇತರ ಅಂಶಗಳು ಸೇರಿಕೊಂಡಿರುವುದರಿಂದ ಕ್ಯಾನ್ಸರ್‌ ಉಂಟುಮಾಡುವ ಸೆಲ್‌ಗಳ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ.
 
* ಪೇರಳೆ ಹಣ್ಣಿನಲ್ಲಿರುವ ವಿಟಮಿನ್ ಬಿ ಆರೋಗ್ಯಕಾರಿ ಕೂದಲಿನ ಬೆಳವಣಿಗೆ ಮತ್ತು ನಿರ್ವಹಣೆಗೆ ನೆರವಾಗುತ್ತದೆ.
 
* ಪೇರಳೆ ಎಲೆಗಳನ್ನು ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿ ಒಣಗಲು ಬಿಡಿ. ಬಳಿಕ ಸ್ವಚ್ಛವಾದ ತಣ್ಣೀರಿನಿಂದ ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ಮೊಡವೆ ಮತ್ತು ಕಪ್ಪುಚುಕ್ಕೆಗಳು ಕಡಿಮೆಯಾಗುತ್ತದೆ.
 
* ಪ್ರತಿದಿನ ಊಟದ ನಂತರ ಸೀಬೆ ಎಲೆ ಹಾಕಿ ಬೇಯಿಸಿದ ನೀರನ್ನು ಸೇವಿಸುವುದರಿಂದ ಮಧುಮೇಹದ ಇತರ ಲಕ್ಷಣಗಳಾದ ಹೈಪರ್ಗ್ಲೆಸೀಮಿಯಾ, ಹೈಪರ್‌ ಇನ್ಸುಲೇಮಿಯಾ, ಇನ್ಸುಲಿನ್ ಪ್ರತಿರೋಧ ಮತ್ತು ಅಧಿಕ ಕೊಬ್ಬಿನ ಮಟ್ಟವನ್ನು ನಿಯಂತ್ರಣಕ್ಕೆ ಬರುತ್ತದೆ.
 
* ಮಂದ ದೃಷ್ಟಿ ಮತ್ತು ಸಂಧಿವಾತವನ್ನು ನಿವಾರಿಸುವಲ್ಲಿ ಪೇರಳೆ ಹಣ್ಣು ಸಹಕಾರಿಯಾಗಿದೆ.
 
* ಪೇರಳೆ ಹಣ್ಣಿನಲ್ಲಿರುವ ಪೊಟ್ಯಾಸಿಯ೦ ಅ೦ಶವು ರಕ್ತದೊತ್ತಡವನ್ನು ನಿರ್ವಹಿಸಲು ಸಹಕಾರಿಯಾಗಿದೆ.
 
* ಪೇರಳೆ ಹಣ್ಣಿನ ಎಲೆಯ ಕಷಾಯದಿಂದ ನೆಗಡಿ, ಕೆಮ್ಮು ಶಮನವಾಗುತ್ತದೆ.
 
* ಪೇರಳೆ ಹಣ್ಣಿನ ಬೀಜ ತೆಗೆದು ತಿರುಳಿಗೆ ಜೇನು ತುಪ್ಪ ಬೆರೆಸಿ ಗರ್ಭಿಣಿಯರು ಸೇವಿಸಿದರೆ ಹೃದ್ರೋಗ, ಅರಿಶಿನ ಕಾಮಾಲೆ, ಉಬ್ಬಸ ಹಾಗೂ ಕ್ಷಯದಂತಹ ಕಾಯಿಲೆಗಳು ಕಡಿಮೆಯಾಗುತ್ತದೆ.
 
* ಪೇರಳೆ ಎಲೆಯನ್ನು ಜಜ್ಜಿ 1 ಲೀಟರ್‌ ನೀರಿಗೆ ಹಾಕಿ ಕುದಿಸಿ ತಣ್ಣಗಾದ ನಂತರ ದಿನಕ್ಕೆ 3 ಬಾರಿ ಕುಡಿದರೆ ಅಸ್ತಮಾ ರೋಗ ಕಡಿಮೆಯಾಗುತ್ತದೆ ಮತ್ತು ಜೀರ್ಣಶಕ್ತಿಯು ಹೆಚ್ಚುತ್ತದೆ. 
 
* ಪೇರಳೆ ಹಣ್ಣಿನಲ್ಲಿರುವ ಡಯಟರಿ ಫೈಬರ್‌ ಮಲಬದ್ಧತೆ ಸಮಸ್ಯೆಯನ್ನು ಸಂಪೂರ್ಣವಾಗಿ ಕಡಿಮೆಯಾಗುತ್ತದೆ.
 
* ಪೇರಳೆ ಎಲೆಗಳನ್ನು ಕುದಿಸಿ ತಣಿಸಿದ ನೀರನ್ನು ಕುಡಿಯುವ ಮೂಲಕ ಈ ಅಲರ್ಜಿಯನ್ನು ಕಡಿಮೆಗೊಳಿಸಬಹುದು
 
* ವೀರ್ಯೋತ್ಪತ್ತಿ ಕಡಿಮೆಯಿದ್ದ ಪುರುಷರು ಪೇರಳೆ ಹಣ್ಣನ್ನು ಸೇವಿಸಬೇಕು.
 
* ಪೇರಳೆ ಹಣ್ಣಿನಲ್ಲಿರುವ ಆ೦ಟಿ ಆಕ್ಸಿಡೆ೦ಟ್‌ಗಳು ತ್ವಚೆಯು ತಾರುಣ್ಯಪೂರ್ಣವಾಗಿ ಕಾಣವ೦ತಾಗಲು ಸಹಕರಿಸುತ್ತವೆ.
 
* ಪೇರಳೆ ಹಣ್ಣಿನ್ನು ಹಾಲು ಮತ್ತು ಜೇನಿನ ಜೊತೆಗೆ ಕ್ರಮವಾಗಿ ಸೇವಿಸಿದರೆ ಹೃದಯದ ಆರೋಗ್ಯಕ್ಕೆ ಒಳ್ಳೆಯದು.
 
* ಶ್ರೀಗಂಧದೊಂದಿಗೆ ಪೇರಳೆ ಎಲೆಗಳನ್ನು ತೇದು ಹಚ್ಚಿದರೆ ಕಜ್ಜಿ, ತುರಿಕೆ, ಹುಳುಕಡ್ಡಿ ಕಡಿಮೆಯಾಗುತ್ತದೆ ಮತ್ತು ಇದನ್ನು ತಲೆಗೆ ಹಚ್ಚಿಕೊಂಡು 1 ಗಂಟೆ ಬಿಟ್ಟು ಸ್ನಾನ ಮಾಡಿದರೆ ಹೇನುಗಳು ಸಾಯುತ್ತವೆ.
 
* ಪೇರಳೆಯ ಚಿಗುರು ಎಲೆಗಳ ಕಷಾಯವನ್ನು ತಯಾರಿಸಿ ಅದಕ್ಕೆ ಉಪ್ಪು ಹಾಕಿ ದಿನಕ್ಕೆ 3 ಬಾರಿ ಬಾಯಿ ಮುಕ್ಕಳಿಸಿದರೆ ಬಾಯಿ ದುರ್ನಾತ ಕಡಿಮೆಯಾಗುತ್ತದೆ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮ್ಯಾಕ್ಸಿಕನ್ ಬ್ರೆಡ್ ರೋಲ್

ನಿಮಗೆ ಒಂದೇ ರೀತಿಯ ಬ್ರೆಡ್‌ಗಳಲ್ಲಿ ತಯಾರಿಸೋ ತಿನಿಸುಗಳನ್ನು ತಿಂದು ಬೇಜಾರ್ ಆಗಿದೆಯಾ, ಸ್ವಲ್ಪ ...

news

ಆರೋಗ್ಯಕರ ಕಬ್ಬಿನ ಹಾಲು

ತಂಪು ಪಾನೀಯಗಳನ್ನು ಸೇವಿಸಲು ಕಾರಣಗಳೇ ಬೇಕೆಂದೇನಿಲ್ಲ. ಅದರಲ್ಲಿಯೂ ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ನಾವು ...

news

ಚಾಕೋಲೇಟ್ ಟೀ

ಟೀ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಅದರಲ್ಲಿಯೂ ಜೋರಾದ ಮಳೆ ಬರುವಾಗ ಬಿಸಿ ಬಿಸಿ ಚಾ ಕುಡಿಯುವ ಮಜವೇ ಬೇರೆ. ...

news

ಅಧಿಕ ಪ್ರೋಟೀನ್ ಅಂಶವನ್ನು ಹೊಂದಿರುವ ಅಡೈ ದೋಸಾ...

ಅಡೈ ದೋಸೆ ಎನ್ನುವುದು ತಮಿಳುನಾಡಿನಲ್ಲಿ ಪ್ರಸಿದ್ಧಿಯಲ್ಲಿರುವ ಒಂದು ರೀತಿಯ ದೋಸೆಯಾಗಿದೆ. ಸಾಮಾನ್ಯವಾಗಿ ...

Widgets Magazine