ಹಲ್ಲಿಗಳನ್ನು ಮನೆಯಿಂದ ಓಡಿಸಲು ಸುಲಭ ಉಪಾಯ ಇಲ್ಲಿದೆ ನೋಡಿ

ಬೆಂಗಳೂರು, ಮಂಗಳವಾರ, 26 ಡಿಸೆಂಬರ್ 2017 (10:21 IST)

ಬೆಂಗಳೂರು: ಮನೆಯ ಗೊಡೆಗಳ ಮೇಲೆ ಹಲ್ಲಿಗಳು ಯಾವಾಗಲೂ ಓಡಾಡುತ್ತಾ ಇರುವುದನ್ನು ನಾವು ನೋಡಿರುತ್ತೆವೆ. ಅವು ಮನೆಯ ಗೋಡೆಗಳ ಮೇಲೆ ಗಲೀಜುಗಳನ್ನು ಮಾಡುತ್ತಿರುತ್ತವೆ. ಹಾಗೆ ಓಡಾಡುವಾಗ ಆಯತಪ್ಪಿ ಮೈಮೇಲೆ ಕೂಡ ಬೀಳುತ್ತವೆ. ಕೆಲವೊಮ್ಮೆ ಮಾಡಿರುವ ಅಡುಗೆಗಳ ಮೇಲೆ ಬೀಳುತ್ತವೆ. ಅವುಗಳಲ್ಲಿ ವಿಷವಿರುವುದರಿಂದ ತಿನ್ನುವ ಆಹಾರದಲ್ಲಿ ಬಿದ್ದರೆ ಜೀವಕ್ಕೆ ಅಪಾಯವಾಗುತ್ತದೆ. ಆದ್ದರಿಂದ ಅವುಗಳನ್ನು ಮನೆಯಿಂದ ಓಡಿಸುವುದೆ  ಉತ್ತಮ. ಅವುಗಳನ್ನು ಮನೆಯಿಂದ ಓಡಿಸಲು ಸುಲಭ ಮಾರ್ಗಗಳಿವೆ.


ಮೊಟ್ಟೆಯ ವಾಸನೆ ಹಲ್ಲಿಗಳಿಗೆ ಹಿಡಿಸುವುದಿಲ್ಲವಾದ್ದರಿಂದ ಒಡೆದ ಮೊಟ್ಟೆಯ ಹೊರಕವಚವನ್ನು ಹಲ್ಲಿ ಓಡಾಡುವ ಸ್ಥಳದಲ್ಲಿ ನೇತು ಹಾಕಿದರೆ ಅವು ಮನೆ ಬಿಟ್ಟು ಹೊರಹೋಗುತ್ತವೆ. ಹಾಗೆಯೆ ಈರುಳ್ಳಿ ವಾಸನೆ ಕೂಡ ಹಲ್ಲಿಗೆ ಸಹಿಸಿಕೊಳ್ಳಲಾಗದ ಕಾರಣ ಈರುಳ್ಳಿಯನ್ನು ರುಬ್ಬಿ ನೀರಿನೊಂದಿಗೆ ಬೇರೆಸಿ ಹಲ್ಲಿ ಓಡಾಡುವ ಜಾಗದಲ್ಲಿ ಸ್ಪ್ರೇ ಮಾಡಿದರೆ ಅವುಗಳ ಕಿರಿಕಿರಿ ಇರುವುದಿಲ್ಲ.
ಅಲಲ್ಲಿ ಬೆಳ್ಳುಳ್ಳಿ ಗೊಂಚಲನ್ನು ಕಟ್ಟಿ ನೇತು ಹಾಕುವುದರಿಂದ ಕೂಡ ಹಲ್ಲಿಗಳನ್ನು ಮನೆಯಿಂದ ಓಡಿಸಬಹುದು. ಕಾಫಿ ಬೀಜ ಹಾಗು ತಂಬಾಕು ಮಿಶ್ರಣವನ್ನು ಕುಟ್ಟಿ ಉಂಡೆಯನ್ನಾಗಿ ಮಾಡಿ ಟೂತ್ ಪಿಕ್ ನಲ್ಲಿ ಕಟ್ಟಿ ನೇತು ಹಾಕುವುದರಿಂದಲೂ  ಹಲ್ಲಿಗಳನ್ನು ದೂರವಿರಿಸಬಹುದು. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಆಯಿಲ್ ಸ್ಕಿನ್ ನಿವಾರಣೆಗೆ ಸರಳ ಮನೆಮದ್ದು

ಬೆಂಗಳೂರು: ಮುಖದ ಸ್ಕಿನ್ ಆಯಿಲ್ ಆಗಿದ್ದರೆ ಅದನ್ನು ಮುಟ್ಟಲು ನಮ್ಮ ಕೈ ಹಿಂದೇಟು ಹಾಕುತ್ತದೆ. ಇದರಿಂದ ...

news

ಆಂಟಿಯರೆಂದರೆ ಹುಡುಗರಿಗೆ ಯಾಕೆ ಇಷ್ಟ ಗೊತ್ತಾ?

ಬೆಂಗಳೂರು: ಸಾಮಾನ್ಯವಾಗಿ ಪುರುಷರು ತಮಗಿಂತ ಹಿರಿಯ ವಯಸ್ಸಿನ ಮಹಿಳೆಯರಿಗೆ ಆಕರ್ಷಿತರಾಗುತ್ತಾರೆ. ...

news

ರಾತ್ರಿ ಚೆನ್ನಾಗಿ ನಿದ್ರೆ ಬರಬೇಕಾದರೆ ಹೀಗೆ ಮಾಡಿ!

ಬೆಂಗಳೂರು: ರಾತ್ರಿ ಚೆನ್ನಾಗಿ ನಿದ್ರೆ ಬರುತ್ತಿಲ್ಲವೇ? ನಿದ್ರೆಯಿಲ್ಲದೇ ಹೊರಳಾಡುತ್ತಿದ್ದೀರಾ? ಇದರಿಂದಾಗಿ ...

news

ಈರುಳ್ಳಿ ಸಿಪ್ಪೆಯ ಈ ಉಪಯೋಗ ನಿಮಗೆ ನಂಬಲೂ ಸಾಧ್ಯವಿಲ್ಲ!

ಬೆಂಗಳೂರು: ಅಡುಗೆ ಮನೆಯಲ್ಲಿ ಬಳಸಿ ಬಿಸಾಡುವ ಈರುಳ್ಳಿ ಸಿಪ್ಪೆಯಿಂದ ಎಷ್ಟು ಉಪಯೋಗವಿದೆ ಎಂದು ಗೊತ್ತಾದರೆ ...

Widgets Magazine
Widgets Magazine