ಮಕ್ಕಳ ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು, ಗುರುವಾರ, 11 ಜನವರಿ 2018 (07:29 IST)

Widgets Magazine

ಬೆಂಗಳೂರು : ಮಕ್ಕಳು ಎಲ್ಲಾ ರೀತಿಯ ತಿಂಡಿ ತಿನಿಸುಗಳನ್ನು ತಿನ್ನುವುದರಿಂದ ಅವರಿಗೂ ಕೂಡ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ. ಇದರಿಂದ ಅವರು ಊಟ ಮಾಡುವುದಿಲ್ಲ. ಯಾಕೆಂದರೆ ಅವರ ಹೊಟ್ಟೆಯಲ್ಲಿ ಗ್ಯಾಸ್ ತುಂಬಿ ಹೊಟ್ಟೆ ದಪ್ಪವಾಗಿರುತ್ತದೆ. ಇದರಿಂದ ಹೊಟ್ಟೆನೋವುಂಟಾಗಿ ತುಂಬಾನೆ ಹಠ ಮಾಡುತ್ತಾರೆ. ಇದನ್ನು ಕೆಲವು ಮನೆಮದ್ದುಗಳನ್ನು ನೀಡಿ ಈ ಸಮಸ್ಯೆಯನ್ನು ಪರಿಹರಿಸಬಹುದು. ಇದನ್ನು ಮೂರು ವರ್ಷ ಮೇಲ್ಪಟ್ಟಿರುವ ಮಕ್ಕಳಿಗೆ ನೀಡಬಹುದು.

 
ಬ್ಯಾಕ್ ಸಾಲ್ಟ್(ಕಪ್ಪು ಉಪ್ಪು) 10 ಗ್ರಾಂ, ಹಳೆ ಹುಣಸೆಹಣ್ಣು( ಕಪ್ಪಾಗಿರುವ ಹುಣಸೆಹಣ್ಣು) 20ಗ್ರಾಂ, ಜೀರಿಗೆ ಪುಡಿ 40ಗ್ರಾಂ, ಮೆಣಸಿನ ಪುಡಿ 80ಗ್ರಾಂ ಇವುಗಳನ್ನು ತೆಗೆದುಕೊಂಡು ಸ್ವಲ್ಪ ನೀರು ಹಾಕಿ ಜಜ್ಜಿ ಗಟ್ಟಿಯಾದ ಪೇಸ್ಟ್ ಮಾಡಿಕೊಳ್ಳಿ. ನಂತರ ಅದನ್ನು ಚಿಕ್ಕ ಚಿಕ್ಕ(ಬಟಾಣಿಯಷ್ಟು ಆಕಾರದ ಉಂಡೆ) ಉಂಡೆಗಳನ್ನಾಗಿ ಮಾಡಿಕೊಳ್ಳಿ. ಬಿಸಿಲಲ್ಲಿ 2-3 ದಿನ ಒಣಗಿಸಿ. ನಂತರ ಅವುಗಳನ್ನು ಒಂದು ಗಾಜಿನ ಡಬ್ಬದಲ್ಲಿ ಸ್ಟೋರ್ ಮಾಡಿ ಇಡಿ. ಇದು 6 ತಿಂಗಳಗಳ ಕಾಲ ಕೆಡದೆ ಹಾಗೆ ಇರುತ್ತದೆ. ಪ್ರತಿದಿನ ಬೆಳಿಗ್ಗೆ ಹಾಗು ರಾತ್ರಿ ಊಟ ಆದ ಮೇಲೆ ಒಂದು ಉಂಡೆಯನ್ನು ಕೊಡಿ. ಇದರಿಂದ ಮಕ್ಕಳ ಜೀರ್ಣಶಕ್ತಿಯು ಚೆನ್ನಾಗಿ ಆಗುವುದರ ಜೊತೆಗೆ ಗ್ಯಾಸ್ಟ್ರಿಕ್ ಸಮಸ್ಯೆ ಕೂಡ ಬರುವುದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಅವಳಿ ಮಕ್ಕಳು ಜನಿಸಲು ಕಾರಣವಾಗುವ ಅಂಶಗಳು ಏನು ಗೊತ್ತಾ…?

ಬೆಂಗಳೂರು : ಕೆಲವು ಮಹಿಳೆಯರು ಅವಳಿ ಮಕ್ಕಳನ್ನು ಪಡೆಯಲು ಬಯಸುತ್ತಾರೆ. ಕೆಲವರಿಗೆ ಸಮಯದ ಅಭಾವ, ಕೆಲವರಿಗೆ ...

news

ಕಾರ್ನ್ ಕಬಾಬ್

ಒಂದು ಬಟ್ಟಲಲ್ಲಿ ಮೇಲಿನ ಎಲ್ಲಾ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಕಲಸಿ

news

ಪಪ್ಪಾಯಿ ಹಣ್ಣಿನ ಪ್ರಯೋಜನಗಳು

ಪಪ್ಪಾಯದ ಆರೋಗ್ಯ ಪ್ರಯೋಜನಗಳು ಉತ್ತಮ ಜೀರ್ಣಕ್ರಿಯೆ, ಹಲ್ಲುನೋವು, ನಿಯಂತ್ರಿತ ಮುಟ್ಟಿನಿಂದ ಉಂಟಾಗುವ ಶಮನ, ...

news

ಧಾಬಾ ಶೈಲಿಯ ತವಾ ಚಿಕನ್‌

-ಒಂದು ಟೊಮ್ಯಾಟೋ ಹಾಗೂ ಒಂದು ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಇನ್ನೊಂದು ಈರುಳ್ಳಿ ಹಾಗೂ ...

Widgets Magazine