ನೆಗಡಿ, ಕೆಮ್ಮು, ಗಂಟಲು ನೋವೇ...? ಇಲ್ಲಿದೆ ಪರಿಹಾರ

ಬೆಂಗಳೂರು, ಶುಕ್ರವಾರ, 7 ಜುಲೈ 2017 (14:30 IST)

Widgets Magazine

ಬೆಂಗಳೂರು: ಮಳೆಗಾಲ ಆರಂಭವಾಯಿತು ಎಂದರೆ ಒಂದಲ್ಲ ಒಂದು ರೀತಿಯ ಅನಾರೋಗ್ಯ ಆರಂಭವಾಗುತ್ತಲೇ ಇರುತ್ತದೆ. ನೆಗಡಿ, ಕೆಮ್ಮು, ದಂತಹ ಸಮಸ್ಯೆಗಳಂತು ಸರ್ವೇ ಸಾಮಾನ್ಯ. ಆದರೆ ಇಂತಹ ಸಮಸ್ಯೆಗಳಿಗೆ ಹೆಚ್ಚು ಮಾತ್ರೆ, ಔಷಧಗಳನ್ನು ಸೇವಿಸುವುದು ಒಳ್ಳೆಯದಲ್ಲ. ಇದಕ್ಕಾಗಿ ನೀವು ಆಸ್ಪತ್ರೆಗಳಿಗೆ ಅಲೆದಾಡಬೇಕಾಗಿಲ್ಲ. ನಿಮ್ಮ ಅಂಗೈಯಲ್ಲೇ ಇದೆ ಔಷಧಿ. 
 
ಶುಂಠಿ ಪೆಪ್ಪರ್ ಕಷಾಯ:
 
ಒಂದು ಪಾತ್ರೆಯಲ್ಲಿ 1 1/2 ಗ್ಲಾಸಿನಷ್ಟು ನೀರು ಹಾಕಿ ಅದಕ್ಕೆ ಜಜ್ಜಿದ ಶುಂಠಿ, ಪೆಪ್ಪರ್ ಹಾಕಿ 10 ನಿಮಿಷಗಳ ಕಾಲ ಮುಚ್ಚಿಟ್ಟು ಕುದಿಸಿ. ಹೀಗೆ ಕುದಿಸಿದ ಕಷಾಯದ ನೀರನ್ನು ಸ್ವಲ್ಪ ಆರಲು ಬಿಟ್ಟು ಬಳಿಕ ಅದಕ್ಕೆ ಒಂದು ಚಮಚ ಜೇನುತುಪ್ಪ ಹಾಕಿ ಬಿಸಿ ಬಿಸಿಯಾಗಿ ಕುಡಿಯಿರಿ. ಹೀಗೆ ದಿನಕ್ಕೆ ಎರಡುಬಾರಿ ಮಾಡುವುದರಿಂದ ನೆಗಡಿ ಕೆಮ್ಮು ,ಅಕ್ಫ ನಿವಾರಣೆಯಾಗುತ್ತದೆ.
 
ದಾಲ್ಚಿನ್ನಿ ಕಷಾಯ:
ಒಂದು ಬಟ್ಟಲು ನೀರಿಗೆ ಅರ್ದ ಟೀ ಚಮಚ ದಾಲ್ಚಿನ್ನಿ ಚೂರ್ಣ ಮತ್ತು 1 ಚಿಟಿಕೆ ಕಾಳುಮೆಣಸಿನಪುಡಿ ಸೇರಿಸಿ ಚೆನ್ನಾಗಿ ಕುದಿಸಿ, ನಂತರ ಈ ಕಷಾಯಕ್ಕೆ 1 ಚಮಚ ಜೇನುತುಪ್ಪ ಸೇರಿಸಿ ದಿನಕ್ಕೆ ಮೂರು ಬಾರಿ ಕುಡಿದರೆ ನೆಗಡಿ ವಾಸಿಯಾಗುತ್ತದೆ.
 
ಹಾಲು-ಅರಿಷಿಣ ಕಷಾಯ:
ಬಿಸಿಯಾದ ಹಸುವಿನ ಹಾಲಿಗೆ ಸ್ವಲ್ಪ ಅರಿಶಿನಪುಡಿ ಮತ್ತು ಎರಡು ಚಿಟಿಕೆ ಕಾಳು ಮೆಣಸಿನಪುಡಿ ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಕದಡಿ ಕುಡಿದರೆ ನೆಗಡಿ, ಕೆಮ್ಮು, ಮತ್ತು ಗಂಟಲು ನೋವು ಕಡಿಮೆಯಾಗುತ್ತದೆ.
 
ಓಮಕಾಳು ಕಷಾಯ
ಓಮ ಕಾಳು ಮತ್ತು ಮೆಂತ್ಯದ ಕಷಾಯವನ್ನು ಜೇನುತುಪ್ಪದೊಂದಿಗೆ ದಿನಕ್ಕೆ ಮೂರೂ ಸಾರಿ ಕುಡಿದರೆ ಕಫಾ ನಿವಾರಣೆಯಗುತದೆ.
 
ಲೇಹ:
ಕಾಳು ಮೆಣಸನ್ನು ಹುರಿದು ನುಣ್ಣಗೆ ಪುಡಿಮಾಡಿ ಕಾಲು ಚಮಚ ಪುಡಿಯನ್ನು ಜೇನುತುಪ್ಪ ದಲ್ಲಿ ಕಲಸಿ ದಿನಕ್ಕೆ 2 ಸಲ ಸೇವಿಸಿದರೆ ನೆಗಡಿ, ಕೆಮ್ಮು ಮತ್ತು ಗೂರಲು ರೋಗಗಳು ಗುಣವಾಗುತ್ತದೆ.
 
ಲೇಹ:
ಅರಿಶಿಣದ ಪುಡಿ ಮತ್ತು ಬೆಲ್ಲವನ್ನು ಸ್ವಲ್ಪ ಹಾಲಿನೊಂದಿಗೆ ಕಲಸಿ ಗಂಟಲಿನ ಮೇಲ್ಭಾಗಕ್ಕೆ ಹಚ್ಹುವದರಿಂದ ಶೀತದ ಗಂಟಲು ನೋವು ನಿವಾರಣೆಯಾಗುತ್ತದೆ.
 Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಅರಸಿನ ಹಾಕಿದ ಹಾಲು ಕುಡಿಯುವುದರಿಂದ ಹೀಗೂ ಆಗುತ್ತದೆ!

ಬೆಂಗಳೂರು: ಪ್ರತಿನಿತ್ಯ ಒಂದು ಲೋಟ ಹಾಲು ಕುಡಿಯುವ ಅಭ್ಯಾಸ ಸಾಧಾರಣವಾಗಿ ನಮಗೆಲ್ಲಾ ಇರುತ್ತದೆ. ಆದರೆ ಆ ...

news

ಮನೆಯಲ್ಲೇ ಮಾಡಿ ಸವಿಯಿರಿ ಎಗ್ ಲೆಸ್ ಕೇಕ್

ಕೇಕ್ ಅಂದ್ರೆ ಎಲ್ಲರಿಗೂ ಇಷ್ಟ. ಆದ್ರೆ ಬಹಳಷ್ಟು ಜನರಿಗೆ ಕೇಕ್ ನಲ್ಲಿ ಎಗ್ ಹಾಕುವುದರಿಂದ ತಿನ್ನೋದು ...

news

ಬೇಕಾಬಿಟ್ಟಿ ಮಲಗುವ ಮುನ್ನ ಯೋಚಿಸಿ…!

ಬೆಂಗಳೂರು: ಸಿಕ್ಕಾಪಟ್ಟೆ ಸುಸ್ತಾದಾಗ ನಾವು ಹೇಗೆ ಮಲಗುತ್ತೇವೆಂದು ನಮಗೇ ಗೊತ್ತಿರುವುದಿಲ್ಲ. ಕೆಲವರು ಅದು ...

news

ಬೇಗನೇ ಮಗು ಪಡೆಯುವುದು ಹೇಗೆ? ಇಲ್ಲಿದೆ ಕೆಲವು ಟಿಪ್ಸ್!

ಬೆಂಗಳೂರು: ಮದುವೆಯಾಗಿ ವರ್ಷ ಕಳೆಯುತ್ತಾ ಬಂದರೆ ಹೆಣ್ಣಿಗೆ ಎದುರಾಗುವ ಒಂದೇ ಪ್ರಶ್ನೆ, ‘ಇನ್ನೂ ಏನೂ ವಿಶೇಷ ...

Widgets Magazine