ಒಡೆದ ಹಿಮ್ಮಡಿಗೆ ಈ ಮನೆ ಮದ್ದು ಮಾಡಿ

ಬೆಂಗಳೂರು, ಬುಧವಾರ, 24 ಜನವರಿ 2018 (08:36 IST)

ಬೆಂಗಳೂರು: ಚಳಿಗಾಲದಲ್ಲಿ ಹೆಚ್ಚಿನವರಿಗೆ ಕಾಲಿನ ಹಿಮ್ಮಡಿ ಒಡೆದು ನಡೆದಾಡಲೂ ಸಾಧ್ಯವಾಗದಂತಹ ಪರಿಸ್ಥಿತಿ ಬರುತ್ತದೆ. ಈ ಸಮಸ್ಯೆಗೆ ಕೆಲವು ಮನೆ ಮದ್ದು ಮಾಡಿ ನೋಡಬಹುದು. ಅವು ಯಾವುವು ನೋಡೋಣ.
 

ವ್ಯಾಸಲಿನ್ ಮತ್ತು ನಿಂಬೆ ರಸ
ರಾತ್ರಿ ಮಲಗುವ ಮುನ್ನ 15 ನಿಮಿಷ ಹದ ಬಿಸಿ ನೀರಿನಲ್ಲಿ ಕಾಲು ಅದ್ದಿಡಿ. ನಂತರ ನಿಂಬೆ ರಸದ ಜತೆಗೆ ವ್ಯಾಸಲಿನ್ ಕ್ರೀಂ ಹಚ್ಚಿ ಮಲಗಿ.
 
ಜೇನು ತುಪ್ಪ
ಅರ್ಧ ಬಕೆಟ್ ಹದಬಿಸಿನೀರಿಗೆ ಒಂದು ಕಪ್ ಜೇನು ತುಪ್ಪ ಹಾಕಿ ಅದ್ದಿಡಿ. ನಂತರ ಮೃದುವಾಗಿ ಮಸಾಜ್ ಮಾಡಿ. ಹೀಗೆ ಕೆಲವು ನಿಮಿಷಗಳ ಕಾಲ ಮಾಡಿದರೆ ಸಾಕು.
 
ಅಲ್ಯುವೀರಾ
ಹದ ಬಿಸಿ ನೀರಿನಲ್ಲಿ ಕೆಲವು ನಿಮಿಷಗಳ ಕಾಲ ಕಾಲು ಇಟ್ಟುಕೊಳ್ಳಿ. ನಂತರ ಅಲ್ಯುವೀರಾ ಜೆಲ್ ಹಚ್ಚಿಕೊಂಡು ಕೆಲ ಕಾಲ ಹಾಗೇಬಿಡಿ.
 
ಸಾಕ್ಸ್
ಮಲಗುವ ಮೊದಲು ರಾತ್ರಿ ವ್ಯಾಸಲಿನ್ ಹಚ್ಚಿಕೊಂಡು ಕಾಟನ್ ಸಾಕ್ಸ್ ಹಾಕಿಕೊಂಡು ಮಲಗಿಕೊಳ್ಳಿ. ಇದರಿಂದ ಕಾಲಿನ ತೇವಾಂಶ ಉಳಿದು ಒಡೆತದ ಕಿರಿ ಕಿರಿ ತಪ್ಪುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಹಿಮ್ಮಡಿ ಒಡೆತ ಆರೋಗ್ಯ ಸೌಂದರ್ಯ Health Cracked Heel Beauty Tips

ಆರೋಗ್ಯ

news

ಕುರು ನೋವಿನಿಂದ ಬಳಲುತ್ತಿದ್ದೀರಾ...?ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು : ಕೆಲವರ ಕಾಲಲ್ಲಿ ಕುರು ಆಗುವುದು ಕಂಡುಬರುತ್ತದೆ. ಅದು ತುಂಬಾ ನೋವನ್ನುಂಟುಮಾಡುತ್ತದೆ. ಇದು ...

news

ಬೇಗನೆ ಆರೋಗ್ಯಕರವಾಗಿ ಸಣ್ಣಗಾಗ ಬೇಕೆ…? ಈ ಮನೆಮದ್ದನ್ನು ಮಾಡಿ ನೋಡಿ

ಬೆಂಗಳೂರು : ಹಚ್ಚಿನವರಿಗೆ ದಪ್ಪ ಆಗಲು ಇಷ್ಟವಿರುವುದಿಲ್ಲ. ತಿನ್ನುವುದು ಎಷ್ಟೇ ಕಡಿಮಮಾಡಿದರೂ ಅವರ ದೇಹ ...

news

ಮುಟ್ಟಿನ ದಿನಗಳಲ್ಲಿ ಚಹಾ ಸೇವನೆ ಈ ಕಾರಣಕ್ಕೆ ಉತ್ತಮವಲ್ಲ!

ಬೆಂಗಳೂರು: ಮುಟ್ಟಿನ ಸಂದರ್ಭಗಳಲ್ಲಿ ಕೆಲವು ಆಹಾರಗಳು ನಮ್ಮ ದೇಹ ಪ್ರಕೃತಿಗೆ ಸಂಬಂಧಿಸಿದ ಹಾಗೆ ಸೇವಿಸದೇ ...

news

ಹುಷಾರ್! ಈ ಆಹಾರಗಳು ಪುರುಷತ್ವಕ್ಕೇ ಕುತ್ತು ತರಬಹುದು!

ಬೆಂಗಳೂರು: ಪುರುಷರಲ್ಲಿ ವೀರ್ಯಾಣು ಸಂಖ್ಯೆ ಕಡಿಮೆಗೊಳಿಸಲು ಆಹಾರವೂ ಕಾರಣವಾಗಬಹುದು. ಕೆಲವು ಆಹಾರಗಳು ...

Widgets Magazine
Widgets Magazine