ಸಹಜವಾಗಿ ಹಣ್ಣಾದ ಹಾಗೂ ರಾಸಾಯನಿಕ ಬಳಸಿ ಹಣ್ಣಾದ ಮಾವಿನ ಹಣ್ಣಿನ ವ್ಯತ್ಯಾಸ ತಿಳಿಯೋದು ಹೇಗೆ ಗೊತ್ತಾ?

ಬೆಂಗಳೂರು, ಸೋಮವಾರ, 27 ಆಗಸ್ಟ್ 2018 (12:46 IST)

ಬೆಂಗಳೂರು : ಸೀಸನ್‌ನಲ್ಲಿ ನಮಗೆ ಅಧಿಕವಾಗಿ ಲಭಿಸುವ ಹಣ್ಣುಗಳಲ್ಲಿ ಮಾವಿನಹಣ್ಣು ಸಹ ಒಂದು. ಇವನ್ನು ತಿನ್ನುವುದರಿಂದ ನಮಗೆ ಅನೇಕ ಲಾಭಗಳಿವೆ. ಆದರೆ ಬಹಳಷ್ಟು ಮಂದಿ ವ್ಯಾಪಾರಿಗಳು ಮಾವಿನಹಣ್ಣುಗಳನ್ನು ಗಿಡದಲ್ಲೇ ಹಣ್ಣಾಗಲು ಬಿಡದೆ  ರಾಸಾಯನಿಕಗಳನ್ನು ಹಾಕಿ ಹಣ್ಣಾಗಿಸುತ್ತಿದ್ದಾರೆ. ಈ ರೀತಿಯ ಹಣ್ಣುಗಳನ್ನು ತಿನ್ನುವುದರಿಂದ ಅನೇಕ ಅನಾರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಆದರೆ ಮಾರುಕಟ್ಟೆಯಲ್ಲಿ ನಮಗೆ ಲಭಿಸುವ ಮಾವಿನ ಹಣ್ಣುಗಳನ್ನು ಸಹಜವಾಗಿ ಹಣ್ಣಾಗಿಸಿದ್ದಾರಾ? ರಾಸಾಯನಿಕಗಳನ್ನು ಬಳಸಿ ಹಣ್ಣಾಗಿಸಿದ್ದಾರಾ? ಎಂದು ತಿಳಿದುಕೊಳ್ಳಬಹುದು.


*ಬಣ್ಣ : ಸಹಜವಾಗಿ ಹಣ್ಣಾದ ಮಾವು ಸಂಪೂರ್ಣ ಹಳದಿ ಬಣ್ಣದಲ್ಲಿರುತ್ತದೆ. ಆದರೆ ಕೃತಕವಾಗಿ ಹಣ್ಣಾಗಿಸಿದ ಮಾವಿನ ಹಣ್ಣಿನ ಮೇಲೆ ಅಲ್ಲಲ್ಲಿ ಎಲೆಹಸಿರು ಬಣ್ಣದ ಪ್ಯಾಚ್‌ಗಳು ಇರುತ್ತವೆ.


*ರುಚಿ : ರಾಸಾಯನಿಕಗಳನ್ನು ಬಳಸಿ ಹಣ್ಣಾಗಿಸಿದ ಮಾವು ತಿಂದರೆ ಸಿಹಿಯ ಜತೆಗೆ ರುಚಿ ಕಡಿಮೆ ಇರುತ್ತದೆ. ಇದರ ಜತೆಗೆ ಹಣ್ಣನ್ನು ತಿನ್ನುವಾಗ ನಾಲಿಗೆ ಉರಿದಂತೆ ಅನ್ನಿಸುತ್ತದೆ. ಯಾಕೆಂದರೆ ಅದರಲ್ಲಿ ಇನ್ನೂ ರಾಸಾಯಾನಿಕ ಉಳಿದಿದ್ದರೆ ಅದು ನಮ್ಮ ನಾಲಿಗೆಗೆ ತಾಕಿಗದಾಗ ಉರಿ ಅನ್ನಿಸುತ್ತದೆ.


*ತಿರುಳು : ರಾಸಾಯನಿಕಗಳನ್ನು ಬಳಸಿ ಹಣ್ಣಾಗಿಸಿದ ಮಾವಿನ ತಿರುಳು ಗಾಢ ಬಣ್ಣದಲ್ಲಿರುತ್ತದೆ. ಅದೇ ರೀತಿ ಸಹಜವಾಗಿ ಹಣ್ಣಾದ ಮಾವಿನ ತಿರುಳು ಹಳದಿ, ಕೆಂಪು ಬಣ್ಣಗಳಲ್ಲಿರುತ್ತದೆ.


*ಜ್ಯೂಸ್ : ಸಹಜವಾಗಿ ಹಣ್ಣಾದ ಮಾವಿನಿಂದ ಜ್ಯೂಸ್ ತೆಗೆದರೆ ಹೆಚ್ಚು ಬರುತ್ತದೆ. ಅದೇ ರಾಸಾಯನಿಕಗಳನ್ನು ಬಳಸಿ ಹಣ್ಣಾಗಿಸಿದ ಮಾವಿನಿಂದ ಜ್ಯೂಸ್‌ ತೆಗೆದರೆ ಹೆಚ್ಚು ಬರಲ್ಲ.


*ಹಣ್ಣು : ಸಹಜವಾಗಿ ಹಣ್ಣಾದ ಮಾವಿನ ಹಣ್ಣು ನೋಡಲು ಸಾಮಾನ್ಯವಾಗಿ ಇರುತ್ತದೆ. ಆದರೆ ರಾಸಾಯನಿಕಗಳನ್ನು ಬಳಸಿ ಹಣ್ಣಾಗಿಸಿದ ಮಾವು ಹೊಳೆಯುತ್ತಾ ಆಕರ್ಷಕವಾಗಿ ಕಾಣಿಸುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಬೆಳಗ್ಗೆ ಬೆಳಿಗ್ಗೆಯೇ ರೊಮ್ಯಾನ್ಸ್ ಮಾಡೋದು ಮಹಿಳೆಯರಿಗೆ ಇಷ್ಟವಾಗಲ್ಲ ಯಾಕೆ ಗೊತ್ತಾ?!

ಬೆಂಗಳೂರು: ಏನ್ರೀ.. ಇದು ಬೆಳ್ಳಂ ಬೆಳಿಗ್ಗೇನಾ..? ಅಂತ ನಿಮ್ಮ ಪತ್ನಿಯೇನಾದರೂ ಹುಸಿಕೋಪ ಪ್ರದರ್ಶಿಸಿದರೆ ...

news

ಲೈಂಗಿಕ ಸಾಮರ್ಥ್ಯ ಹೆಚ್ಚಿಸಿ, ಗರ್ಭ ಧರಿಸಲು ನೆರವಾಗುತ್ತಂತೆ ಈ ಮಾಂಸಹಾರ

ಬೆಂಗಳೂರು : ತಾಯಿಯಾಗಬೇಕೆಂಬ ಸಂಭ್ರಮ ಪ್ರತಿ ಹೆಣ್ಣಿನಲ್ಲಿಯೂ ಸಹಜ. ಬದಲಾದ ಜೀವನಶೈಲಿಯಿಂದ ಒತ್ತಡದ ಬದುಕು ...

news

ಬಿಕ್ಕಳಿಕೆ ನಿಲ್ಲಿಸೋಕೆ ಇಲ್ಲಿದೆ ಸಿಂಪಲ್ ಟಿಪ್ಸ್

ಬೆಂಗಳೂರು : ಪ್ರತಿಯೊಬ್ಬರಿಗೆ ಒಂದಲ್ಲಾ ಒಂದು ಬಾರಿ ಬಿಕ್ಕಳಿಕೆ ಬರುತ್ತದೆ. ದೇಹದ ವಪೆ ಎಂಬ ಪದರ ಕಲವೊಮ್ಮೆ ...

news

ವೃತ್ತಿ ಜೀವನವೂ ಹಾಳಗಾಬಾರದೇ? ಹಾಗಿದ್ದರೆ ಯಾವ ವಯಸ್ಸಲ್ಲಿ ಗರ್ಭಿಣಿಯಾಗಬೇಕು?

ಬೆಂಗಳೂರು: ಮಹಿಳೆಯರಿಗೆ ಗರ್ಭಿಣಿಯಾದ ಮೇಲೆ ಎಲ್ಲಿ ತನ್ನ ವೃತ್ತಿ ಜೀವನಕ್ಕೆ ತೊಂದರೆಯಾಗುತ್ತದೋ ಎಂಬ ...

Widgets Magazine
Widgets Magazine