ಗರ್ಭಪಾತದ ಬಳಿಕ ಎಷ್ಟು ತಿಂಗಳಲ್ಲಿ ಮತ್ತೆ ಗರ್ಭಧಾರಣೆ ಮಾಡಬಹುದು ಗೊತ್ತಾ…?

ಬೆಂಗಳೂರು, ಶನಿವಾರ, 24 ಫೆಬ್ರವರಿ 2018 (07:02 IST)

Widgets Magazine

ಬೆಂಗಳೂರು : ಗರ್ಭಪಾತದ ಬಳಿಕ ಕೆಲವೇ ಸಮಯದಲ್ಲಿ ಮತ್ತೆ ಗರ್ಭಧಾರಣೆ ಮಾಡಲು ಕೆಲವೊಂದು ಯೋಜನೆಗಳಿವೆ. ಆದರೆ ಇವು ಪ್ರತಿ ಬಾರಿಯೂ ಸರಿಯಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಗರ್ಭಪಾತದ ಬಳಿಕ ದೇಹವು ಗುಣಮುಖವಾಗಲು ಸಮಯ  ನೀಡುವುದು ಸೂಕ್ತ.


ಗರ್ಭ ಪಾತದ ಬಳಿಕ ನಾಲ್ಕರಿಂದ ಆರು ವಾರಗಳಲ್ಲಿ ಮತ್ತೆ ಆರಂಭವಾಗುತ್ತದೆ. ಆದ್ದರಿಂದ ಮುಂದಿನ ಗರ್ಭಧಾರಣೆಯ ಕುರಿತು ನಿರ್ಧಾರ ತೆಗೆದುಕೊಳ್ಳುವ ಮುನ್ನ ವೈದ್ಯರ ಸಲಹೆ ಪಡೆಯುವುದು ಉತ್ತಮ. ನಿಮಗೆ ಮೊದಲ ಬಾರಿಯ ಗರ್ಭಪಾತವಾಗಿ, ಬಳಿಕ ನೀವು ಸಂಪೂರ್ಣ ಆರೋಗ್ಯಕರವಾಗಿದ್ದು, ಆರಾಮದಿಂದಿದ್ದರೆ ಮುಂದಿನ ಆರು ತಿಂಗಳಲ್ಲಿ ಮತ್ತೆ ಗರ್ಭಧಾರಣೆ ಮಾಡಬಹುದು. ಇತ್ತೀಚಿನ ಅಧ್ಯಯನಗಳ ಪ್ರಕಾರ, ಗರ್ಭ ಪಾತದ ಬಳಿಕ ಸ್ವಲ್ಪ ಸಮಯದಲ್ಲಿ ಗರ್ಭ ಧರಿಸುವುದು ಕಡಿಮೆ ಸಮಸ್ಯೆದಾಯಕ ಎಂಬುದು ತಿಳಿದು ಬಂದಿದೆ.


ಆದರೆ ಇದು ಎರಡನೇ ಗರ್ಭಪಾತವಾದರೆ ಆಗ ವೈದ್ಯರ ಸಲಹೆ ತೆಗೆದುಕೊಳ್ಳುವುದು ಕಡ್ಡಾಯ. ವೈದ್ಯರು ಸಮಸ್ಯೆಯ ಹಿಂದಿನ ಕಾರಣಗಳನ್ನು ಪರೀಕ್ಷಿಸಿ, ಅದಕ್ಕೆ ಬೇಕಾದ ಚಿಕಿತ್ಸೆ ನೀಡುತ್ತಾರೆ. ಈ ಮೂಲಕ ಮತ್ತೆ ಅದೇ ಅಪಾಯವನ್ನು ಎದುರಿಸುವುದು ತಪ್ಪುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಸುಲಭವಾಗಿ ರೆಡಿಯಾಗುವ ಆಲೂ ಬ್ರೆಡ್ ರೋಲ್ ಮಾಡುವುದು ಹೇಗೆ ಗೊತ್ತಾ...?

ಬೆಂಗಳೂರು : ಏನಾದ್ರೂ ಬಿಸಿ ಬಿಸಿಯಾದ ಸ್ನ್ಯಾಕ್ಸ್ ತಿನ್ನಬೇಕೆಂದು ಅನಿಸುವವರು ಹೊರಗೆ ಹೋಗಿ ತಿನ್ನುವ ಬದಲು ...

news

ಹಾಲು ಕುಡಿಯುವುದರಿಂದ ನಿಜವಾಗಿಯೂ ಟಾಲರ್, ಸ್ಟ್ರಾಂಗರ್ ಆಗುತ್ತೇವೆಯೇ?!

ಬೆಂಗಳೂರು: ಹಾಲು ಕುಡಿಯುವುದರಿಂದ ಮಕ್ಕಳು ಟಾಲ್ ಆಗಿ, ಸ್ಟ್ರಾಂಗ್ ಆಗಿ ಬೆಳೆಯುತ್ತಾರೆ ಎಂದು ಹಲವು ...

news

ಸೆಕ್ಸ್ ಸಂದರ್ಭ ಮಹಿಳೆಯರು ಪುರುಷರಿಂದ ಬಯಸುವುದು ಇದನ್ನು!

ಬೆಂಗಳೂರು: ರೊಮ್ಯಾಂಟಿಕ್ ಡೇಟ್, ಮಿಲನ ಮುಹೂರ್ತದ ಬಗ್ಗೆ ಪುರುಷ ಮತ್ತು ಮಹಿಳೆಯರಲ್ಲಿ ಸಾಕಷ್ಟು ...

news

ಕಣ್ಣಿಗೆ ಹಾಕಿದ ಮೇಕಪ್ ಸುಲಭವಾಗಿ ತೆಗೆಯುವುದಕ್ಕೆ ಇಲ್ಲಿದೆ ಟಿಪ್ಸ್

ಬೆಂಗಳೂರು : ದಿನವಿಡೀ ತಮ್ಮ ಕಣ್ಣು ಹಾಗೂ ಮುಖ ಸುಂದರವಾಗಿ ಕಾಣಲೆಂದು ಬಹುತೇಕ ಯುವತಿಯರು ಮಸ್ಕರಾ, ಕಾಜಲ್, ...

Widgets Magazine