ನಿರಂತರ ಹಾಗೂ ರಫ್ ಸೆಕ್ಸ್ ನಿಂದ ಯೋನಿಯಲ್ಲಿ ನೋವು ಕಾಣಿಸಿಕೊಂಡಿದ್ದರೆ ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು, ಭಾನುವಾರ, 7 ಜನವರಿ 2018 (07:16 IST)

ಬೆಂಗಳೂರು : ಸೆಕ್ಸ್ ಮಾಡಿದ ನಂತರ ಯೋನಿಯಲ್ಲಿ ಉರಿ ಉಂಟಾಗುತ್ತದೆ. ಯೋನಿ ಒಂದು ಸೂಕ್ಷ್ಮವಾದ ಅಂಗವಾಗಿದ್ದು, ಸತತವಾಗಿ ಸೆಕ್ಸ್ ಮಾಡುವುದರಿಂದ ಹಾಗು ರಫ್ ಸೆಕ್ಸ್ ನಿಂದಾಗಿ ಯೋನಿ ಉರಿಯುತ್ತದೆ. ಈ ಉರಿಯನ್ನು ಕಡಿಮೆಯಾಗಿಸಲು ಇಲ್ಲಿದೆ ಮನೆಮದ್ದು.

  1. ಸೆಕ್ಸ್ ಬಳಿಕ ಯೋನಿ ಉರಿಯುತ್ತಿದ್ದರೆ ಒಂದು ಬಾತ್ ಟಬ್ ನಲ್ಲಿ ಹದ ಬಿಸಿ ಇರುವ ನೀರನ್ನು ತುಂಬಿಸಿಕೊಂಡು ಅದಕ್ಕೆ ಸ್ವಲ್ಪ ಅಡುಗೆ ಸೋಡಾ ಸೇರಿಸಿ ಅದರಲ್ಲಿ ½ ಗಂಟೆ ಕುಳಿತುಕೊಳ್ಳಿ. ನಂತರ ನೀಟಾಗಿ ಒರೆಸಿಕೊಂಡು ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳಿ.
  2. ಯೋನಿ ತುಂಬಾ ಸೂಕ್ಷ್ಮ ಅಂಗವಾಗಿರುವುದರಿಂದ ಬಿಸಿ ನೀರು ಅದಕ್ಕೆ ತಾಗಿದರೆ ಇನ್ನಷ್ಟು ನೋವಾಗುವುದರಿಂದ ಹದ ಬಿಸಿ ನೀರಲ್ಲಿ ಶುದ್ಧವಾದ ಹತ್ತಿ ಬಟ್ಟೆಯನ್ನು ಅದ್ದಿ ಯೋನಿಗೆ  ಶಾಖ ಕೊಡಿ. ಇದರಿಂದ ಸ್ವಲ್ಪ ಉರಿ ಕಡಿಮೆಯಾಗುತ್ತದೆ.
  3. ಸತತವಾದ ಸೆಕ್ಸ್ ನಿಂದ ಯೋನಿ ಊದಿಕೊಳ್ಳುವುದು, ರಕ್ತಸ್ರಾವವಾಗುವ ಸಂಭವವಿರುತ್ತದೆ. ಆವಾಗ ಐಸ್ ನಿಂದ ಮಸಾಜ್ ಮಾಡಿಕೊಳ್ಳಿ.
  4. ಕೊಬ್ಬರಿ ಎಣ್ಣೆ ಎಲ್ಲದಕ್ಕಿಂತ ಉತ್ತಮವಾದ ಮನೆಮದ್ದು. ಇದನ್ನು ಬಳಸುವುದು ಸುಲಭ. ಯೋನಿಯಲ್ಲಿ ಉರಿಯ ಜೊತೆಗೆ ಗಾಯವಾಗಿದ್ದರೂ ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳುವುದರಿಂದ ಕಡಿಮೆಯಾಗುತ್ತದೆ.
ಹೀಗೆ ಮಾಡಿಯೂ ನೋವು ಕಡಿಮೆಯಾಗಿಲ್ಲವೆಂದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಎದೆ ಹಾಲು ಹೆಚ್ಚಿಸಬೇಕೆಂದರೆ ಇಷ್ಟು ಮಾಡಿದರೆ ಸಾಕು!

ಬೆಂಗಳೂರು: ಮೆಂತೆ ಕಹಿ ರುಚಿಯಿರುವುದೇನೋ ನಿಜ. ಆದರೆ ಎದೆ ಹಾಲು ಸಾಕಷ್ಟು ಸಿಗದೇ ಹಾಲೂಡಿಸಲು ಸಂಕಟ ಪಡುವ ...

news

2018ರಲ್ಲಿ ಹಾಟ್ ಸೆಕ್ಸ್‌ ಟ್ರೆಂಡ್‌ ಹೇಗಿರಲಿದೆ ಗೊತ್ತಾ?

ಕ್ಯಾಮಲ್‌ಟೋ ಒಳ ಉಡುಪುಗಳಿಂದ ಹಿಡಿದು ಫಂಕಿವರೆಗೆ, 2017 ವರ್ಷವು ಅತ್ಯಂತ ವಿಲಕ್ಷಣವಾದವುಗಳನ್ನು ಮತ್ತು ...

news

ದಮ್ ಎಳೆಯೋ ಮಾನಿನಿಯರೇ ಹುಷಾರ್!

ಬೆಂಗಳೂರು: ಆಧುನಿಕ ಯುಗದಲ್ಲಿ ಕೆಟ್ಟ ಹವ್ಯಾಸಗಳ ವಿಚಾರದಲ್ಲೂ ಮಹಿಳೆಯರು ಪುರುಷರಿಗಿಂತ ಕಮ್ಮಿಯೇನಲ್ಲ. ...

news

ಅಸ್ತಮಾ ರೋಗಕ್ಕೆ ಮನೆಯಲ್ಲೇ ಈ ಮದ್ದು ಮಾಡಿ ನೋಡಿ!

ಬೆಂಗಳೂರು: ಇತ್ತೀಚೆಗೆ ವಾತಾವರಣ, ಹವಾಮಾನ ಬದಲಾವಣೆಯಿಂದಾಗಿ ಅಸ್ತಮಾ ಸಾಮಾನ್ಯ ರೋಗವಾಗಿಬಿಟ್ಟಿದೆ. ಇದಕ್ಕೆ ...

Widgets Magazine
Widgets Magazine