ಟೈಪಡ್ ಜ್ವರ ಬೇಗ ವಾಸಿಯಾಗಲು ಈ ವಿಧಾನ ಅನುಸರಿಸಿ

ಬೆಂಗಳೂರು, ಗುರುವಾರ, 25 ಜನವರಿ 2018 (06:45 IST)

ಬೆಂಗಳೂರು : ಟೈಪಡ್ ಇತ್ತಿಚೆಗೆ ಎಲ್ಲರಿಗೂ ಬರುತ್ತಾ ಇದೆ. ಇದರಿಂದ ಕರುಳಿನಲ್ಲಿ ಅಲ್ಸರ್ ಆಗುತ್ತೆ, ಹೊಟ್ಟೆನೋವು ಬರುತ್ತೆ, ಸ್ಕಿನ್ ಅಲರ್ಜಿಯಾಗುತ್ತದೆ, ನಾಲಿಗೆ ಮೇಲೆ ಬಿಳಿ ಮಚ್ಚೆ ಆಗುತ್ತದೆ. ಟೈಪಡ್ ಬಂದಾಗ ತುಂಬಾ ಜ್ವರ ಬರುತ್ತದೆ, ತಲೆನೋವು, ಕೆಮ್ಮು, ಸುತ್ತು, ಇನ್ನೂ ಹಲವು ಸಮಸ್ಯೆಗಳಿಂದ ನರಳುತ್ತಾರೆ. ಈ ಟೈಪಡ್ ಜ್ವರ ಬಂದಾಗ ಮೊದಲು ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದು ನಂತರ ಕೆಲವು ಮನೆಮದ್ದನ್ನು ಬಳಸುವುದರಿಂದ ಈ ಕಾಯಿಲೆಯಿಂದ ಬೇಗ ಗುಣಮುಖರಾಗಬಹುದು.

 
2 ಲೀಟರ್ ನೀರಿಗೆ 4-5 ಲವಂಗ ಹಾಕಿ 10-15 ನಿಮಿಷ ಕುದಿಸಿ. ನಂತರ ತಣ್ಣಗಾಗಿಸಿ ಸೋಸಿ ದಿನಪೂರ್ತಿ ಬಾಯಾರಿಕೆಯಾದಾಗ ಕುಡಿಯಿರಿ. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗಿ ಟೈಪಡ್ ಬೇಗ ಕಡಿಮೆಯಾಗುತ್ತದೆ. ಹೀಗೆ 10 ದಿನ ಮಾಡಿ. ಅದರ ಜೊತೆಗೆ ತುಳಸಿ ರಸ 2 ಚಮಚ ತೆಗೆದುಕೊಂಡು ಅದಕ್ಕೆ 1 ಚಿಟಿಕೆ ಮಣಸಿನ ಪುಡಿಯನ್ನು ಮಿಕ್ಸ್ ಮಾಡಿ ಊಟ ಆದ ಮೇಲೆ 3 ಹೊತ್ತು ತೆಗೆದುಕೊಳ್ಳಿ. ಇದನ್ನು 15 ದಿನ ಮಾಡಿ. ಅದರ ಜೊತೆಗೆ 200ಎಂಎಲ್ ಮಜ್ಜಿಗೆ ತೆಗೆದುಕೊಂಡು ಅದಕ್ಕೆ 15 ಎಂಎಲ್ ಕೊತ್ತಂಬರಿ ಸೊಪ್ಪಿನ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಊಟ ಆದ ಮೇಲೆ 2 ಹೊತ್ತು ಕುಡಿಯಿರಿ. ಇದನ್ನು 15 ದಿನ ಮಾಡಿ. ಈ ಮೂರು ಮನೆಮದ್ದನ್ನು ಬಳಸಿದರೆ ಬೇಗ ಟೈಪಡ್ ಜ್ವರ ಗುಣವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮೊಡವೆ ಒಡೆದ ತಕ್ಷಣ ಕಲೆಯಾಗದಂತೆ ತಡೆಯಲು ಈ ವಿಧಾನ ಅನುಸರಿಸಿ

ಬೆಂಗಳೂರು : ಹದಿಹರೆಯದಲ್ಲಿ ಸಾಮಾನ್ಯವಾಗಿ ಎಲ್ಲರನ್ನು ಕಾಡುವ ಸಮಸ್ಯೆ ಮೊಡವೆ. ಮಾಲಿನ್ಯ, ಕೊಳಕು, ಸತ್ತ ...

news

ಮಕ್ಕಳಲ್ಲಿ ಕಾಣಿಸಿಕೊಳ್ಳುವ ಮಲಬದ್ಧತೆ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು: ಚಿಕ್ಕ ಮಕ್ಕಳಲ್ಲಿ ಸಾಮಾನ್ಯವಾಗಿ ಮಲಬದ್ಧತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಎರಡು ಮೂರು ...

news

ಅಂಡಾಣು ಬಿಡುಗಡೆಯಾಗಿದೆ ಎಂದು ಹೇಗೆ ತಿಳಿಯುವುದು ಗೊತ್ತಾ...?

ಬೆಂಗಳೂರು : ಗರ್ಭ ಧರಿಸಬೇಕಾದರೆ ಅಂಡಾಣು ಬಿಡುಗಡೆಯಾಗಬೇಕು, ಮಹಿಳೆಯಲ್ಲಿ ಅಂಡಾಣು ತಿಂಗಳಿಗೆ ಒಮ್ಮೆ ಮಾತ್ರ ...

news

ಐ ಲವ್ ಯೂ ಹೇಳದೇ ಪ್ರಪೋಸ್ ಮಾಡುವುದು ಹೇಗೆ?

ಬೆಂಗಳೂರು: ಎಷ್ಟೋ ಪ್ರೇಮಿಗಳಿಗೆ ಒಬ್ಬರನ್ನು ಇಷ್ಟವಾದರೂ ಬಾಯಿ ಬಿಟ್ಟು ಐ ಲವ್ ಯೂ ಎನ್ನುವ ಮೂರು ಶಬ್ಧ ...

Widgets Magazine
Widgets Magazine