ಕುಡಿಯುವ ಚಟ ಇದೆಯಾ...? ಈ ಮನೆಮದ್ದನ್ನು ಉಪಯೋಗಿಸಿ ಕುಡಿತದ ಚಟದಿಂದ ಪಾರಾಗಿ

ಬೆಂಗಳೂರು, ಶುಕ್ರವಾರ, 29 ಡಿಸೆಂಬರ್ 2017 (07:46 IST)

ಬೆಂಗಳೂರು: ಈಗ 100ರಲ್ಲಿ 90 ಜನರು ಮದ್ಯಪಾನ ಮಾಡುತ್ತಾರೆ. ಒಂದು ಸಲ ಒಬ್ಬ ವ್ಯಕ್ತಿ ಕುಡಿತಕ್ಕೆ ಅಡಿಕ್ಟ್ ಆದರೆ ಅದನ್ನು ಬಿಡಲು ತುಂಬಾ ಕಷ್ಟಪಡುತ್ತಾರೆ.  ಕುಡಿಯುವವರೆಲ್ಲಾ ಕೆಟ್ಟವರಲ್ಲ. ಆದರೆ ಮಾತ್ರ ತುಂಬಾ ಕೆಟ್ಟದು. ಅದು ನಮ್ಮ ಆರೋಗ್ಯದ ಜೊತೆಗೆ ನಮ್ಮ ಸಂಸಾರವನ್ನು ಹಾಳುಮಾಡುತ್ತದೆ.


ಕುಡಿತದಿಂದ ಲಿವರ್ ಹಾಳಾಗುತ್ತೆ, ಉಸಿರಾಟದ ತೊಂದರೆ ಉಂಟಾಗುತ್ತೆ, ಹೊಟ್ಟೆಯಲ್ಲಿ ಹುಣ್ಣಾಗುತ್ತೆ, ಕಿಡ್ನಿ ಹಾಳಾಗುತ್ತೆ ಹೀಗೆ ಹಲವು ಸಮಸ್ಯೆಗಳು ಕುಡಿತದಿಂದ ಬರುತ್ತದೆ. ಕೆಲವರು ಎಷ್ಟೇ ಪ್ರಯತ್ನಿಸಿದರೂ ಕುಡಿತವನ್ನು ಬಿಡಲು ಆಗದಿದ್ದಾಗ ಈ ಮನೆಮದ್ದಗಳನ್ನು ಬಳಸಿ.


ಸೇಬುಹಣ್ಣಿನ ಜ್ಯೂಸ್ ಮಾಡಿ ಬೆಳಿಗ್ಗೆ 2 ಗ್ಲಾಸ್ , ಸಂಜೆ 2 ಗ್ಲಾಸ್ ಕುಡಿಯಿರಿ. ಹೀಗೆ ಮಾಡಿದ್ರೆ ಕುಡಿತದಿಂದ ಪಾರಾಗಬಹುದು. ಹಾಗೆ ದ್ರಾಕ್ಷಿ ಜ್ಯೂಸನ್ನು ದಿನ ಒಂದು ಗ್ಲಾಸ್ ಕುಡಿಯಿರಿ. ಇದು ಕುಡಿಬೇಕು ಎಂಬ ಒತ್ತಡವನ್ನು ತಡೆಯುತ್ತದೆ. ಹಸಿ ಖರ್ಜೂರ 4-5 ನ್ನು  ದಿನ ಬೆಳಿಗ್ಗೆ1 ಬಾರಿ ಹಾಗು ಸಂಜೆ 1 ಬಾರಿ ತಿನ್ನಿ. ಇದನ್ನು ತಿನ್ನುವುದರಿಂದ ಕುಡಿಯಲು ಹೋದಾಗ ಅದರ ವಾಸನೆ ಕಿರಿಕಿರಿಯಾಗುವಂತೆ ಮಾಡುತ್ತದೆ.


1 ಗ್ಲಾಸ್ ಮಜ್ಜಿಗೆಗೆ 3 ಚಮಚ ಹಾಗಲಕಾಯಿ ಜ್ಯೂಸ್ ಹಾಕಿ ಮಿಕ್ಸ್ ಮಾಡಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಹಾಗೆ 1 ಗ್ಲಾಸ್ ನೀರಿಗೆ 1 ಚಮಚ ನಿಂಬೆರಸ ಮಿಕ್ಸ್ ಮಾಡಿ ದಿನಕ್ಕೆ ಒಂದು ಬಾರಿ ಕುಡಿಯಿರಿ. ಹಾಗೆ 1 ಗ್ಲಾಸ್ ನೀರಿಗೆ 15-20 ಕಾಳುಮೆಣಸು ಹಾಗು 7-8 ತುಳಸಿ ಎಲೆ ಹಾಕಿ ರಾತ್ರಿಯಿಡಿ ನೆನೆಸಿಟ್ಟು ಬೆಳಿಗ್ಗೆ ಸೊಸಿ ಆ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಹೀಗೆ 1ರಿಂದ 11/2 ತಿಂಗಳು ರೆಗ್ಯುಲರ್ ಈ ಮನೆಮದ್ದಗಲನ್ನು ಉಪಯೋಗಿಸಿದರೆ ಕುಡಿತದ ಚಟದಿಂದ ದೂರವಾಗಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹುಡುಗಿಯರನ್ನು ಆಕರ್ಷಿಸಬೇಕೆ…? ಈ ಐದು ಅಂಶಗಳನ್ನು ಪಾಲಿಸಿ!

ಬೆಂಗಳೂರು: ಫಸ್ಟ್ ಇಂಪ್ರೆಶನ್ ಇಸ್ ಬೆಸ್ಟ್ ಇಂಪ್ರೆಶನ್ ಎಂದು ಹೇಳುತ್ತಾರೆ. ಹಾಗೆ ಹುಡುಗಿಯರು ಹುಡುಗರನ್ನು ...

news

ಅತ್ಯಧಿಕ ಪೋಷಕಾಂಶವಿರುವ ಸೀಗಡಿ ಮೀನಿನ ಫ್ರೈ

ಸಮುದ್ರ ಆಹಾರವು ಅತ್ಯಧಿಕ ಪೋಷಕಾಂಶಗಳನ್ನು ಹೊಂದಿದ್ದು ಅದರಲ್ಲಿ ಸೀಗಡಿಯು ಒಂದು. ಇದರಿಂದ ಅನೇಕ ಬಗೆಯ ...

news

ರುಚಿಕರವಾದ ಚಟ್ನಿಗಳನ್ನು ತಯಾರಿಸುವುದು ಹೇಗೆ ಗೊತ್ತಾ?

ದಿನಾ ಒಂದೇ ತರಹದ ಚಟ್ನಿಯನ್ನು ತಿಂದು ನೀವು ಬೇಸರಗೊಂಡಿದ್ದರೆ ನಿಮಗಾಗಿ ರುಚಿಕರವಾದ ಚಟ್ನಿಗಳನ್ನು ...

news

ಹಲಸಿನ ಹಣ್ಣಿನಿಂದ ಏನೆಲ್ಲಾ ಮಾಡಬಹುದು ಗೊತ್ತಾ?

ಹಲಸಿನ ಹಣ್ಣು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಹಲವಾರು ಪೋಷಕಾಂಶ ಭರಿತ ಈ ಹಣ್ಣನ್ನು ತಿನ್ನುವುದು ...

Widgets Magazine
Widgets Magazine