ಕಿಡ್ನಿಯ ಆರೋಗ್ಯವನ್ನು ಹೀಗೂ ಹೆಚ್ಚಿಸಬಹುದು

ಬೆಂಗಳೂರು, ಶುಕ್ರವಾರ, 8 ಜೂನ್ 2018 (14:08 IST)

Widgets Magazine

ಮೂತ್ರಪಿಂಡಗಳು ನಿಜಕ್ಕೂ ವಿಸ್ಮಯಕಾರಿ ಅಂಗಗಳು. ನಿಜವಾಗಿ ಅವುಗಳಿಗೆ ನೀಡಬೇಕಾದ ಕಾಳಜಿಯನ್ನು ನಾವು ನೀಡದಿದ್ದರೂ ಅವು ಅನೇಕ ಕಾರ್ಯಗಳನ್ನು ನೆರವೇರಿಸುತ್ತವೆ. ನಮ್ಮ ಶರೀರದ ಅಂಗಗಳಲ್ಲೊಂದಾಗಿರುವ ಕಿಡ್ನಿಯು ಫಿಲ್ಟರ್‌ನಂತೆ ಕೆಲಸ ಮಾಡುತ್ತದೆ ಮತ್ತು ನಮ್ಮ ಶರೀರದಲ್ಲಿರು ವಿಷಯುಕ್ತ ಸಂಯುಕ್ತಗಳು ಮತ್ತು ಹೆಚ್ಚುವರಿ ನೀರನ್ನು ಮೂತ್ರದ ರೂಪದಲ್ಲಿ ಹೊರಹಾಕುತ್ತದೆ.
ಕಿಡ್ನಿಯ ಆರೋಗ್ಯವನ್ನು ಹೇಗೆ ಹೆಚ್ಚಿಸುವುದು ಎಂಬುದನ್ನು ನೋಡೋಣ
 
- ಕೊತ್ತಂಬರಿ ಸೊಪ್ಪು ಕಿಡ್ನಿಗೆ ತುಂಬಾ ಒಳ್ಳೆಯದು. ಇದು ಕಿಡ್ನಿಯಲ್ಲಿರುವ ಕಲ್ಮಶವನ್ನು ಹೊರಹಾಕಿ ಕಿಡ್ನಿಯನ್ನು ಶುದ್ಧ ಮಾಡುತ್ತದೆ.
 
- ಕಿಡ್ನಿ ಆರೋಗ್ಯ ಹೆಚ್ಚಿಸುವ ವ್ಯಾಯಾಮಗಳು ನಿಮ್ಮ ದೇಹದ ಎಲ್ಲಾ ಅಂಗಗಳಿಗೂ ಅವಶ್ಯಕವಾಗಿದೆ. ಆದ್ದರಿಂದ ಪ್ರತಿದಿನ ವ್ಯಾಯಾಮ ಮಾಡಿ.
 
- ಆಲೀವ್ ಎಣ್ಣೆಯನ್ನು ಅಡುಗೆಗೆ ಬಳಸುವುದು ಒಳ್ಳೆಯದು. ಇದು ಅತಿ ಕಡಿಮೆ ಕೊಬ್ಬಿನಂಶವನ್ನು ಹೊಂದಿರುವುದರಿಂದ ಕಿಡ್ನಿ ಸಮಸ್ಯೆಯನ್ನು ತಡೆಯಲು ಸಹಾಯ ಮಾಡುತ್ತದೆ.
 
- ಅತೀಯಾದ ಖಾರದ ಆಹಾರಗಳು ಆರೋಗ್ಯಕರವಲ್ಲ. ಖಾರ ಕಮ್ಮಿ ತಿನ್ನುವುದು ಲಿವರ್‌ಗೂ ಒಳ್ಳೆಯದು.
 
- ರೆಡ್ ಕ್ಯಾಬೇಜ್ ಸೇವನೆ ಕಿಡ್ನಿ ಡ್ಯಾಮೇಜ್ ತಡೆಯುವಲ್ಲಿ ಸಹಕಾರಿಯಾಗಿದೆ.
 
-  ಕನಿಷ್ಠ ನಿತ್ಯ 6ರಿಂದ 8 ಲೋಟ ನೀರನ್ನು ಕುಡಿಯಬೇಕು.
 
- ಮದ್ಯಪಾನ ಕಲ್ಲುಗಳು ರೂಪಗೊಳ್ಳಲು ಉತ್ತೇಜಿಸುತ್ತದೆ. ಅದು ಯೂರಿಕ್ ಆ್ಯಸಿಡ್ ಕಲ್ಲುಗಳನ್ನುಂಟುಮಾಡುವ ಪುರಿನ್ ಅನ್ನು ಒಳಗೊಂಡಿರುತ್ತದೆ. ಮತ್ತು ಮದ್ಯಪಾನ ಮೂತ್ರಪಿಂಡಗಳಿಗೆ ಹಾನಿ ಉಂಟುಮಾಡುತ್ತದೆ.
 
- ಮೂತ್ರಪಿಂಡ ಕಲ್ಲುಗಳಿಂದ ನರಳುತ್ತಿದ್ದವರು ಕ್ಯಾಲ್ಸಿಯಂ ಮತ್ತು ವಿಟಾಮಿನ್ ಡಿ ಒಳಗೊಂಡಿರುವ ಆಹಾರಗಳಿಂದ ದೂರವಿರುವುದು ಒಳ್ಳೆಯದು.
 
- ನಿಮ್ಮ ಆಹಾರದಲ್ಲಿ ಅತಿಯಾದ ಕೊಬ್ಬು ಹೊಂದಿರುವ ಚೀಸ್‌ನಂತಹ ಪದಾರ್ಧಗಳನ್ನು ಬಳಸಬೇಡಿ.
 
- ಎಳ್ಳು ಪಾನಕ ಕುಡಿಯುವುದು ಅಥವಾ ಎಳ್ಳು ತಿನ್ನುವುದು ಬಹಳ ಒಳ್ಳೆಯದು. ಇದು ಕಿಡ್ನಿ ಸರಿಯಾಗಿ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ.
 
- ದಾಳಿಂಬೆ ಜ್ಯೂಸ್ ಕಿಡ್ನಿ ಸ್ಟೋನ್ ಬರದಂತೆ ತಡೆಯುತ್ತದೆ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದವರು ದಾಳಿಂಬೆ ಜ್ಯೂಸ್ ಸೇವಿಸುವುದರಿಂದ ಹೆಚ್ಚಿನ ಉಪಯೋಗ ಪಡೆಯಬಹುದು ಎಂದು ಅಧ್ಯಯನವೊಂದು ತಿಳಿಸಿದೆ.
 
- 1 ಹಿಡಿ ಮೂಲಂಗಿ ಸೊಪ್ಪು ಅಥವ ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣಗೆ ಕತ್ತರಿಸಿ ಅದನ್ನು ನೀರಲ್ಲಿ ಹಾಕಿ 10 ನಿಮಿಷ ಬೇಯಿಸಿಬೇಕು. ನಂತರ ಸೋಸಿಕೊಂಡು ತಂಪಾದ ಸ್ಥಳ ಅಥವಾ ಪ್ರಿಜ್ ನಲ್ಲಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ದಿನವು ಒಂದು ಗ್ಲಾಸ್ ಈ ನೀರನ್ನು ಕುಡಿಯುತ್ತಿರಿ ಕಿಡ್ನಿ ಸ್ವಚ್ಛವಾಗುತ್ತದೆ.Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಕಿಡ್ನಿಯ ಆರೋಗ್ಯ ಆರೋಗ್ಯ ಸಲಹೆಗಳು Health Health Tips ಆರೋಗ್ಯ Kidney Health Kidney Problems

Widgets Magazine

ಆರೋಗ್ಯ

news

ಮೂತ್ರ ಪಿಂಡಗಳನ್ನು ಶುದ್ಧಿಕರಿಸುತ್ತದೆಯಂತೆ ಈ ಸೊಪ್ಪಿನ ಕಷಾಯ

ಬೆಂಗಳೂರು : ಮಾನವ ದೇಹಕ್ಕೆ ಮೂತ್ರ ಪಿಂಡಗಳು ತುಂಬಾನೇ ಸಹಕಾರಿಯಾಗಿದೆ. ದೇಹದಲ್ಲಿನ ಕಲ್ಮಶಗಳನ್ನು ...

news

ಹೊಟ್ಟೆ ಉಬ್ಬರದ ಸಮಸ್ಯೆಗೆ ಪರಿಹಾರಗಳು

ಇತ್ತೀಚಿನ ದಿನಗಳಲ್ಲಿ ಹೊಟ್ಟೆ ಉಬ್ಬರ ನಮ್ಮಲ್ಲಿ ಕಾಡುವಂತಹ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಕೆಲವೊಮ್ಮೆ ...

news

ಸೆಕ್ಸ್ ನಲ್ಲಿ ಪುರುಷರನ್ನು ಖುಷಿಪಡಿಸಲು ಸುಲಭ ಉಪಾಯ ಏನು ಗೊತ್ತಾ?!

ಬೆಂಗಳೂರು: ಪುರುಷ ಸಂಗಾತಿಯನ್ನು ಮಧು ಮಂಚದಲ್ಲಿ ಖುಷಿಪಡಿಸಲು ಏನು ಮಾಡಬೇಕು? ಕೆಲವು ಉಪಾಯಗಳು ಇಲ್ಲಿವೆ ...

news

ರುಚಿಯಾದ ಅಪ್ಪಿ ಪಾಯಸ ಮಾಡುವುದು ಹೇಗೆಂದು ಗೊತ್ತಾ….?

ಬೆಂಗಳೂರು: ಅಪ್ಪಿ ಪಾಯಸ ತಿನ್ನಲು ಬಲು ರುಚಿಕರವಾಗಿರುತ್ತದೆ. ವಿಶೇಷ ಸಂದರ್ಭಗಳಲ್ಲಿ ಈ ಪಾಯಸವನ್ನು ...

Widgets Magazine