ಬಾಣಂತಿಯರು ಈ ಆಹಾರವನ್ನು ಸೇವಿಸಲೇಬಾರದು

Bangalore, ಭಾನುವಾರ, 6 ಆಗಸ್ಟ್ 2017 (09:01 IST)

ಬೆಂಗಳೂರು: ಗರ್ಭಿಣಿಯಾಗಿದ್ದಾಗ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೋ, ಅದರ ದುಪ್ಪಟ್ಟು ಹೆರಿಗೆಯಾದ ಮೇಲೂ ವಹಿಸಬೇಕು.


 
ಬಾಣಂತಿ ಮಹಿಳೆಯರು ಆದಷ್ಟು ತಮ್ಮ ಕ್ರಮದಲ್ಲಿ ಬದಲಾವಣೆ ಮಾಡಬೇಕು. ಮಗುವಿಗೆ ಸಮಸ್ಯೆಯಾಗದಂತಹ ಆಹಾರ ಸೇವನೆ ಒಳಿತು. ಅಲ್ಲದೆ, ಈ ಸಂದರ್ಭದಲ್ಲಿ ಬಾಣಂತಿಯರ ದೇಹ ಸೂಕ್ಷ್ಮವಾಗಿದ್ದು, ಬೇಗನೇ ಅನಾರೋಗ್ಯಕ್ಕೊಳಗಾಗುವ ಸಾಧ್ಯತೆಯಿರುವುದರಿಂದ ಕೆಲವು ಆಹಾರಗಳನ್ನು ಕಡೆಗಣಿಸುವುದೇ ಒಳ್ಳೆಯದು.
 
ಖಾರ
ಆದಷ್ಟು ಮಸಾಲೆ, ಖಾರ ಇರುವ ಆಹಾರ ಸೇವಿಸದಿರಿ. ಈ ಸಂದರ್ಭದಲ್ಲಿ ಬೆಳ್ಳುಳ್ಳಿ, ಶುಂಠಿ, ಮೆಣಸು, ಈರುಳ್ಳಿಯಂತಹ ಖಾರ ಅಥವಾ ಮಸಾಲೆ ಪದಾರ್ಥಗಳನ್ನು ಸೇವಿಸಿದರೆ ಅದರ ಪರಿಣಾಮ ಮಗುವಿನ ಮೇಲಾಗಬಹುದು.
 
ಕೆಫೈನ್
ಕೆಫೈನ್ ಅಂಶವಿರುವ ಆಹಾರ ಪದಾರ್ಥಗಳನ್ನು ಸೇವಿಸದಿರಿ. ಹಾಲುಣಿಸುವ ತಾಯಿ ಇದನ್ನು ಸೇವಿಸುವುದರಿಂದ ಮಗುವಿನ ನಿದ್ರೆಗೆ ಸಮಸ್ಯೆಯಾಗಬಹುದು.
 
ಮೀನು
ಮೀನು ನಿಮ್ಮ ಪ್ರಿಯ ಆಹಾರವಾಗಿದ್ದರೂ, ನಾಲಿಗೆಗೆ ಕಡಿವಾಣ ಹಾಕಿ. ಹಾಲುಣಿಸುವ ತಾಯಿ ಇದನ್ನು ಸೇವಿಸಿದರೆ ಮಗುವಿನ ಮೆದುಳಿನ ಮೇಲೆ ಪರಿಣಾಮ ಬೀರಬಹುದು.
 
ಹುಳಿ ಹಣ್ಣು
ಹುಳಿಭರಿತ ಹಣ್ಣುಗಳಾದ ನಿಂಬೆ, ಕಿತ್ತಳೆ, ದ್ರಾಕ್ಷಿ ಸೇವಿಸದಿರಿ. ಇದರಿಂದ ಮಗುವಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗಿ ಬೇಧಿಯಂತಹ  ಜೀರ್ಣ ಸಂಬಂಧಿ ಸಮಸ್ಯೆ ಬರಬಹುದು.
 
ಇದನ್ನೂ ಓದಿ.. ಅತ್ತ ಕುಂಬ್ಳೆ, ಇತ್ತ ಭಜಿ ದಾಖಲೆಗೆ ಕುತ್ತು ತಂದ ಜಡೇಜಾ-ಅಶ್ವಿನ್ ಜೋಡಿ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಬಾಣಂತಿ ಮಗು ಆಹಾರ ಆರೋಗ್ಯ Food Child Health Nursing Mother

ಆರೋಗ್ಯ

news

ಗಂಡ ಹೆಂಡಿರ ನಡುವೆ ವಯಸ್ಸಿನ ಅಂತರವಿದ್ದರೆ ಅಪಾಯ!

ನವದೆಹಲಿ: ಗಂಡ ಹೆಂಡತಿ ನಡುವೆ ವಯಸ್ಸಿನ ಅಂತರ ಎಷ್ಟಿರಬೇಕು? ಪ್ರೀತಿ ಮತ್ತು ಸಂಬಂಧದಲ್ಲಿ ವಯಸ್ಸಿನ ಅಂತರದ ...

news

ಇದನ್ನು ಓದಿದರೆ ಬೀರ್ ಗೆ ಚಿಯರ್ಸ್ ಹೇಳಲೇಬೇಕು..!

ಬೆಂಗಳೂರು: ಬಿಯರ್ಸ್ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹಲವು ಬಾರಿ ಓದಿದ್ದೇವೆ. ಆದರೆ ಬಿಯರ್ಸ್ ...

news

ರಾತ್ರಿ ಮೊಸರು ಸೇವಿಸಬಾರದೇ?

ಬೆಂಗಳೂರು: ಊಟದ ಜತೆಗೆ ನೇರವಾಗಿ ಅಥವಾ ಪರೋಕ್ಷವಾಗಿ ಮೊಸರು ಸೇವನೆ ಮಾಡುವುದನ್ನು ಎಲ್ಲರೂ ಅಭ್ಯಾಸ ...

news

ಈ ಒಣ ಹಣ್ಣುಗಳನ್ನು ನೀವು ಸೇವಿಸಲೇಬೇಕು! ಯಾಕೆ ಗೊತ್ತಾ?

ಬೆಂಗಳೂರು: ಒಣ ಹಣ್ಣುಗಳ ಸೇವನೆ ನಮ್ಮ ಆರೋಗ್ಯಕ್ಕೆ ಭಾರೀ ಒಳ್ಳೆಯದು. ಯಾವ ಒಣ ಹಣ್ಣುಗಳಿಂದ ಯಾವ ಲಾಭ

Widgets Magazine