ಪೋಷಕರ ಅತಿಯಾದ ಲೈಂಗಿಕಾಸಕ್ತಿ ಮಕ್ಕಳ ಮೇಲೆ ಈ ರೀತಿಯಾದ ಪರಿಣಾಮ ಬೀರಲಿದೆಯಂತೆ!

ಬೆಂಗಳೂರು, ಮಂಗಳವಾರ, 13 ಫೆಬ್ರವರಿ 2018 (06:08 IST)

ಬೆಂಗಳೂರು : ಹೌದು. ಅತಿಯಾದ ಲೈಂಗಿಕಾಸಕ್ತಿ ಮಕ್ಕಳ ಭವಿಷ್ಯದ ಮೇಲೆ ಕೆಟ್ಟ ಬೀರುತ್ತದೆ ಎಂದು ಸಂಶೋಧನೆಗಳು ದೃಢಪಡಿಸಿವೆ. ಇಂತವರ ಮಕ್ಕಳು ಯೋಚನೆ ಮಾಡುವುದನ್ನೇ ಕೈಬಿಡುತ್ತಾರೆ.


ಇದಕ್ಕೆ ಮುಖ್ಯ ಕಾರಣ, ಇಂತಹ ವಿವಾಹೇತರ ಸಂಬಂಧ ಹೊಂದಿರುವ ಅಥವಾ ಅತಿ ಕಾಮುಕ ತಂದೆ-ತಾಯಿ, ಮಕ್ಕಳ ಬಗ್ಗೆ ಯೋಚಿಸುವುದನ್ನು ಬಿಟ್ಟು ತಮ್ಮ ಸುಖ ಆಕಾಂಕ್ಷೆಗಳ ಕಡೆಗೆ ಹೆಚ್ಚಿನ ಗಮನ ನೀಡುತ್ತಾರೆ.

 
ದಿನದ ಬಹುತೇಕ ಕಾಲ ಮುಚ್ಚಿದ ಬಾಗಿಲ ಕೋಣೆಯಲ್ಲಿ ಹೆತ್ತವರು ಕಳೆದರೆ ಮಕ್ಕಳಲ್ಲಿ ಸಹಜವಾಗಿಯೇ ಉದ್ವೇಗ ಮತ್ತು ಅತಂತ್ರ ಸ್ಥಿತಿಯ ಮನೋಭಾವ ನಿರ್ಮಾಣವಾಗುತ್ತದೆ. ಇದು ಮಾನಸಿಕ ಮತ್ತು ಸಮಸ್ಯೆಗಳನ್ನು ತಂದೊಡ್ಡುತ್ತವೆ. ಇಂತಹ ಸನ್ನಿವೇಶ ಎದುರಿಸುವ ಮಕ್ಕಳು ತಮ್ಮ ಬೇರೆ ಹವ್ಯಾಸಗಳ ಮೂಲಕ ಅದನ್ನು ತೋರ್ಪಡಿಸುತ್ತಾರೆ. ಬೆರಳು ಚೀಪುವುದು, ರಾತ್ರಿ ಭಯ ಪಡುವುದು, ದೇಹದ ಆಕಾರ ತೋರಿಸುವಂತೆ ಬಿಗಿಯಾದ ಬಟ್ಟೆ ಧರಿಸುವುದು, ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ, ವಿನಾಕಾರಣ ಸಿಟ್ಟಿಗೇಳುವುದು ಮೊದಲಾದ ಅಭ್ಯಾಸಗಳು ಮಕ್ಕಳಲ್ಲಿ ಬೆಳೆಯುತ್ತದೆ.


ಇಂತಹ ಹೆತ್ತವರ ಮಧ್ಯೆ ಬೆಳೆಯುವ ಮಗು ದೊಡ್ಡದಾದ ಬಳಿಕ ಒಂದೇ ಹೆಣ್ಣಿನ ಜೊತೆ ಸಂಬಂಧ ಇಟ್ಟುಕೊಳ್ಳದೆ ಪರಸ್ತ್ರೀ ಜೊತೆ ಸಂಬಂಧ ಹೊಂದುವುದು ಸಹಜವಾಗಿರುತ್ತದೆ. ವಿಚ್ಛೇದನ ಮತ್ತು ಭಾವನಾತ್ಮಕ ಸಮಸ್ಯೆಗಳು ಇವರಲ್ಲಿ ಸಾಮಾನ್ಯವಾಗಿರುತ್ತವೆ. ಇನ್ನು ಶಾಲೆಯಲ್ಲಿ ಕಲಿಕೆಯಲ್ಲೂ ಹಿಂದುಳಿಯುವುದು ಮಾತ್ರವಲ್ಲ ಮಾನಸಿಕ ಮತ್ತು ನಡವಳಿಕೆ ಸಮಸ್ಯೆಯಿಂದ ಬಳಲುತ್ತಾರೆ.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮೊದಲು ಸೆಕ್ಸ್ ಮಾಡುವಾಗ ಇದರ ಬಗ್ಗೆ ಎಚ್ಚರವಿರಲೇಬೇಕು!

ಬೆಂಗಳೂರು: ಮೊದಲು ಸೆಕ್ಸ್ ಮಾಡುವಾಗ ಹಲವು ವಿಚಾರಗಳ ಬಗ್ಗೆ ಎಚ್ಚರವಿರಲೇಬೇಕು. ಇಲ್ಲದಿದ್ದರೆ ...

news

ಕಾರಿನ ಹಾರನ್ ನಿಂದ ಹೃದಯಕ್ಕೆ ಕುತ್ತು!

ಬೆಂಗಳೂರು: ವಿಮಾನ, ಹೆಲಿಕಾಪ್ಟರ್ ಗಳು ಓಡಾಡುವ ಉಂಟಾಗುವ ಎದೆ ನಡುಗಿಸ ಶಬ್ಧ, ಕಾರಿನ ಕರ್ಕಶ ಹಾರನ್ ಗಳು ...

news

ಬ್ರೆಡ್ ಜಾಮೂನ್ ಮಾಡುವುದು ಹೇಗೆ ಗೊತ್ತಾ...?

ಬೆಂಗಳೂರು : ಜಾಮೂನ್ ಎಂದರೆ ಹೆಚ್ಚಿನವರು ಇಷ್ಟಪಡುತ್ತಾರೆ. ಜಾಮೂನು ತಯಾರಿಸಲು ರೆಡಿಮೆಡ್ ಜಾಮೂನ್ ...

news

ಈ ಆಹಾರಗಳನ್ನು ಹಸಿಯಾಗಿ ತಿನ್ನಲೇಬೇಡಿ!

ಬೆಂಗಳೂರು: ಕೆಲವು ಆಹಾರ ವಸ್ತುಗಳನ್ನು ಬೇಯಿಸಿ ತಿಂದರೆ ಅದರ ಸತ್ವ ಹೊರಟು ಹೋಗುತ್ತದೆ ಎಂಬ ನಂಬಿಕೆಯಿದೆ. ...

Widgets Magazine