ನಿಫಾ ವೈರಸ್ ಹರಡದಂತೆ ತಡೆಯಲು ಈ ರೀತಿ ಎಚ್ಚರಿಕೆಯಿಂದಿರಿ

ಬೆಂಗಳೂರು, ಶುಕ್ರವಾರ, 25 ಮೇ 2018 (08:50 IST)

ಬೆಂಗಳೂರು: ನಿಫಾ ವೈರಸ್ ಕೇರಳದಲ್ಲಿ ಈಗಾಗಲೇ ಒಂದೇ ಕುಟುಂಬದ ನಾಲ್ವರನ್ನು ಬಲಿತೆಗೆದುಕೊಂಡಿದೆ. ಈ ಮಾರಕ ರೋಗ ಹರಡದಂತೆ ತಡೆಯಲು ರಾಜ್ಯದಲ್ಲೂ ಎಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ.
 
ಬಾವಲಿ ತಿನ್ನುವ ಹಣ್ಣುಗಳು, ಆಹಾರ ವಸ್ತುಗಳನ್ನು ನಾವು ಸೇವಿಸುವುದರಿಂದ ಈ ಖಾಯಿಲೆ ಹರಡಬಹುದು ಎಂದು ತಜ್ಞರು ಹೇಳುತ್ತಿದ್ದಾರೆ.
 
ಹೀಗಾಗಿ ಬಾವಲಿ, ಪಕ್ಷಿಗಳು ಅರ್ಧ ಕಚ್ಚಿದ, ಕೆರೆದ ಹಣ್ಣುಗಳನ್ನು ಸೇವಿಸಬೇಡಿ. ಆದಷ್ಟು ಸಂಸ್ಕರಿತ ಹಣ್ಣುಗಳನ್ನೇ ಸೇವಿಸುವುದು ಉತ್ತಮ. ಮಾವಿನ ಹಣ್ಣು, ಸೀಬೇಕಾಯಿ, ಹಲಸಿನ ಹಣ್ಣು ಸೇವಿಸುವಾಗ  ವಿಶೇಷವಾಗಿ ಎಚ್ಚರಿಕೆಯಿರಲಿ. ಬಾವಲಿ ಇರುವ ಸ್ಥಳದಲ್ಲಿ ಆಹಾರ, ನೀರು ಸೇವಿಸದಿರುವುದೇ ಉತ್ತಮ.
 
ಸೋಂಕು ಪೀಡಿತ ಪ್ರದೇಶಕ್ಕೆ ಸದ್ಯಕ್ಕೆ ತೆರಳದಿರುವುದೇ ಉತ್ತಮ. ಅನಿವಾರ್ಯವಾಗಿ ತೆರಳುವುದಿದ್ದರೆ ಗುಣಮಟ್ಟದ ಮಾಸ್ಕ್ ಧರಿಸಿ. ಅಂತಹ ಸ್ಥಳಕ್ಕೆ ಹೋದರೆ ಮರಳಿದ ಮೇಲೆ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆದುಕೊಳ್ಳಿ.  ಹಾಗೆಯೇ ಸರಿಯಾದ ಸೋಪ್ ಬಳಸಿ ಸ್ನಾನ ಮಾಡಿ.
 
ಹಣ್ಣು ಮತ್ತು ತರಕಾರಿಗಳನ್ನು ಸರಿಯಾಗಿ ಉಪ್ಪು ನೀರಿನಲ್ಲಿ ಕೆಲ ಹೊತ್ತು ನೆನೆಸಿ ತೊಳೆದು ನಂತರವೇ ಸೇವಿಸಿ. ಗಾಯವಾದ, ಕೆರೆತದ ಕಲೆಯಿರುವ ಹಣ್ಣು,ಗಳನ್ನು ಸೇವಿಸದಿರಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ನಿಯಮಿತವಾಗಿ ಸೆಕ್ಸ್ ಮಾಡುವುದರಿಂದ ಮಹಿಳೆಯರ ದೇಹದಲ್ಲಿ ಬದಲಾವಣೆಯಾಗುವುದೇ?

ಬೆಂಗಳೂರು: ಸೆಕ್ಸ್ ಎನ್ನುವುದು ಸುಮಧುರ ದಾಂಪತ್ಯದ ರಹದಾರಿ ಮಾತ್ರವಲ್ಲ, ಇದರಿಂದ ವ್ಯಕ್ತಿಯ ದೈಹಿಕ ಮತ್ತು ...

news

ಹಾಲಿನೊಂದಿಗೆ ಬೆಳ್ಳುಳ್ಳಿ ಸೇರಿಸಿ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದಾ? ಇಲ್ಲಿದೆ ನೋಡಿ ಇದಕ್ಕೆ ಉತ್ತರ

ಬೆಂಗಳೂರು : ಹಾಲನ್ನೂ ಅಷ್ಟೇ ನಾವು ದಿನನಿತ್ಯ ಬಳಸುತ್ತಿರುತ್ತೇವೆ. ಹಾಲು ಸಂಪೂರ್ಣ ಪೌಷ್ಟಿಕ ಆಹಾರ ಎಂದು ...

news

ನಮ್ಮ ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸುವಂತಹ ಆಹಾರ ಪದಾರ್ಥಗಳು ಇಲ್ಲಿವೆ ನೋಡಿ

ಬೆಂಗಳೂರು : ನಾವು ಕಾಯಿಲೆಗಳನ್ನು ದೂರ ಮಾಡಲು ಹಲವಾರು ಔಷಧಿಗಳನ್ನ ತೆಗೆದುಕೊಳ್ಳುತ್ತೇವೆ, ಆದರೆ ನಾವು ...

news

ತಣ್ಣೀರು ಸ್ನಾನ ಅಂದಾಕ್ಷಣ ಓಡಿಹೋಗುವವರು ಇದನೊಮ್ಮೆ ಓದಿ

ಬೆಂಗಳೂರು : ತಣ್ಣೀರು ಸ್ನಾನ ಅಂದಾಕ್ಷಣ ಅನೇಕರು ಮಾರು ದೂರು ಓಡುತ್ತಾರೆ. ಆಯ್ಯೋ ಆಗಲ್ಲಪ್ಪಾ ತುಂಬಾ ಚಳಿ ...

Widgets Magazine