ಮೂಲವ್ಯಾಧಿ ರೋಗಕ್ಕೆ ಸರಳ ಮನೆ ಮದ್ದುಗಳು

ಬೆಂಗಳೂರು, ಮಂಗಳವಾರ, 5 ಜೂನ್ 2018 (16:34 IST)

Widgets Magazine

ಪೈಲ್ಸ್ ಅಥವಾ ಮೂಲವ್ಯಾಧಿ ಒಂದು ವಿಪರೀತ ನೋವು ನೀಡುವ ರೋಗವಾಗಿದೆ. ಸರಿಯಾದ ಆಹಾರ ಕ್ರಮ ಹಾಗೂ ಜೀವನ ಶೈಲಿ ಕೊರತೆಯಿಂದಾಗಿ ಕಾಣಿಸಿಕೊಳ್ಳುವ ರೋಗ ಇದಾಗಿದೆ.

ಇದಕ್ಕೆ ಮುಖ್ಯ ಕಾರಣಗಳೆಂದರೆ ಕಡಿಮೆ ಫೈಬರ್ ಇರುವ ಆಹಾರ, ವಯಸ್ಸಾಗುವಿಕೆ, ಆನುವಂಶಿಕ ಮತ್ತು ಗರ್ಭಧಾರಣೆಯ ಜೊತೆಗೆ ದೀರ್ಘಕಾಲದ ಮಲಬದ್ಧತೆಯಾಗಿದೆ. ಇದನ್ನು ಸುಲಭವಾಗಿ ಮನೆಯಲ್ಲಿ ಇರುವ ಕೆಲವು ಪದರ್ಥಗಳಿಂದಲೇ ಪರಿಹಾರ ಮಾಡಿಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳೋಣ.
 
1. ಈರುಳ್ಳಿ
 
- 1 ಈರುಳ್ಳಿಯನ್ನು ನುಣ್ಣಗೆ ರುಬ್ಬಿ ಪೇಸ್ಟ್ ತಯಾರಿಸಿ, ಅದನ್ನು ಸಿಹಿ ಮಜ್ಜಿಗೆ ಜೊತೆಗೆ ಸೇರಿಸಿ ಊಟತ  ನಂತರ ಕುಡಿಯಿರಿ.
- ಈರುಳ್ಳಿಯನ್ನು ಚಿಕ್ಕದಾಗಿ ಹೆಚ್ಚಿ ಅದನ್ನು ತುಪ್ಪದಲ್ಲಿ ಹುರಿದು ಅನ್ನದೊಂದಿಗೆ ಸೇವಿಸಿ.
- 20-25 ನಾಟಿ ಈರುಳ್ಳಿ ಸೋಗನ್ನು ಸಣ್ಣಗೆ ಕತ್ತರಿಸಿ, ಬೆಣ್ಣೆ ಅಥವಾ ಎಣ್ಣೆಯಲ್ಲಿ ಇದನ್ನು ಫ್ರೈ ಮಾಡಿ ಪ್ರತಿದಿನ ಅದನ್ನು ಸೇವಿಸಿ.
 
2. ಬಾಳೆಹಣ್ಣು
 
- 1 ಕಪ್ ಹಾಲು ಮತ್ತು 1 ಬಾಳೆ ಹಣ್ಣನ್ನು ಮಿಶ್ರಣ ಮಾಡಿ ಕುದಿಸಿ. ಈ ಮಿಶ್ರಣವನ್ನು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಸೇವಿಸಿ.
- ಪ್ರತಿದಿನ ಮಲಗುವ ಮೊದಲು ಏಲಕ್ಕಿ ಪುಡಿಯೊಂದಿಗೆ ಬಾಳೆಹಣ್ಣನ್ನು ಸೇವಿಸಿ.
 
3. ಮೂಲಂಗಿ
 
- ಪ್ರತಿದಿನ ¼ ಕಪ್ ನಷ್ಟು ಮೂಲಂಗಿ ರಸವನ್ನು ಕುಡಿಯಿರಿ, ಇದನ್ನು ಮೂಲವ್ಯಾಧಿ ಪರಿಹಾರವಾಗುವ ತನಕ ಬೆಳಗ್ಗೆ ಮತ್ತು ರಾತ್ರಿ ಕುಡಿಯಬೇಕು.
- ಮೂಲಂಗಿ ರಸಕ್ಕೆ ಮಜ್ಜಿಗೆಯನ್ನು ಬೆರೆಸಿ ಕುಡಿಯಿರಿ.
- ಮೂಲಂಗಿಯನ್ನು ಪೇಸ್ಟ್ ಮಾಡಿ ಹಾಲಿನಲ್ಲಿ ಮಿಶ್ರಣ ಮಾಡಿ ಅದನ್ನು ಗುದದ್ವಾರದ ಸುತ್ತಲೂ ಹಚ್ಚಿದರೆ ಊತ ಕಡಿಮೆ ಆಗುತ್ತದೆ.
- ಪ್ರತಿದಿನ ಊಟದ ಜೊತೆ ಮೂಲಂಗಿ ಸಲಾಡ್ ಸೇವಿಸಿ.
 
4. ಆಪಲ್ ಸೈಡರ್ ವಿನೆಗರ್
 
 - ಮೆದುವಾದ ಬಟ್ಟೆ ಅಥವಾ ಹತ್ತಿಯನ್ನು ಆಪಲ್ ಸೈಡರ್ ವಿನೆಗರ್‌ನಲ್ಲಿ ಅದ್ದಿ ನೋವಿರುವ ಜಾಗಕ್ಕೆ ಒತ್ತಿ. ನಿಮಗೆ ಆರಾಮ ಸಿಗುವವರೆಗೂ ಹೀಗೆ ಮಾಡುತ್ತಿರಿ.
 
5. ಅಲೋವೆರಾ/ಲೋಳೆರಸ
 
- ಪ್ರತಿದಿನ ಒಂದು ಚಮಚದಷ್ಟು ಅಲೋವೆರಾ ತಿರುಳನ್ನು ದಿನಕ್ಕೆ ಮೂರು ಬಾರಿ ಸೇವಿಸಿ.
- ಅಲೋವೆರಾ ಎಲೆಯನ್ನು ಮದ್ಯಕ್ಕೆ ಸೀಳಿ ಸ್ವಲ್ಪ ಬಿಸಿ ಮಾಡಿ. ಮಲಗುವ ಮುಂಚೆ ಆ ಪ್ರದೇಶಕ್ಕೆ ಹಚ್ಚಿಕೊಳ್ಳಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಮೂಲವ್ಯಾಧಿ ಆರೋಗ್ಯ ಟಿಪ್ಸ್ ಆರೋಗ್ಯ ಸಲಹೆಗಳು Piles Hemorrhoids Health Information Hemorrhoids Tips Health Tips

Widgets Magazine

ಆರೋಗ್ಯ

news

ಮನೆಯಲ್ಲಿಯೇ ಅಡಗಿವೆ ಸೌಂದರ್ಯದ ಟಿಪ್ಸ್

ಹೊಳೆಯುವ ಮತ್ತು ಕಾಂತಿಯುತ ಚರ್ಮವನ್ನು ಪಡೆಯುವುದು ಪ್ರತಿಯೊಬ್ಬರ ಕನಸೂ ಆಗಿದೆ. ಬ್ಯೂಟಿಪಾರ್ಲರ್‌ಗೆ ಹೋಗಿ ...

news

ಕಪ್ಪಾಗಿರುವ ಚರ್ಮವನ್ನು ಬಿಳಿಯಾಗಿಸಿಕೊಳ್ಳುವುದು ಹೇಗೆ...!?

ಎಲ್ಲ ಯುವಕ ಯುವತಿಯರಿಗೂ ತಾವು ಶ್ವೇತವರ್ಣದವರಾಗಿರಬೇಕು ಎನ್ನುವ ಹಂಬಲವಿರುತ್ತದೆ. ಇನ್ನು ಕೆಲವರ ಚರ್ಮ ...

news

ನಿಮ್ಮ ತಲೆಗೂದಲಿನ ಉತ್ತಮ ಆರೋಗ್ಯಕ್ಕಾಗಿ ಕೆಲವು ಸಲಹೆಗಳು...

ತಲೆ ಕೂದಲು ದಟ್ಟವಾಗಿ ಉದ್ದವಾಗಿದ್ದರೂ ಸಹ ಅದನ್ನು ಧೂಳು, ಬೆವರಿನಿಂದ ಕಾಪಾಡಿಕೊಳ್ಳುವುದು ಮತ್ತು ...

news

ನಿಮ್ಮ ಹೈಟ್ ಕಡಿಮೆಯಾಗಲು ಕಾರಣವೇನು ಗೊತ್ತಾ?

ಬೆಂಗಳೂರು : ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ ದೇಹದ ಬೆಳವಣಿಗೆ ಕಡಿಮೆಯಾಗುತ್ತದೆ, ಕೆಲವೊಮ್ಮೆ ...

Widgets Magazine