ಕೈಕಾಲು ಊತದಿಂದ ಬಳಲುತ್ತಿದ್ದವರಿಗೆ ಇಲ್ಲಿದೆ ಮನೆಮದ್ದು

ಬೆಂಗಳೂರು, ಶುಕ್ರವಾರ, 12 ಜನವರಿ 2018 (06:59 IST)

ಬೆಂಗಳೂರು : ಕೆಲವೊಮ್ಮೆ ವಿವಿಧ ಕಾರಣಗಳಿಂದ ಅಂಗಾಂಶಗಳಲ್ಲಿ ದ್ರವಪದಾರ್ಥಗಳ  ಪ್ರಮಾಣ ಜಾಸ್ತಿಯಾಗಿ ದೇಹದ ಕೆಲವು ಭಾಗಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ದೀರ್ಘ ಪ್ರಯಾಣ ಮಾಡುವುದರಿಂದಲೂ ಕೆಲವರ ಪಾದಗಳಲ್ಲಿ ನೀರು ತುಂಬಿಕೊಂಡು ಊದಿಕೊಳ್ಳುತ್ತದೆ ಇದಕ್ಕೆ ‘ಎಡಿಮಾ’ ಎನ್ನುತ್ತಾರೆ.

 
ಇದು ಒಂದು ದೊಡ್ಡ ಸಮಸ್ಯೆ ಎನಿಸದಿದ್ದರೂ ಇದು ಮೂತ್ರ ಪಿಂಡದ ವೈಫಲ್ಯ ಅಥವಾ ಹೃದಯರೋಗದ ಸಂಕೇತವಾಗಿರುತ್ತದೆ. ಇದಕ್ಕೆ ಹಲವು ಕಾರಣಗಳಿರುತ್ತದೆ. ಪರಿಷ್ಕೃತ ಆಹಾರಗಳ ಅತಿಯಾದ ಸೇವನೆಯಿಂದ ಈ ಸಮಸ್ಯೆ ಉಂಟಾಗುತ್ತದೆ. ಅತಿಯಾದ ಸೋಡಿಯಂ ಸೇವನೆಯಿಂದ, ನೀರ್ಜಲಿಕರಣ, ವಿಟಮಿನ್ ಬಿ6, ಮ್ಯಾಗ್ನಿಶಿಯಂ, ಪೊಟ್ಯಾಶಿಯಂ ಕೊರತೆ ಇದಕ್ಕೆ ಕಾರಣ.

 
ಇದಕ್ಕೆ ಪರಿಹಾರವೆಂದರೆ ಕೆಲವು ಆಹಾರಗಳು. ಇವು ದೇಹದಲ್ಲಿರುವ ನೀರಿನ ಧಾರಣವನ್ನು ತಡೆದು ದೈಹಿಕ ದ್ರವ್ಯಗಳನ್ನು ಸರಿದೂಗಿಸುತ್ತದೆ. ತುರುಚಿ ಎಲೆಗಳು, ಬೆಳ್ಳುಳ್ಳಿ, ಮೆಕ್ಕೆಜೋಳದ ಕೂದಲುಗಳು, ಕಾಡುಸೇವಂತಿಗೆ, ದಾಸವಾಳ ಈ ಪದಾರ್ಥಗಳನ್ನು ಬಳಸಿ ದಿನಕ್ಕೆ ಒಂದೆರಡು ಬಾರಿ ಚಹಾ ಮಾಡಿ ಕುಡಿದರೆ ಈ ಸಮಸ್ಯೆಗೆ ಪರಿಹಾರವನ್ನು ಕಾಣಬಹುದು. ಅದರ ಜೊತೆಗೆ ಸಕ್ಕರೆ ಹಾಗು ಸೋಡಿಯಂ ಸೇವನೆಯಿಂದ ದೂರವಿರಬೇಕು. ಇದರಿಂದ ಕೈಕಾಲು ಊತದಿಂದ ಮುಕ್ತಿಹೊಂದಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಗರ್ಭ ನಿರೋಧಕ ಮಾತ್ರೆಗಳನ್ನು ಸೇವಿಸುತ್ತಿದ್ದೀರಾ...? ಅದರಿಂದಾಗುವ ಅಡ್ಡ ಪರಿಣಾಮಗಳು ಇಲ್ಲಿದೆ ನೋಡಿ!

ಬೆಂಗಳೂರು : ಹೊಸದಾಗಿ ಮದುವೆಯಾಗುವ ದಂಪತಿಗಳು ತಮ್ಮ ನವ ವೈವಾಹಿಕ ಜೀವನದ ಸುಖವನ್ನು ಅನುಭವಿಸಲು, ಅದರಲ್ಲೂ ...

news

ಮಕ್ಕಳಿಗೆ ಇಷ್ಟವಾಗುವ ಕಡಲೆಬೀಜದ ಬರ್ಫಿ

ಬೆಂಗಳೂರು: ಬಡವರ ಬಾದಾಮಿ ಎಂದೇ ಪ್ರಸಿದ್ಧವಾಗಿರುವ ಶೇಂಗಾ (ಕಡಲೇಬೀಜ) ಸಾಕಷ್ಟು ಪೌಷ್ಠಿಕಾಂಶವನ್ನು ...

news

ರುಚಿ ರುಚಿಯಾದ ಮಾವಿನಕಾಯಿಯ ಚಿತ್ರಾನ್ನ

ಬೆಂಗಳೂರು : ಬೆಳಿಗ್ಗೆ ಟಿಪನ್ ಗೆ ಯಾವ ತಿಂಡಿ ಮಾಡುವುದು ಎಂಬ ಚಿಂತೆ ಎಲ್ಲಾ ಗೃಹಿಣಿಯವರಿಗೂ ...

news

ಡೆಲಿವರಿ ನಂತರ ಮಹಿಳೆ ಸೆಕ್ಸ್ ನಲ್ಲಿ ಆಸಕ್ತಿ ಕಳೆದುಕೊಳ್ಳುವುದು ನಿಜವೇ?

ಬೆಂಗಳೂರು: ಡೆಲಿವರಿಯಾದ ಮೇಲೆ ಮಹಿಳೆಯರ ಗಮನ ಕೇವಲ ಗಂಡನ ಕಡೆಗೆ ಮಾತ್ರವಲ್ಲ, ಅದಕ್ಕಿಂತ ಹೆಚ್ಚು ಮಗುವಿನ ...

Widgets Magazine
Widgets Magazine