ಬೆಂಗಳೂರು : ಹುತ್ತತ್ತಿಯು ಪೊದೆಯ ರೂಪದಲ್ಲಿ ಬೆಳೆಯುತ್ತದೆ. ನಕ್ಷತ್ರದಂತಿರುವ ಸೂಕ್ಷ್ಮ ರೋಮಗಳು ಗಿಡದ ಎಲ್ಲಾ ಭಾಗದಲ್ಲೂ ಇರುತ್ತದೆ. ಎಲೆಯು 2-5 ಸೆಂ.ಮೀ. ಉದ್ದವಾಗಿದ್ದು ಅಂಡಾಕಾರ ಅಥವಾ ದುಂಡಗಿನ ಆಕಾರದಲ್ಲಿ ಇರುತ್ತದೆ. ಎಲೆಯ ಅಂಚು ಹಲ್ಲಿನಂತೆ ಇರುತ್ತದೆ. ಇದರ ಹೂವು ಹಳದಿ ಬಣ್ಣದ್ದಾಗಿದ್ದು, ಸಣ್ಣದಾಗಿರುತ್ತದೆ. ಇದು ಸಾಮಾನ್ಯವಾಗಿ ಭಾರತದ ಎಲ್ಲಾ ಭಾಗಗಳಲ್ಲೂ ಕಾಣಸಿಗುತ್ತದೆ. ಹುತ್ತತ್ತಿಯ ಎಲ್ಲಾ ಭಾಗವನ್ನು ಅನೇಕ ರೋಗಗಳಿಗೆ ಔಷಧವಾಗಿ ಉಪಯೋಗಿಸಬಹುದಾಗಿದೆ.