ಬೆಂಗಳೂರು: ಒಬ್ಬ ಹುಡುಗಿ ಋತುಮತಿಯಾಗುವ ಸಾಮಾನ್ಯ ವಯಸ್ಸು12 ರಿಂದ 13. ಕೆಲವು ಸಂದರ್ಭಗಳಲ್ಲಿ 8 ರಿಂದ 9 ನೇ ವಯಸ್ಸಿನಲ್ಲಿಯೆ ಋತುಮತಿಯಾಗುತ್ತಾರೆ. ನಿಮ್ಮ ಪುಟ್ಟಮಗಳು ದೊಡ್ಡವಳಾಗುತ್ತಿದ್ದಾಳೆ ಅನ್ನೊದನ್ನು ತೋರಿಸಲು ಹಲವಾರು ಲಕ್ಷಣಗಳು ಅವರಲ್ಲಿ ಕಾಣಿಸುತ್ತದೆ. ಋತುಮತಿಯಾಗುವ 3 ರಿಂದ 6 ತಿಂಗಳ ಮೊದಲು ಹುಡುಗಿಯರ ಕೆಲವು ಅಂಗಾಂಗಗಳಲ್ಲಿ ಬೆಳವಣಿಗೆ ಕಾಣಿಸಿಕೊಳ್ಳುತ್ತದೆ. ಆ ಸೂಕ್ಷ್ಮ ಬದಲಾವಣೆಗಳನ್ನು ನೀವು ಗಮನಿಸಿ ಅವರಿಗೆ ಆ ಬಗ್ಗೆ ಅರಿವು ಮೂಡಿಸಬೇಕು.