ದಾಂಪತ್ಯ ಜೀವನ ಹಾಳು ಮಾಡಲು ಇಷ್ಟೇ ಸಾಕು!

ಬೆಂಗಳೂರು, ಶನಿವಾರ, 10 ಫೆಬ್ರವರಿ 2018 (08:47 IST)

ಬೆಂಗಳೂರು: ದೊಡ್ಡವರು ಹೇಳುವ ಹಾಗೆ ಕಟ್ಟುವದು ಕಷ್ಟ. ಆದರೆ ಕೆಡವುದು ಸುಲಭದ ಕೆಲಸ. ಇದು ನಮ್ಮ ಜೀವನಕ್ಕೆ ಬಹಳ ಅನ್ವಯಿಸುತ್ತದೆ. ಸುಮಧುರ ಹಾಳು ಮಾಡಲು ನಮ್ಮ ಕೆಲವು ಅಭ್ಯಾಸಗಳೇ ಸಾಕು.
 

ತಪ್ಪು ಹುಡುಕುವುದು
ಪದೇ ಪದೇ ಸಂಗಾತಿಯ ಬಳಿ ನೀನು ಹೀಗೆ ಮಾಡಿದರೆ ತಪ್ಪು, ಇದು ಸರಿಯಲ್ಲ ಎಂದು ಸಲಹೆ ಕೊಡುತ್ತಿದ್ದರೆ ಎಲ್ಲರಿಗೂ ಇಷ್ಟವಾಗದು. ಯಾರೂ ಚಿಕ್ಕ ಮಕ್ಕಳಲ್ಲ. ಸರಿ ತಪ್ಪು ಯಾವುದು ಎನ್ನುವುದು ಎಲ್ಲರಿಗೂ ಗೊತ್ತಿರುತ್ತದೆ. ಸಂಗಾತಿ ಇರುವ ಹಾಗೇ ಸ್ವೀಕರಿಸಲು ಕಲಿಯಿರಿ.
 
ನನ್ನ ಕುಟುಂಬವೇ ದೊಡ್ಡದು
ಮದುವೆ ಆದ ಮೇಲೆ ಗಂಡ ಹೆಂಡತಿ ಇಬ್ಬರ ಕುಟಂಬವೂ ಒಂದೇ. ನನ್ನದೇ ಕುಟುಂಬ ದೊಡ್ಡದು ಎಂದು ವಾದ ಮಾಡುತ್ತಿದ್ದರೆ ಸಂಗಾತಿಗೆ ಇಷ್ಟವಾಗದು. ಇಬ್ಬರೂ ಪರಸ್ಪರರ ಕುಟುಂಬವನ್ನು ಗೌರವಿಸುವುದನ್ನು ಕಲಿತರೆ ಒಳ್ಳೆಯದು.
 
ಸಂಗಾತಿಯ ಮೇಲೇ ಕೆಲಸದ ಹೊರೆ
ಹೆಂಡತಿಯೇ ಮನೆ ಕೆಲಸ ಎಲ್ಲವನ್ನೂ ಮಾಡಬೇಕು, ಗಂಡನೇ ಹೊರಗಿನ ಕೆಲಸ ಮಾಡಬೇಕು ಎಂಬ ಧೋರಣೆ ಇರಬಾರದು. ಇಬ್ಬರೂ ಸಮಾನವಾಗಿ ಕೆಲಸ ಹಂಚಿಕೊಳ್ಳಬೇಕು.
 
ಇಷ್ಟ ಕಷ್ಟಕ್ಕೆ ಕಿವಿಗೊಡದಿರುವುದು
ಕೆಲವೊಮ್ಮೆ ನಮಗೆ ಇಷ್ಟವಿಲ್ಲದಿದ್ದರೂ ಸಂಗಾತಿಗಾಗಿ ಕೆಲವು ಕೆಲಸಗಳನ್ನು ಮಾಡಲೇಬೇಕಾಗುತ್ತದೆ. ಎಷ್ಟೇ ಆದರೂ ಗಂಡನಿಗೆ ಹೆಂಡತಿ, ಹೆಂಡತಿಗೆ ಗಂಡನೇ ಅಲ್ವಾ ಜತೆಯಾಗೋದು?
 
ಹಣಕಾಸು ವಿಚಾರ
ಹಣಕಾಸಿನ ವಿಚಾರದಲ್ಲಿ ಹುಷಾರಾಗಿರಿ. ಎಚ್ಚರಿಕೆಯಿಂದ ಬಳಸಿ. ಹಾಗೆಯೇ ಅತಿಯಾಗಿ ಸಂಗಾತಿಯ ಮೇಲೆ ಹಣಕಾಸಿನ ವಿಚಾರಕ್ಕೆ ಅವಲಂಬನೆಯೂ ಬೇಡ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಚಳಿಗಾಲದಲ್ಲಿ ಈ ವಸ್ತುಗಳನ್ನು ಬಳಸಲೇಬೇಡಿ ನಿಮ್ಮ ಮುಖ ಕಪ್ಪಾಗುತ್ತದೆ!

ಬೆಂಗಳೂರು : ಚಳಿಗಾಲದಲ್ಲಿ ಮುಖ ಡ್ರೈ ಮತ್ತು ರಫ್‌ ಆಗುತ್ತದೆ. ಈ ಸಮಯದಲ್ಲಿ ನಿಮ್ಮ ಮುಖದಲ್ಲಿ ಡ್ರೈನೆಸ್‌ ...

news

ಅಡುಗೆಗೆ ಉಪ್ಪು ಜಾಸ್ತಿಯಾದರೆ ತಲೆಬಿಸಿ ಮಾಡ್ಕೋಬೇಡಿ; ಈ ವಿಧಾನ ಅನುಸರಿಸಿ

ಬೆಂಗಳೂರು : ಅಡುಗೆಗೆ ಸೇರಿಸಿದ ಎಲ್ಲಾ ಪದಾರ್ಥಗಳು ಸಮಪ್ರಮಾಣದಲ್ಲಿ ಇದ್ದರೆ ಮಾತ್ರ ಅದರ ರುಚಿ ...

news

ಗರ್ಭಿಣಿಯರೇ ವಾಂತಿಯಿಂದ ನರಳುತ್ತಿದ್ದಿರಾ...? ಇಲ್ಲಿದೆ ನೋಡಿ ಅದಕ್ಕೊಂದು ಸರಳ ಪರಿಹಾರ

ಬೆಂಗಳೂರು : ಹೆಚ್ಚಿನ ಮಹಿಳೆಯರು ಗರ್ಭಾವಸ್ಥೆಯಲ್ಲಿ ಅತಿಯಾದ ವಾಂತಿಯಿಂದ ನರಳುತ್ತಾರೆ. ಇದರಿಂದ ಅವರಿಗೆ ...

news

ರುಚಿ ರುಚಿಯಾದ ಬೀಟ್ ರೂಟ್ ರಸಂ ಸವಿದಿದ್ದೀರಾ...?

ಬೆಂಗಳೂರು : ಬೀಟ್ ರೂಟ್ ಸಾಂಬಾರ್, ಪಲ್ಯ, ಹಲ್ವಾ ಇವೆಲ್ಲ ಮಾಮೂಲು. ಡಿಫರೆಂಟ್ ಆಗಿ, ಟೇಸ್ಟಿಯಾಗಿರೋ ಬೀಟ್ ...

Widgets Magazine
Widgets Magazine