ಬಂಜೆತನಕ್ಕೆ ಇದು ಕೂಡ ಒಂದು ಕಾರಣವಂತೆ!

ಬೆಂಗಳೂರು, ಗುರುವಾರ, 8 ಫೆಬ್ರವರಿ 2018 (07:34 IST)

ಬೆಂಗಳೂರು : ಇತ್ತೀಚಿನ ಸಿಕ್ಕಾಪಟ್ಟೆ ಬ್ಯುಸಿ ಲೈಫ್ ನಲ್ಲಿ ಅಡುಗೆ ಮಾಡೋದಕ್ಕೆ ಪುರುಸೊತ್ತು  ಇಲ್ಲದಿರಬೇಕಾದ್ರೆ ತರಕಾರಿ ಮತ್ತು ಹಣ್ಣುಗಳನ್ನ ಮೂರು ಮೂರು ಸಲ ತೊಳೀಲಿಕ್ಕೆ ಟೈಮ್ ಎಲ್ಲಿ ಅಂತ ಸರಿಯಾಗಿ ವಾಶ್ ಮಾಡ್ದೆ ಅದನ್ನ ಸೇವಿಸೋವ್ರು ಜಾಗ್ರತೆಯಾಗಿರಿ. ಯಾಕಂದ್ರೆ ಈ ರೀತಿ ಮಾಡೋದ್ರಿಂದ ಬಂಜೆತನ ನಿಮ್ಮನ್ನ ಕಾಡಬಹುದು ಎಂದು ಸಂಶೋಧನೆಯಿಂದ ತಿಳಿದುಬಂದಿದೆ.

 
ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನಡೆದ ಸಂಶೋಧನೆಯ ಪ್ರಕಾರ ಸರಿಯಾಗಿ ತೊಳೆಯದ  ತರಕಾರಿ ಹಣ್ಣುಗಳನ್ನು ಸೇವಿಸಿದ್ದಲ್ಲಿ ಅದರಲ್ಲಿ  ಇರುವ ಪೆಸ್ಟಿಸೈಡ್ ಗಳು ದೇಹದಲ್ಲಿ ಹಾರ್ಮೋನ್ ಗಳ ಏರಿಳಿತವನ್ನು ಉಂಟುಮಾಡುತ್ತವೆ. ಇದರಿಂದ ಸಂತಾನೋತ್ಪತ್ತಿ ಕಡಿಮೆಯಾಗಿ ಮಕ್ಕಳಾಗುವ  ಸಾಧ್ಯತೆಗಳು ಕ್ಷೀಣಿಸುತ್ತವೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಪುರುಷರಲ್ಲಿ ಪೆಸ್ಟಿಸೈಡ್ ಯುಕ್ತ ಸೇವಿಸುವವರಲ್ಲಿ ವೀರ್ಯಾಣುಗಳ ಸಂಖ್ಯೆ ಕುಂಠಿತಗೊಂಡಿರುವುದು ಬೆಳಕಿಗೆ ಬಂದಿತು. ಆದರಿಂದ ಪೆಸ್ಟಿಸೈಡ್ ಯುಕ್ತ ಆಹಾರ ಪದಾರ್ಥಗಳು ಡೈರೆಕ್ಟ್ ಆಗಿ ಹಾನಿಯನ್ನು ಉಂಟುಮಾಡದಿದ್ದರೂ ದೇಹಕ್ಕೆ ಅದರಲ್ಲೂ ಗರ್ಭಧಾರಣೆಗೆ ಹಾನಿಯನ್ನುಂಟುಮಾಡುತ್ತದೆ ಎಂಬುದು ಈ  ಸಂಶೋಧನೆಯಿಂದ ದೃಢಪಟ್ಟಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮುಟ್ಟಿನ ದಿನಗಳ ಸೆಕ್ಸ್ ನಿಂದ ಗರ್ಭಿಣಿಯಾಗುವ ಸಾಧ್ಯತೆಯಿದೆಯೇ?!

ಬೆಂಗಳೂರು: ಸಾಮಾನ್ಯವಾಗಿ ಅಂಡಾಣು ಬಿಡುಗಡೆಯಾಗುವ ಹಂತದಲ್ಲಿ ಸೆಕ್ಸ್ ನಡೆಸಿದರಷ್ಟೇ ಗರ್ಭಿಣಿಯಾಗಬಹುದು ...

news

ಆಂಟಿ ಬಯೋಟಿಕ್ ಸೇವಿಸುತ್ತಿದ್ದರೆ ಈ ಆಹಾರಗಳನ್ನು ಸೇವಿಸಲೇಬಾರದು!

ಬೆಂಗಳೂರು: ಆಂಟಿ ಬಯೋಟಿಕ್ ಔಷಧಗಳನ್ನು ಸೇವಿಸುವಾಗ ದೇಹ ವೀಕ್ ಅದಂತೆ ಅನಿಸುತ್ತದೆ. ಹಾಗಂತ ಸಿಕ್ಕ ಸಿಕ್ಕ ...

news

ಚಳಿಗಾಲದಲ್ಲಿ ತುಟಿ ಒಡೆದು ರಕ್ತ ಬರುವುದನ್ನು ತಡೆಯಲು ಈ ರೀತಿ ಆರೈಕೆ ಮಾಡಿ

ಬೆಂಗಳೂರು : ಸುಂದರ ತುಟಿ ಜನರನ್ನು ಆಕರ್ಷಿಸುತ್ತದೆ. ಆದರೆ ಚಳಿಗಾಲದಲ್ಲಿ ಚರ್ಮದ ಜೊತೆಗೆ ತುಟಿಗಳು ...

news

ಹುಚ್ಚು ನಾಯಿ ಕಡಿತಕ್ಕೆ ಈ ರೀತಿಯಲ್ಲಿ ಪ್ರಥಮ ಚಿಕಿತ್ಸೆ ಮಾಡಿ ರೇಬಿಸ್ ರೋಗದಿಂದ ಪಾರಾಗಿ

ಬೆಂಗಳೂರು : ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ, ಅಂಚೆಯವರಿಗೆ, ಪತ್ರಿಕೆ ಹಾಕುವ ಹುಡುಗರಿಗೆ, ...

Widgets Magazine
Widgets Magazine