ಮುಖ ಬೆಳ್ಳಗಾಗಲು ಹಾಗೂ ಕೂದಲ ಬಣ್ಣ ಕಪ್ಪಾಗಲು ಇವೆರಡಕ್ಕೂ ಒಂದೇ ಮನೆಮದ್ದು ಇದು

ಬೆಂಗಳೂರು, ಬುಧವಾರ, 10 ಅಕ್ಟೋಬರ್ 2018 (13:42 IST)

ಬೆಂಗಳೂರು : ನಿಮ್ಮ ಕೂದಲಿಗೆ ಮತ್ತು ನಿಮ್ಮ ಚರ್ಮಕ್ಕೆ ಉತ್ತಮ ಆರೋಗ್ಯವನ್ನು ನೀಡುವುದರಲ್ಲಿ ನೆಲ್ಲಿಕಾಯಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಇದು ನಿಮ್ಮ ಕೂದಲನ್ನು ಕಪ್ಪಾಗಿ ಮಾಡುತ್ತದೆ ಮತ್ತು ದಪ್ಪ ಮಾಡುತ್ತದೆ. ಅದರ ಜೊತೆಗೆ ನಿಮ್ಮ ಮುಖವನ್ನು ಬೆಳ್ಳಗೆ ಹಾಗುವಂತೆ ಮಾಡುತ್ತದೆ .ಇದನ್ನು ಬಳಸುವುದು ಹೇಗೆ ಅನ್ನೋದು ಇಲ್ಲಿದೆ ನೋಡಿ.


ನೆಲ್ಲಿಕಾಯಿಯನ್ನು ಗ್ರೈಂಡ್‌ ಮಾಡಿ ಪೇಸ್ಟ್ ತಯಾರಿಸಿ ಅದನ್ನು ನೀರಿನೊಂದಿಗೆ ಮಿಕ್ಸ್‌ ಮಾಡಿ ಕೂದಲಿಗೆ ಹಚ್ಚಿ. ಹೀಗೆ ವಾರಕ್ಕೊಮ್ಮೆ ಮಾಡೋದರಿಂದ ಕೂದಲು ಉದುರುವುದು, ತಲೆಹೊಟ್ಟು ಸಮಸ್ಯೆ ಕಡಿಮೆಯಾಗುತ್ತದೆ.


ನೆಲ್ಲಿಕಾಯಿಯನ್ನುಒಣಗಿಸಿ ಇದರ ಹುಡಿ ತಯಾರಿಸಿ ಒಂದು ಡಬ್ಬದಲ್ಲಿ ಹಾಕಿಡಿ, ಅಗತ್ಯವಿದ್ದಾಗ ಅದಕ್ಕೆ ಸ್ವಲ್ಪ ನೀರು ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ಮುಖ ಬಿಳಿಯಾಗುತ್ತದೆ.


ಮೂರು ಚಮಚ ನೆಲ್ಲಿಕಾಯಿ ಹುಡಿಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ. ಇದನ್ನು ಕೂದಲಿನ ಬುಡಕ್ಕೆ ಹಚ್ಚೋದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.-


ನೆಲ್ಲಿಕಾಯಿ ಜ್ಯೂಸ್‌ನ್ನು ಅಲವೇರಾ ಜ್ಯೂಸ್ ಅಥವಾ ಮುಳ್ಳು ಸೌತೆ ರಸದ ಜೊತೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚೋದರಿಂದ ಮುಖ ಬೆಳ್ಳಗಾಗುತ್ತದೆ. ಜೊತೆಗೆ ಪಿಂಪಲ್ಸ್ ನಿವಾರಣೆಯಾಗುತ್ತದೆ. ಮುಖಕ್ಕೆ ನೆಲ್ಲಿಕಾಯಿ ಜ್ಯೂಸ್ ಬಳಸೋವಾಗ, ತಾಜಾ ನೆಲ್ಲಿಕಾಯಿ ಜ್ಯೂಸ್‌ನ್ನೇ ಬಳಸಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸಿಹಿಗೆಣಸಿನ ಪಾಯಸ

ಮೊದಲು ಕುಕ್ಕರಿನಲ್ಲಿ ಹೆಚ್ಚಿದ ಗೆಣಸು, ಸ್ವಲ್ಪ ನೀರು ಮತ್ತು ಚಿಟಿಕೆ ಉಪ್ಪು ಹಾಕಿ ಗೆಣಸನ್ನು ...

news

ವೆಜಿಟೇಬಲ್ ಸೂಪ್

ನಮ್ಮ ದೇಹ ಆರೋಗ್ಯವಾಗಿರಬೇಕು ಎಂದರೆ ಸಾಕಷ್ಟು ಪೋಷಕಾಂಶಗಳು ನಮಗೆ ಸಿಗಬೇಕು ಇದು ನಾವು ತಿನ್ನುವ ಆಹಾರದಿಂದ ...

news

ಪಾಲಾಕ್ ಪನೀರ್ ರೋಲ್

ಪನೀರ್ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ!!! ಅದರಲ್ಲಿಯೂ ಪಾಲಾಕ್ ಪನೀರ್ ರೋಲ್ ಒಂದು ಒಳ್ಳೆಯ ಕಾಂಬಿನೇಷನ್. ...

news

ಈರುಳ್ಳಿ ರಾಗಿ ರೊಟ್ಟಿಯನ್ನು ಮಾಡಿ ನೋಡಿ...

ರಾಗಿಯು ಆರೋಗ್ಯಕ್ಕೆ ತುಂಬಾ ಹಿತವಾದ ಧಾನ್ಯವಾಗಿದೆ. ಆದರೆ ಅದನ್ನು ಅಕ್ಕಿಯಂತೆ ಹೆಚ್ಚಾಗಿ ಬಳಸುವುದಿಲ್ಲ. ...

Widgets Magazine
Widgets Magazine