ರಕ್ತಹೀನತೆಯಿಂದ ಬಳಲುತ್ತಿರುವವರು ಈ ಆಹಾರವನ್ನು ಸೇವಿಸಿ

ಬೆಂಗಳೂರು, ಸೋಮವಾರ, 11 ಫೆಬ್ರವರಿ 2019 (06:34 IST)

ಬೆಂಗಳೂರು : ದೇಹದಲ್ಲಿ ರಕ್ತ ಕಡಿಮೆಯಾದಾಗ ಆರೋಗ್ಯ ಕೆಡುತ್ತದೆ. ವ್ಯಕ್ತಿಗೆ ಸುಸ್ತು, ಆಯಾಸವಾಗುತ್ತದೆ. ರಕ್ತಹೀನತೆಯನ್ನು ತಡೆಗಟ್ಟಲು ಕಬ್ಬಿಣಾಂಶವಿರುವಂತಹ ಆಹಾರಗಳನ್ನು ಸೇವಿಸಬೇಕು. ಅಂತಹ ಪದಾರ್ಥಗಳು ಯಾವುದೆಂಬುದನ್ನು ನೋಡೋಣ.

ದಾಳಿಂಬೆ : ಇದು ರಕ್ತ ಹೀನತೆಯಿಂದ ಬಳಲುತ್ತಿರುವವರಿಗೆ ಸೂಕ್ತವಾದ ಮದ್ದು. ಇದು ಕಬ್ಬಿಣ, ಕ್ಯಾಲ್ಸಿಯಂ, ಫೈಬರ್ ಮತ್ತು ಮೆಗ್ನೀಶಿಯಂನಂತಹ ಅನೇಕ ಖನಿಜಾಂಶವನ್ನು ಹೊಂದಿದೆ. ದಾಳಿಂಬೆಯನ್ನು ನಿಯಮಿತವಾಗಿ ಸೇವಿಸುವುದರಿಂದ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು.

 

ಪಾಲಾಕ್ : ಸಾಮಾನ್ಯವಾಗಿ ಸೊಪ್ಪುಗಳಲ್ಲಿ ಪಾಲಾಕ್ ಬಹಳಾನೇ ಉಪಯುಕ್ತವಾದುದಾಗಿದೆ. ಇದರಲ್ಲಿ ಕಬ್ಬಿಣದ ಅಂಶ ಯಥೇಚ್ಛವಾಗಿದ್ದು, ಫೈಬರ್, ಕ್ಯಾಲ್ಸಿಯಂ ಮತ್ತು ಬೀಟಾ-ಕ್ಯಾರೊಟಿನ್ ಅಂಶವು ಸಮೃದ್ಧವಾಗಿದೆ.

 

ನಟ್ಸ್ : ಡ್ರೈ ಫ್ರೂಟ್ಸ್ ಗಳನ್ನು ಸಾಮಾನ್ಯವಾಗಿ ಹೆಚ್ಚಿಗೆ ಯಾರೂ ಉಪಯೋಗಿಸುವುದಿಲ್ಲ. ಆದರೆ, ಇದರಲ್ಲಿ ಕಬ್ಬಿಣಾಂಶ ಯಥೇಚ್ಛವಾಗಿ ಲಭಿಸುತ್ತದೆ. ಬಾದಾಮಿ, ಪಿಸ್ತಾ, ವಾಲ್ನಟ್ಸ್ ಗಳಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚಿಸುವಲ್ಲಿ ಗುಣವಿರುವುದರಿಂದ ಪ್ರತಿದಿನ ಸೇವಿಸಬಹುದು.

 

ಬೀಟ್ ರೂಟ್ : ಇದು ದೇಹಕ್ಕೆ ಬೇಕಾದ ಕೆಂಪು ರಕ್ತ ಕಣಗಳನ್ನು ಸಕ್ರಿಯಗೊಳಿಸುವಲ್ಲಿ ಸಹಾಯ ಮಾಡುತ್ತದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 

 



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಬಾಯಿ ಹುಣ್ಣು ಬೇಗ ವಾಸಿಯಾಗಲು ಇದನ್ನು ಹಚ್ಚಿ

ಬೆಂಗಳೂರು : ದೇಹದ ಉಷ್ಣತೆ ಹೆಚ್ಚಾದಾಗ ಬಾಯಿಯಲ್ಲಿ ಹುಣ್ಣುಗಳಾಗುತ್ತದೆ. ಇದು ತುಂಬಾ ...

news

ಪಾದದ ಉರಿಯಿಂದ ನಡೆಯಲು ಕಷ್ಟವಾಗುತ್ತಿದೆಯಾ? ಹಾಗಾದ್ರೆ ಈ ಮನೆಮದ್ದನ್ನು ಬಳಸಿ

ಬೆಂಗಳೂರು : ಕೆಲವರಿಗೆ ಇದ್ದಕ್ಕಿದ್ದಂತೆ ಪಾದಗಳಲ್ಲಿ ಉರಿ ಕಾಣಿಸುತ್ತದೆ. ಈ ಉರಿಯಿಂದ ನಡೆದಾಡಲು ...

news

ಕಣ್ಣಿನಲ್ಲಿ ಪದೇ ಪದೇ ನೀರು ಸುರಿಯುತ್ತಿದ್ದರೆ ಈ ಮನೆಮದ್ದನ್ನು ಬಳಸಿ ಸಮಸ್ಯೆಯನ್ನು ದೂರಮಾಡಿಕೊಳ್ಳಿ

ಬೆಂಗಳೂರು : ಹೆಚ್ಚಿನವರಿಗೆ ಯಾವುದಾದರೂ ವಸ್ತುವನ್ನು ನೋಡುವಾಗ ಕಣ್ಣಿನಿಂದ ನೀರು ಬರುತ್ತದೆ. ಹಾಗೇ ಪದೇ ...

news

ಪಾರ್ಶ್ವವಾಯು ಸಮಸ್ಯೆಯಿಂದ ಬೇಗ ಗುಣಮುಖರಾಗಬೇಕೆಂದರೆ ಈ ಮನೆಮದ್ದನ್ನು ಬಳಸಿ

ಬೆಂಗಳೂರು : ವಯಸ್ಸಾದ ನಂತರ ಕೆಲವರಿಗೆ ಪಾರ್ಶ್ವವಾಯು ಸಮಸ್ಯೆ ಉಂಟಾಗುತ್ತದೆ. ಇದರಿಂದ ಅವರು ಕೈಕಾಲಿನ ...