ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿಂದು ನೋಡಿ...

ಶುಕ್ರವಾರ, 26 ಆಗಸ್ಟ್ 2016 (10:33 IST)

ಸಾವಿರಾರು ವರ್ಷದಿಂದ ಬೆಳ್ಳುಳ್ಳಿ ನಮ್ಮ ಅಡುಗೆಗಳಲ್ಲಿ ಪ್ರಮುಖ ಸಾಂಬಾರ್ ಪದಾರ್ಥವಾಗಿ ಉಪಯೋಗಿಸಲ್ಪಡುತ್ತಿದೆ. ನಮ್ಮ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪೂರಕವಾಗಿರುವ ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಏನೆಲ್ಲ ಪ್ರಯೋಜನಗಳುಂಟು ಗೊತ್ತೇ? ಮುಂದೆ ಓದಿ..

ಪ್ರತಿದಿನ 1 ಸೇಬು ತಿನ್ನಿ, ವೈದ್ಯರಿಂದ ದೂರವಿರಿ ಎಂದು ಹೇಳುವಂತೆ ಪ್ರತಿ ದಿನ ಬೆಳ್ಳುಳ್ಳಿ ಬಳಸಿ ಆರೋಗ್ಯವಾಗಿರಿ ಎಂದು ಹೇಳುತ್ತದೆ ಆಯುರ್ವೇದ ಶಾಸ್ತ್ರ. 
 
ಕೆಲವರು ಬೆಳ್ಳುಳ್ಳಿಯನ್ನು ತಿನ್ನುವುದೇ ಇಲ್ಲ. ಆರೋಗ್ಯದ ದೃಷ್ಟಿಯಿಂದ ಇದು ಸರಿಯಲ್ಲ. ಪ್ರತಿದಿನ ಎರಡು- ಮೂರು ಎಸಳು ಬೆಳ್ಳುಳ್ಳಿ ನುಂಗುವ ಅಭ್ಯಾಸ ಬೆಳೆಸಿಕೊಳ್ಳಿ. ಕಚ್ಚಿ ತಿನ್ನಲಾಗದಿದ್ದರೆ ಅರ್ಧ ಮಾಡಿ ನುಂಗಿ ನೀರು ಕುಡಿಯಿರಿ.
 
ಹೀಗೆ ಮಾಡುವುದರಿಂದ,
 
*ರಕ್ತ ಶುದ್ಧಿಯಾಗುತ್ತದೆ. 
 
* ಮುಖದ ಮೇಲಿನ ಮೊಡವೆ, ಕಲೆಗಳು ಮಾಯವಾಗುತ್ತವೆ.
 
* ಹೃದಯ ಸಂಬಂಧಿ ಕಾಯಿಲೆಗಳಿಂದ ಮುಕ್ತಿ
 
*ವಾಯುಬಾಧೆ, ಅಲರ್ಜಿಯಂತಹ ಸಮಸ್ಯೆಗಳಿಗೆ ರಾಮಬಾಣ.
 
* ಇದು ಹಲ್ಲುನೋವಿಗೆ ಪರಿಣಾಮಕಾರಿ ಔಷಧಿಯಾಗಿ ಕೆಲಸ ಮಾಡುತ್ತದೆ.
 
*ಉದರ ಸಂಬಂಧಿ ಕಾಯಿಲೆಗಳನ್ನು ದೂರ ಮಾಡುತ್ತದೆ. 
 
*ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸಹಕಾರಿ.
 
*ನರವ್ಯಾಧಿಯನ್ನು ದೂರ ಮಾಡುತ್ತದೆ. 
 
* ಕೊಬ್ಬಿನ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.
 
*ಹಸಿವನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ
 
*ಉಸಿರಾಟದ ತಂತ್ರವನ್ನು ಗಟ್ಟಿಗೊಳ್ಳಿಸುತ್ತದೆ.
 
* ಬಿಕ್ಕಳಿಕೆ ತೊಂದರೆಗೆ ಮುಕ್ತಿ
 
ಆದರೆ ಹೆಚ್ಚು ಬೆವವರುವವರು ಬೆಳ್ಳುಳ್ಳಿಯನ್ನು ಕಡಿಮೆ ಸೇವಿಸಿ. ಅತಿಯಾದ ಬೆಳ್ಳುಳ್ಳಿ ಸೇವನೆಯಿಂದ ಬೆವರು ದುರ್ಗಂಧಮಯವಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಕಿಡ್ನಿ ಕಲ್ಲು ಕರಗಿಸಲು ಕರಿಬೇವು

ಕಿಡ್ನಿ ಆರೋಗ್ಯದ ಸಮಸ್ಯೆಗೆ ಮುನ್ನೆಚ್ಚರಿಕೆ ಕ್ರಮ ತಗೆದುಕೊಳ್ಳಬೇಕು... ಕಿಡ್ನಿಯದ ಆರೋಗ್ಯದ ಕಡೆಗೆ ಗಮನ ...

news

ಡೆಂಗ್ಯೂ ಜ್ವರಕ್ಕೆ ಪರಿಣಾಮಕಾರಿ ಮನೆ ಮದ್ದು

ಡೆಂಗ್ಯೂ ಫಿವರ್ ಎಲ್ಲಾ ಕಾಲದಲ್ಲೂ ಎಲ್ಲೆಡೆ ಸಾಮಾನ್ಯವಾಗಿ ಕಾಡುವ ಕಾಯಿಲೆ. ಇದ್ದಕ್ಕಿದಂತೆ ದೇಹವನ್ನು ...

ನೈಸರ್ಗಿಕ ಔಷಧಿ. ಹಲವು ಸಮಸ್ಯೆಗಳ ರಾಮಬಾಣ ಆಪಲ್.. ವಿಡಿಯೋ

ಈ ಔಷಧಿಯನ್ನು ಅತ್ಯುತ್ತಮ ಆರೋಗ್ಯಕರ ಔಷಧಿ ಅಂತ ಹೇಳಲಾಗುತ್ತದೆ. ಇದರಿಂದ ಹಲವು ಆರೋಗ್ಯದ ಉಪಯೋಗಗಳು ...

news

ಸರಿಯಾಗಿ ನಿದ್ದೆ ಬರುತ್ತಿಲ್ಲವೇ?.. ಇದನ್ನು ಓದಿ

ಸರಿಯಾಗಿ ನಿದ್ದೆ ಬರುತ್ತಿಲ್ಲವೇ?.. ನಿದ್ದೆ ಯಾಕೆ ಬರುತ್ತಿಲ್ಲ ಎಂದು ಯೋಚನೆ ಮಾಡುತ್ತಿದ್ದೀರಾ. ಆದ್ರೆ ...